ಪುಟ:ಬೆಳಗಿದ ದೀಪಗಳು.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ಸಂಪೂರ್ಣ-ಕಥೆಗಳು

ಹೆಂಡತಿಯು, ನಿನ್ನ ಹೊಸ ತಮ್ಮನು ಇವರೆಲ್ಲರೂ ಅಂಶತಃ ನಿನ್ನ ಕರ್ಮದ ಫಲಗಳಾಗಿದ್ದಾರೆ. ಪೂರ್ವ ಸಂಚಿತದಂತೆ ಆಷ್ಟರು ಸುಖದುಃಖಗಳಿಗೆ ಕಾರಣರಾಗುತ್ತಾರೆ. ಇದೆಲ್ಲ ನಿನ್ನ ಕರ್ಮದ ಆಟವು !.

ಪ್ರಶ್ನ : ಇಂಥ ಭಯಂಕರವಾದ ಫಲಗಳನ್ನು ಪಭೋಗಿಸಲು ನಾನು ಮಾಡಿದ ಅಂಥ ಭಯಂಕರವಾದ ಕರ್ಮಗಳಾದರೂ ಯಾವವು ? ನಾನು ಯಾರ ದ್ರವ್ಯಾಪಹಾರವನ್ನು ಮಾಡಿದ್ದೇನೆಂದು ಈ ಭಯಂಕರವಾದ ಪಿಶಾಚಿಗಳು ನನ್ನನ್ನು ಕಾಡುತ್ತಿರುವವು ? ಹಾಗೂ ನಾನು ಯರ ಪ್ರಾಣಘಾತವನ್ನು ಮಾಡಿದ್ದೆನೆಂದು ಈ ಕೋರವಾದ ಮಣದ ಶಿಕ್ಷೆಯು ನನಗೆ ವಿಧಿಸಲ್ಪಟ್ಟಿರುವದು ?

ಉತ್ತರ : ಈ ಯಾತನೆಗಳಿಗೆ ಪಾತ್ರನಾಗುವಂತೆ ನೀನು ಜನ್ಮಾಂತರದಲ್ಲಿ ಕರ್ಮಗಳನ್ನಾರಿಸಿರುವಿ.

ಪ್ರಶ್ನೆ: ಈ ಮಾತಿನ ತಿಳುವಳಿಕೆಯಾಗುವದು ಕಠಿಣವಾದದ್ದು. ನನ್ನ ಇಹಜನ್ಮದ ಆ ಚರಣದ ಮೇಲಿಂದಲೂ ಮನಃಪ್ರವೃತ್ತಿಯ ಮೇಲಿಂದಲೂ ಇಂಥ ಕೃತ್ಯಗಳನ್ನು ನಾನು ಮಾಡಿದ್ದೆಂದು ನಿಶ್ಚಯಪೂರ್ವಕವಾಗಿ ಹೇಳಬಲ್ಲೆನು. ಆದರೆ, ಪೂರ್ವಜನ್ಮದಲ್ಲಿ ನಾನು ಆಂಥ ಆಘೋರವಾದ ಪಾತಕಗಳನ್ನು ಮಾಡಿದ್ದರೆ, ಹಾಗೂ ಅವುಗಳ ಪ್ರಾಯಶ್ಚಿತ್ತವನ್ನು ನಾನು ಈ ಜನ್ಮದಲ್ಲಿ ಭೋಗಿಸುವದಾಗಿದ್ದರೆ, ನನ್ನ ಪೂರ್ವಪಾತಕಗಳನ್ನು ನನ್ನ ನೆನಪಿಗೆ ತಂದುಕೊಡುವದು ನ್ಯಾಯವಾದ ಮಾತಲ್ಲವೆ? ನೀನು ಇಂಥಿಂಥ ಕರ್ಮಗಳನ್ನು ಮಾಡಿರುವದಕ್ಕಾಗಿ ನಿನಗೆ ಇಂಥ ಶಿಕ್ಷೆಯು ವಿಧಿಸಲ್ಪಟ್ಟಿದೆಯೆಂದು ನ್ಯಾಯಾಧೀಶರಾದರೂ ಹೇಳುವ ರೂಢಿಯುಂಟು. ಈಗಿನ ನನ್ನ ಸುಖ ದುಃಖಗಳಿಗೆ ನನ್ನ ಪೂರ್ವಜನ್ಮದ ಸುಕರ್ಮ ಅಥವಾ ದುಷ್ಕರ್ಮಿಗಳು ಕಾರಣವಾಗಿವೆಂದು ನೀನು ಹೇಳುತ್ತಿರುವಿ. ಆದರೆ, ನನ್ನ ಪೂರ್ವಜನ್ಮದಲ್ಲಿ ನನಗೆ ದುಷ್ಕರ್ಮಮಾಡುವ ಬುದ್ಧಿ ಯಾದರೂ ಯಾಕೆ ಹುಟ್ಟಬೇಕು ? ಅದಕ್ಕೆ ಅದರ ಪೂರ್ವಜನ್ಮದ ಕರ್ಮಗಳು ಕಾರಣವೆಂದು ನಿನ್ನ ಉತ್ತರವು. ಈ ಪೂರ್ವಜನ್ಮದ ಪರಂಪರೆಯನ್ನಾದರೂ ಎಲ್ಲಿಯ ವರೆಗೆ ಒಯ್ಯತಕದ್ದು? ಒಳ್ಳೇದು, ನನ್ನ ಮೊಟ್ಟ ಮೊದಲನೆಯ 'ಜನ್ಮದಲ್ಲಿ ಕರ್ಮವು ಎಲ್ಲಿಂದ ಇಂದಿತು ? ಮುಂದಿನ ಜನ್ಮದಲ್ಲಿ ದುಃಖಗಳು ಪ್ರಾಪ್ತವಾಗುವಂಥ