ಪುಟ:ಬೆಳಗಿದ ದೀಪಗಳು.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೪೦

ಪೇರೂದಂಥ ಸುವರ್ಣಭೂಮಿಯ ಶೋಧಹಚ್ಚುವ ಕೆಲಸದಿಂದ ಪಾಙ್ಮುಖವಾಗುವಂಥ ಹೇಡಿಗಳು ಸ್ಪಾನಿಆರ್ಡರು ಆಗಿದ್ದಿಲ್ಲ. ಪಾಸಿಫಿಕ ಮಹಾಸಾಗರದಲ್ಲಿ ಪರ್ಯಟನವನ್ನು ಮಾಡುವದಕ್ಕಾಗಿ ಮತ್ತೊಂದು ಹಡಗವನ್ನು ಕಳಿಸತಕ್ಕದ್ದೆಂದು ಸ. ೧೫೨೪ರಲ್ಲಿ ಗೊತ್ತು ಮಾಡಲ್ಪಟ್ಟಿತು. ಶೂರನೂ, ಸಾಹಸಿಯ, ದೃಢನಿಶ್ಚಯೂ, ಸಂಕಟಕ್ಕೆ ಅಭಿಮುಖವಾಗಿ ನಿಲ್ಲುವವನೂ ಎಂದು ಪ್ರಸಿದ್ಧಿಯನ್ನು ಹೊಂದಿದ್ದ ಪಿಝಾರೋ ಎಂಬ ಸರದಾರನು ಈ ಹಡಗದ ಕ್ಯಾಪ್ಟನನಾಗಿ ನೇಮಿಸಲ್ಪಟ್ಟನು. ಒತ್ತಾರೆನು ಈ ಕಾಲಕ್ಕೆ ೫೨-೫೩ ವರ್ಷ ವಯಸ್ಸುಳ್ಳವನಾಗಿದ್ದರೂ ೩೦-೩೫ ವರ್ಷದ ತಾರುಣ್ಯದ ಭರದಲ್ಲಿರುವ ವೀರಪುರುಷನ ಉತ್ಸಾಹವು ಅವನಲ್ಲಿ ತುಂಬಿತುಳುಕುತ್ತಿತ್ತು. ಪಿಝಾರೋನು ತನ್ನ ತಂದೆ ತಾಯಿಗಳ ಔರ ಸಪುತ್ರನಾಗಿರದೆ, ಕಾನೀನ ಪುತ್ರನಾಗಿದ್ದನು. ಚಿಕ್ಕಂದಿನಲ್ಲಿ ಅವನಿಗೆ ಶಿಕ್ಷಣದ ಗಂಧವಾದರೂ ಇದ್ದಿದಿಲ್ಲ. ತಂದೆತಾಯಿಗಳಿಂದ ತ್ಯಜಿಸಲ್ಪಟ್ಟಂಥ ಅನಾಥ ಬಾಲಕರ ಸಲುವಾಗಿ ಸ್ಥಾಪಿಸಲ್ಪಟ್ಟದ್ದೊಂದು ಆಶ್ರಮದಲ್ಲಿ ಅವನು ದೊಡ್ಡವನಾಗಿದ್ದನು. ಅವನು ಹತ್ತು ಹದಿನೈದು ವರ್ಷದವನಾದಂದಿನಿಂದ ಎಷ್ಟೋ ವರ್ಷಗಳ ವರೆಗೆ ಕುರಿಗಳನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದನು. ಮುಂದೆ, ಅಮೇರಿಕಾ ಖಂಡದೊಳಗಿನ ಹೊಸ ಹೊಸ ಪ್ರದೇಶಗಳ ವರ್ಣನೆಗಳು ಸ್ಪೇನದಲ್ಲಿ ಹಬ್ಬಿಕೊಳ್ಳಹತ್ತಿದವು ಧೈರ್ಯವಂತರಿಗೂ ಸಾಹಸಗಾರರಿಗೂ ದ್ರವ್ಯ ಸಂಚಯವನ್ನು ಮಾಡುವದಕ್ಕೆ ಅಮೇರಿಕೆಯಲ್ಲಿರುವಂಥ ಸುಸಂಧಿಯು ಅನ್ಯತ್ರ ದೊರೆಯಲಾರದೆ೦ತಲೂ ಬಂಗಾರವೆಂದರೆ ಅಲ್ಲಿ ಕಃಪದಾರ್ಥವೆಂತಲೂ ಬಂಗಾರದ ರಾಶಿಗಳನ್ನು ಬೇಕಾದವರು ಎತ್ತಿಕೊಂಡು ಒಯ್ಯಬಹುದೆಂತಲೂ ಮುಂತಾದ ಸತ್ಯಾ ಸತ್ಯದ ಸುದ್ದಿಗಳು ಹೊಸ ಖಂಡದೊಳಗಿನ ಸಂಪತ್ತಿಯ ವಿಷಯವಾಗಿ ಹುಟ್ಟ ಹತ್ತಿದವು. ಪಿರಾರೋನ ಕಿವಿಗೆ ಈ ಸುದ್ದಿಗಳು ಬಿದ್ದ ಕೂಡಲೆ ಅವನು ಕುರಿಗಳನ್ನು ಕಾಯುವ ಕ್ಷುಲ್ಲಕ ಕಾರ್ಯವನ್ನು ಬಿಟ್ಟು ಕೊಟ್ಟು ತನ್ನ ವಯಸ್ಸಿನ ೨೫-೩೦ನೇ ವರ್ಷದ ಸುಮಾರಕ್ಕೆ ಸ್ಪೇನ ದೇಶಕ್ಕೆ ಶರಹೊಡೆದು ಅಮೇರಿಕೆಗೆ ಸಾಗಿದನು. ಪಾನಾಮಾ ಎಂಬ ಸ್ಪಾನಿಶ ವಸಹಾತಿಯಲ್ಲಿದ್ದ ಗವರ್ನರನ ಕೈಕೆಳಗೆ ಸೈನ್ಯದೊಳಗಿನ ಸಿಪಾಯಿಯ ಕೆಲಸವನ್ನು ಮಾಡಿ ಒಳ್ಳೆ ಹೆಸರು ಪಡೆದನು. ಮುಂದೆ ೧೫೨೪ನೇ ವರ್ಷದಲ್ಲಿ