ಪುಟ:ಬೆಳಗಿದ ದೀಪಗಳು.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ಸ೦ಪೂರ್ಣ-ಕಥೆಗಳು

ಆರ್ಡರಿಗೆ ಬಂಗಾರದ ಹುಚ್ಚು ಒಳಿತಾಗಿತ್ತು. ಹೊಸ ಹೊಸ ದೇಶಗಳು. ದೊರೆದ ಕೂಡಲೆ, ಅಲ್ಲಿ ಬಂಗಾರವು ಅಪಾರವಾಗಿ ದೊರೆಯುತ್ತದೇನೆಂಬದರ ವಿಷಯವಾಗಿ ಅವರು ವಿಚಕ್ಷಣೆಯನ್ನು ಮಾಡುತ್ತಿದ್ದರು. ಸ. ೧೫೧೧ನೇ ಇಸ್ವಿಯಲ್ಲಿ ವ್ಯಾಸೋ-ನನೇರ-ಡೀ-ಬಲ್ಬೋ ಆ ಎಂಬ ಸ್ಪಾನಿಶ ಗೃಹಸ್ಥನು ತದೇಶೀಯ ಅಮೇರಿಕನ ಜನರಿಂದ ಸಂಪಾದಿಸಿದ ಬಂಗಾರವನ್ನುತೂಗುತ್ತಿದ್ದನು. ಈ ಬಂಗಾರವು ೮-೧೦ ಶೇರುಗಳ ಕಿಂತ ಹೆಚ್ಚಿಗಿದ್ದಿದ್ದಿಲ್ಲ. ಆದರೆ, ಅವನು ಅದನ್ನು ತೂಗುವಾಗ ಗುಂಜಿಯಷ್ಟು ಕೂಡ ಹೆಚ್ಚು ಕಡಿಮೆಯಾಗದಂತೆ ಎಚ್ಚರಪಡುತ್ತಿದ್ದನು. ಆಗ್ಗೆ ಇದನ್ನೆಲ್ಲ ನೋಡುತ್ತ ಅಲ್ಲಿ ಕುಳಿದ್ದ ಒಬ್ಬ ತದ್ದೇಶೀಯ ಗೃಹಸ್ಥನು ಬಲ್ಲೋರೆನ ತಕ್ಕಡಿಯ ಮೇಲೆ ಕೈ ದೊಡೆದು ಅವನಿಗೆ ಅಂದದ್ದು: ಇಷ್ಟು ಬಂಗಾರದ ತೂಕವನ್ನಾದರೂ ಜೀನತನದಿಂದ ಮಾಡುವದು ? ಈ ಸಮುದ್ರದ ದಂಡಿಯ ದಕ್ಷಿಣಭಾಗದಲ್ಲಿ ಬಂಗಾಪ ರಾಶಿಗಳುಳ್ಳ ದೇಶಗಳಿರುವವು. ನಿಮಗೆ ಕಬ್ಬಿಣದ ಬೆಲೆಯಿದ್ದಷ್ಟು ಅವರಿಗೆ ಬಂಗಾರದ ಬೆಲೆಯಿರುವದು, ” ತದೇಶೀಯ ಸರದಾರನ ಈ ಭಾಷಣವು ಬಳ್ಳೋಳನಿಗೆ ಮೊಟ್ಟ ಮೊದಲು ಅತಿಶಯೋಕ್ತಿಯುಳ್ಳದ್ದಾಗಿ ತೋರಿತು. ಆದರೆ, ಕಬ್ಬಿಣದ ಬೆಲೆಯಿಂದ ಬಂಗಾರವು ಮಾರುತ್ತಿರುವ ಪ್ರದೇಶವು ಇದ್ದದ್ದಾಗಿದ್ದರೆ, ಅದರ ಶೋಧವನ್ನು ಹಚ್ಚಬೇಕೆಂಬ ಮನೀಷೆಯು ಸ್ಪಾನಿಶ ಜನರ ಮನಸ್ಸಿನಲ್ಲಿ ಸ್ವಾಭಾವಿಕವಾಗಿಯೆ ಹುಟ್ಟಿತು. ೧೫೨೨ನೇ ಇಸ್ವಿಯಲ್ಲಿ ಸ್ಪಾನಿಶ ಅಧಿಕಾರಿಗಳು ಪಾಸೂ ಆ೭-ಡೀ-ಆ೦ದಾಗೋಯಾ ಎಂಬವನ ಸಂಗಡ ಕೆಲವು ಹಡಗಗಳನ್ನೂ ಕೆಲವು ಜನರನ್ನೂ ಕೊಟ್ಟು ಪಾಸಿಫಿಕ ಮಹಾಸಾಗರದ ದಕ್ಷಿಣ ದಂಡೆಯ ಶೋಧಹಚ್ಚ ವದಕ್ಕೆ ಅವನನ್ನು ಕಳಿಸಿಕೊಟ್ಟರು. ಆದರೆ ಅಂದಾಗೋಯಾನ ಪರ್ಯಟನದಿಂದ ವಿಶೇಷವಾದ ಕಾರ್ಯ ನಿಷ್ಪತ್ತಿಯಾಗಲಿಲ್ಲ. ಯಾಕಂದರೆ, ಸಮುದ್ರದ ಮೇಲಿನ ಭಯಂಕರನಾದ ಬಿರುಗಾಳಿಯಿಂದಲೂ ದಂಡೆಯ ಮೇಲಿನ ರೋಗೋತ್ಪಾದಕ ಹವೆಯಿಂದಲೂ ಅಂದಾಗೋಯಾನು ಜರ್ಜರಿತನಾದ್ದರಿಂದ ಅವನು ಹತಾಶನಾಗಿ ಬರಿಗೈ ಬೀಸಾಡುತ್ತ ಪಾನಾಮಕ್ಕೆ ಮರಳಿ ಒ೦ದನು.

ಫ್ರಾನ್ಸಿಸ್ಕೋ ಪಿಝಾರೋ

ಅಂದಾಗೋಯಾನು ಅಪಯಶವನ್ನು ಹೊಂದಿ ಮರಳಿ ಬಂದರೂ