ಪುಟ:ಬೆಳಗಿದ ದೀಪಗಳು.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

ಅಮೇರಿಕಾ ಖಂಡದ ಶೋಧವನ್ನು ಕೋಲಂಬಸನು ಹಚ್ಚಿದನು; ಯುರೋಪಿಯನ್ ರಾಷ್ಟ್ರದವರು ಅಮೇರಿಕೆಗೆ ಹೊಗುವದರ ಪೂರ್ವದಲ್ಲಿ, ಅಲ್ಲಿ 'ರೆಡ್- ಇಂಡಿಯನ್' ಅಥವಾ ತಾಮ್ರವರ್ಣದ ಕಾಡಜನರು ವಾಸಮಾಡಿಕೊಂಡಿದ್ದರು; ಹೊಸದಾಗಿ ಪಸಹಾಯವನ್ನು ಮಾಡಿದ ಯುರೋಪಿಯನ್ ಜನರ ಮುಂದೆ ಇವರ ಆಟ ಸಾಗದೆ, ಅವರು ಯುರೋಪಿಯನ್ನರ ಅಂಕಿತಕ್ಕೆ ಪೂರ್ಣ ಒಳಗಾದರು; ಇಷ್ಟು ಸಂಗತಿಗಳನ್ನು ಮಾರಿ ಅಮೇರಿಕೆಯೊಳಗಿನ ಅನೇಕ ದೇಶಗಳ ಪೂರ್ವವೃತ್ತಾಂತವು ನಮ್ಮ ಜನರಿಗೆ ಗೊತ್ತಿಲ್ಲ. ಅಮೇರಿಕೆಯು ಒಂದು ಖಂಡವಾಗಿದೆ. ಇ೦ಗ್ರಜ ಜನರ ಸಂಬಂಧವು ಉತ್ತರ ಅಮೆರಿಕೆಯಲ್ಲಿರುವ 'ಕಾನಡಾ' ಹಾಗೂ 'ಯುನಾಯಟೆಡ್ ಸ್ಟೇಟ್ಸ' ಎಂಬ ಹೆಸರುಗಳಿಂದ ಪ್ರಸಿದ್ಧವಾಗಿರುವ ಪ್ರದೇಶಗಳ ಕೂಡ ವಿಶೇಷವಾಗಿರುವದರಿಂದ, ಇ೦ಗ್ರಜೀ ಇತಿಹಾಸಗಳ ದ್ವಾರಾ ಈ ಪ್ರದೇಶಗಳ ವಿಷಯವಾಗಿ ಅಲ್ಪಸ್ವಲ್ಪ ಜ್ಞಾನವು ಸರ್ವಸಾಧಾರಣವಾಗಿ ಸುಶಿಕ್ಷಿತ ಜನರಿಗಿರುತ್ತದೆ, ಆದರೆ ಉತ್ತರ ಅಮೇರಿಕೆಯಲ್ಲಿರುವ ಪ್ರದೇಶದಷ್ಟೇ ಪ್ರದೇಶವು ದಕ್ಷಿಣ ಅಮೇರಿಕೆಯಲ್ಲಿರುತ್ತದೆ. ಆದರೆ ದಕ್ಷಿಣ ಅಮೇರಿಕೆಯೊಳಗಿನ ಬಾಝಿಲ, ಪೇರೂ ಮುಂತಾದ ದೊಡ್ಡ ದೊಡ್ಡ ಪ್ರದೇಶಗಳನ್ನು, ಇ೦ಗ್ರಜೇತರ ಯುರೋಪಿಯನ್ ರಾಷ್ಟ್ರದವರೇ ಪೂರ್ವದಾರಭ್ಯ ತಮ್ಮ ಸ್ವಾಧೀನ ಮಾಡಿಕೊಂಡಿರುವದರಿಂದ ಅವುಗಳ ಪೂರ್ವೇತಿಹಾಸವು ನಮ್ಮಲ್ಲಿಯ ಸುಶಿಕ್ಷಿತರಿಗೂ ಕೂಡ ಗೊತ್ತಿರುವದಿಲ್ಲ. ಮೇಳಾಗಿ ಯುರೋಪಿಯನರು ಆಮರಿಕೆಗೆ ಹೋಗುವದರ ಪೂರ್ವದಲ್ಲಿ, ಅಮೇರಿಕೆಯಲ್ಲಿಯ ಮೂಲನಿವಾಸಿಗಳೆಲ್ಲರೂ ಕಾಡುಸ್ಥಿತಿಯಲ್ಲಿದ್ದರು, ಅಥವಾ ನರಮಾಂಸ ಭಕ್ಷಕರಾಗಿದ್ದರೆಂಬ ಸರ್ವಸಾಧಾರಣವಾಗಿರುವ ಕಲ್ಪನೆಯಾದರೂ ತಪ್ಪಿ ನದಾಗಿದೆ. 'ಮೆಕ್ಸಿಕೋ'ದೊಳಗಿನ ಆಝುಟೇಕ ಜನರೂ, ಪೇದೊಳಗಿನ ಇಂಕಾಜನರೂ ತಕ್ಕಮಟ್ಟಿಗೆ ಸುಸಂಸ್ಕೃತರಾದ ಜನರಾಗಿದ್ದರು. ಈ ಜನರ ರಾಜ್ಯಗಳನ್ನು ಸ್ಪಾನೀಆರ್ಡರು ಹೇಗೆ ಪಾದಾ ಕ್ರಾಂತ ಮಾಡಿದರೆಂಬ ಇತಿಹಾಸವು ಬಹಳ ಮನೋವೇಧಕವಾಗಿದೆ. ಅದಕ್ಕಾಗಿ 'ಹೈಸ್ಕಾಟ' ಎಂಬ ಗ್ರಂಥಕಾರನು ಬರೆದಿಟ್ಟಿರುವ ಪ್ರದೇ