ಪುಟ:ಬೆಳಗಿದ ದೀಪಗಳು.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝೂರೋ

೧೩೯

ಇತಿಹಾಸದ ಮೇಲಿಂದ, ಆ ದೇಶದ ಪ್ರಾಚೀನ ನಿವಾಸಸ್ಥರನ್ನು ಸ್ಪಾನಿ ಆರ್ಡರು ಯಾವ ಬಗೆಯಿಂದ ಪಾದಾಕ್ರಾಂತ ಮಾಡಿದರೆಂಬದರ ಸಂಗತಿಯನ್ನು ಅಲ್ಪಶಃ ನಮ್ಮ ವಾಚಕರ ಸಲುವಾಗಿ ಕೊಡುತ್ತೇವೆ.

ಪೇರೂ ದೇಶವು ಅಮೇರಿಕೆಯಲ್ಲಿ ಒಂದು ದೊಡ್ಡದಾದ ಪ್ರದೇಶವಾಗಿದೆ. ಈ ದೇಶದ ದಕ್ಷಿಣೋತ್ತರ ಉದ್ದಳತೆಯ ೨೭೦೦ ಮೈಲವಾಗಿದ್ದು ಆಗಲಳತೆಯು ಇನ್ನೂರರಿಂದ ನಾನೂರು ಮೈಲವಾಗಿದೆ. ಪೇರೂದೇಶದ ಪಶ್ಚಿಮಕ್ಕೆ ಸಾಸಿಫಿಕ ಮಹಾಸಾಗರವಿದ್ದು, ಪೂರ್ವಕ್ಕೆ ಅತ್ಯುಚ್ಚವಾದ ಆ೦ಡಿಜ ಪರ್ವತವು ಹಬ್ಬಿಕೊಂಡಿದೆ. ಈ ಪರ್ವತದ ಹಲಕೆಲವು ಶಿಖರಗಳು ೨೫೦೦೦ ಘೋಟುಗಳ ವರೆಗೆ ಎತ್ತರವಾಗಿವೆ. ಅಂದರೆ, ಹಿಮಾಲಯ ಪರ್ವತವನ್ನು ಬಿಟ್ಟು ಕೊಟ್ಟರೆ, ಇದೇ ಪರ್ವತವು ಸೃಷ್ಟಿಯ ಮೇಲೆ ಉಚ್ಚವಾದದ್ದು. ಆಂಡಿ ಜಪರ್ವತ ಹಾಗೂ ಪಾಸಿಫಿಕ ಮಹಾಸಾಗರಗಳ ನಡುವೆ ಈ ಪ್ರದೇಶವು ಹಬ್ಬಿಕೊಂಡಿದೆ. ಈ ದೇಶದೊಳಗಿನ ಮೂಲನಿವಾಸಸ್ಥರಿಗೆ 'ಪೇರವ್ಹಿಯನ' ಜನರೆಂಬ ಸಂಜ್ಞೆಯನ್ನು ಯುರೋಪಿಯನ್ನರು ಕೊಡುತ್ತಾರೆ. ಆದರೆ, ಈ ದೇಶದೊಳಗಿನ ಉಚ್ಚ ವರ್ಣದ ಜನರಿಗೂ ರಾಜಮನೆತನದವರಿಗೆ 'ಇಂಕಾ' ಎಂಬ ಸಂಜ್ಞೆ ಇತ್ತು. ಅದಕ್ಕಾಗಿ ಸೇದ ದೇಶದೊಳಗಿನ ಜನರಿಗೆ ಇಂಕಾ ಎಂಬ ಸಂಜ್ಞೆಯೇ ಇತಿಹಾಸದಲ್ಲಿ ಸರ್ವಸಾಧಾರಣವಾಗಿ ಕೊಡಲ್ಪಟ್ಟಿದೆ. ಕೊಲಂಬಸನು ಅಮೇರಿಕೆಯನತ್ನಿ ಶೋಧಿಸಿದನು; ಆದರೆ ಈ ವಿಸ್ತೀರ್ಣವಾದ ಹೊಸ ಖಂಡದೊಳಗಿನ ಭಿನ್ನ ಭಿನ್ನ ದೇಶಗಳ ಜ್ಞಾನವನ್ನು ಸಂಪಾದಿಸುವದಕ್ಕೂ ಮೆಕ್ಸಿಕೊದೊಳಗಿನ 'ಆರುಟೀಕ ಜನರ ಸಾಮ್ರಾಜ್ಯದ ಮೇಲೂ ಪೇರದೊಳಗಿನ ಇಂಕಜನರ ವಿಸ್ತೀರ್ಣವಾದ ಪ್ರದೇಶದ ಮೇಲೂ ಸ್ಪೇನದ ಧ್ವಜಪಟವನ್ನು ಊರುಬೇಕಾದರೆ, ಕೋರ್ಟಿನ್ ಹಾಗೂ ಪಿಝಾರೋರ೦ಥ ಸಾಹಸಿಗಳಾದ ಎದೆಗಾರರಿಗೆ ಅನೇಕ ವರ್ಷಗಳ ವರೆಗೆ ಜೀವಖಾರಿ ಪ್ರಯತ್ನಗಳನ್ನೂ, ಕಷ್ಟಗಳನ್ನ ಪಡ ಬೇಕಾಯಿತು. ೧೫ನೇ ಶತಕದ ಕೊನೆಯಲ್ಲಿ ಪನಾಮಾ ಸಂಯೋಗಭೂಮಿಯ ಮೇಲೆ ಸ್ಟಾನಿಶ ಜನರ ವಸಹಾತಿಗಳು ಸ್ಥಾಪಿತವಾಗಿದ್ದರೂ ಪಾಸಿಫಿಕ ಮಹಾಸಾಗರದ ದಕ್ಷಿಣಭಾಗದ ದಂಡೆಯ ಮೇಲೆ ಯಾವ ಜನರು ವಾಸಿಸಿರುವರೆಂಬದೂ, ಅವರ ರಾಜ್ಯವ್ಯವಸ್ಥೆಯು ಯಾವ ಬಗೆಯದಾಗಿತ್ತ೦ಬದ ಸ್ಪಾನಿಳರ್ಡರಿಗೆ ಗೊತ್ತಾಗಿದ್ದಿಲ್ಲ. ಸ್ಪಾನಿ