ಪುಟ:ಬೆಳಗಿದ ದೀಪಗಳು.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೨

ಸಂಪೂರ್ಣ-ಕಥೆಗಳು

ಪೇರೂ ದೇಶದ ಪರ್ಯಟನೆಗೆ ಹೊರಟ ಹಡಗದ ಮೇಲೆ ಇವನೊಬ್ಬ ಅಧಿಕಾರಿಯಾಗಿ ನಿಯುಕ್ತನಾದನು. ಈ ಹಡಗದ ಮೇಲೆ ಅಲ್ಮಾಗ್ರೋ ಹಾಗೂ ಲ್ಯೂಕ ಎಂಬಿಬ್ಬರು ಬೇರೆ ಅಧಿಕಾರಿಗಳಾದರೂ ಇದ್ದರು. ಎರಡು ಹಡಗಗಳನ್ನೂ ಹಾಗೂ ಹೀಗೂ ಮಾಡಿ ನೂರು ನಾವಿಕರನ್ನೂ ಕೂಡಿಹಾಕಿ ಪಿಝಾರೋನು ಸೇರ ದೇಶದ ಶೋಧಾರ್ಥವಾಗಿ ಪ್ರಯಾಣ ಮಾಡಿದನು. ಈ ಮೊದಲನೆಯ ಪರ್ಯಟನದಲ್ಲಿ ಏರುನ ಮಜಲು ಪೇರೂ ದೇಶದ ಸೀಮೆಯನ್ನು ಕೂಡ ಮುಟ್ಟಲಿಲ್ಲ. ಪೇರೂ ದೇಶದ ಸೀಮೆಯು ಹತ್ತುವದರಕಿಂತ ಮುಂಚಿತವಾಗಿ, ಪನಾಮಾ ಸಂಯೋಗಭೂಮಿಯ ದಕ್ಷಿಣದಿಕ್ಕಿನಲ್ಲಿ, ನೂರಾರು ಮೈಲುಗಳ ವರೆಗಿನ ಸಾಸಿಫಿಕ ಮಹಾಸಾಗರದ ದಂಡೆಯು ಅರಣ್ಯಗಳಿಂದಲೂ, ಜವಳು ಪ್ರದೇಶದಿಂದ ವ್ಯಾಪ್ತವಾಗಿದೆ. ಈ ಪ್ರದೇಶದೊಳಗಿನ ಜನರಾದರೂ ತೀರ ಕಾಡು ಸ್ಥಿತಿಯಲ್ಲಿರುತ್ತಾರೆ. ಹಾಗೂ ಈ ದಂಡೆಯ ಹತ್ತರದಲ್ಲಿರುವ ಸಮುದ್ರದೊಳಗಿನ ಚಿಕ್ಕ ಚಿಕ್ಕ ನಡುಗಡ್ಡೆಗಳೊಳಗಿನ ಹವೆಯಾದರೂ ದಂಡೆಯ ಮೇಲಿನ ಹವೆಯಂತೆ ರೋಗೋತ್ಪಾದಕವಾಗಿರುವದಲ್ಲದೆ ವಿಷಮಯವಾಗಿದೆ. ಪಿಝಾರೋನು ಈ ದಂಡೆಯ ಹತ್ತರ ತನ್ನ ಹಡಗವನ್ನು ನಿಲ್ಲಿಸಿ, ಕೈ ಕೆಳಗಿನ ಕೆಲವು ಜನರನ್ನು ತನ್ನ ಜೊತೆಯಲ್ಲಿ ತೆಗೆದುಕೊಂಡು, ಮನುಷ್ಯರ ವಸ್ತಿಯು ಎಲ್ಲಿಯಾದರೂ ಇರುವದೇನೆಂಬದರ ಶೋಧವನ್ನು ಮಾಡಹತ್ತಿದನು; ಆದರೆ ಆ ಪ್ರಾಂತದೊಳಗಿನ ಜನರು ಕಾಡು ಹಾಗೂ ಅಡ್ಡಾಡಿಗಳಾಗಿರುವದಲ್ಲದೆ ನರಮಾಂಸ ಭಕ್ಷಕರಾಗಿರುವರೆಂದು ಅವನು ಕಂಡುಕೊಂಡನು. ಈ ಪ್ರಾಂತದೊಳಗಿನ ರೋಗೋತ್ಪಾದಕ ಹಾಗೂ ಏಷಮಯವಾದ ಹವೆಯಿಂದ, ಅವನ ಸಂಗಡಿಗರು ತೀರ ಹಣ್ಣಿಗೆ ಬಂದು, ಪೇರ ದೇಶದ ಶೋಧದ ಉಸಾಬರಿಯನ್ನು ಬಿಟ್ಟು ಕೊಟ್ಟು ಬಂದ ಹಾದಿಯಿಂದ ಮರಳಿ ಪಾನಾಮಕ್ಕೆ ಹೋಗಬೇಕೆಂದು ಪ್ರತಿಯೊಬ್ಬನೂ ಹಟ ಹಿಡಿಯಹತ್ತಿದನು. ಯಾವ ಕಾರ್ಯವನ್ನು ಸಾಧ್ಯ ಮಾಡಿಕೊಳ್ಳದೆ ಹಿಂದಿರುಗಿ ಹೋಗಿ ಎಲ್ಲರ ಛೀ ಥೂಗಳಿಗೆ ಗುರಿಯಾಗುವದಕ್ಕಿಂತ ಕ್ಷುಧೆ ತೃಷೆಗಳಿಂದ ಸಮುದ್ರದಲ್ಲಿ ಸಾಯುವದು ಲೇಸಾದದ್ದೆಂದು ಪಿಝಾರೋನ ಸಂಕಲ್ಪವಾಗಿದ್ದರಿಂದ, ಮರಳಿ ಹೋಗುವದಕ್ಕೆ ಒಪ್ಪಿಕೊಳ್ಳದೆ ಅವನು ಎಷ್ಟೋ ತಿಂಗಳಗಳ ವರೆಗೆ ಒಂದು ನಡುಗಡ್ಡೆಯಲ್ಲಿ ತಳವನ್ನೂರಿಕೊಂಡು ನಿಂತನು.