ಪುಟ:ಬೆಳಗಿದ ದೀಪಗಳು.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವ ಜನ್ಮದ ವಿಧಿಯು ತಾ ಬೆನ್ನು ಬಿಡದು

೧೩೭

ಕುಕರ್ಮಗಳು ಆ ಜನ್ಮದಲ್ಲಿ ನನ್ನಿಂದ ಯಾಕೆ ಘಟಿಸಿದವು? ಈ ಪ್ರಶ್ನೆಗೆ ಸಮಾಧಾನ ಕಾರಕವಾದ ಉತ್ತರವನ್ನು ನೀನು ಕೊಟ್ಟರೆ, ನೀನು ವಿಧಿಸುವ ಅನಂತಾನಂತ ಶಿಕ್ಷೆಗಳನ್ನು ನಾನು ಆನಂದದಿಂದ ಉಪಭೋಗಿಸುವೆನು.

ಉತ್ತರ: ಕರ್ಮವು ಅನಾದಿಯಾದದ್ದೆಂದು ಮಾತ್ರ ನಾನು ಹೇಳಿ ಬಲ್ಲೆನು. ಇದಕ್ಕೂ ಹೆಚ್ಚಿನ ಸಮಾಧಾನಕಾರಕವಾದ ಉತ್ತರವು ನನ್ನ ಹತ್ತರವಿಲ್ಲ. ಸುಖಗಳನ್ನು ಉಪಭೋಗಿಸುವಾಗ ಈ ಸುಖವು ಯಾವ ಜನ್ಮದಲ್ಲಿಯ ಸುಕರ್ಮದ ಫಲವೆಂದು ಮನುಷ್ಯನು ವಿಚಾರಿಸುವದಿಲ್ಲ. ಅಂದ ಮೇಲೆ ದುಃಖಗಳನ್ನು ಉಪಭೋಗಿಸುವಾಗ ಮಾತ್ರ ಅವನು ಈ ಆಕ್ಷೇಪವನ್ನು ಯಾಕೆ ತೆಗೆಯಬೇಕು ?

ಇಷ್ಟು ಮಾತಾಡಿ ಆ ಕರ್ಮಾಧಿಕಾರಿಯು ಅದೃಶ್ಯನಾದನು. ಇದನ್ನು ಕಂಡು ಭೋಲಾನಾಥನು 'ನಿಷ್ಠುರನು, ನಿಷ್ಠುರನು' ಎಂದು ಕರ್ಮಾಧಿಕಾರಿಯನ್ನುದ್ದೇಶಿಸಿ ಅವನನ್ನು ಧಿಕ್ಕರಿಸುವಷ್ಟರಲ್ಲಿ, ಕಾವಲುಗಾರರು ಅವನನ್ನು ಸರ್ವತದ ಶಿಖರದಿಂದ ಕೆಳಗೆ ನೂಕಿದರು !