ಪುಟ:ಬೆಳಗಿದ ದೀಪಗಳು.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೩೫

ಸಾಯುವೆನೆಂಬ ಸಂಗತಿಯು ನನಗೆ ಆನಂದದಾಯಕವಾಗಿದೆ. ನನ್ನನ್ನು ಸಂಕಟದೊಳಗಿಂದ ಮುಕ್ತ ಮಾಡಲು ಬರುತ್ತಿರುವ ಮರಣವನ್ನು ನಾನು ಮಿತ್ರಭಾವದಿಂದ ಸ್ವಾಗತಿಸುತ್ತೇನೆ. ಆದರೆ, ಈ ಸಂಕಟಗಳಾದರೂ ನನ್ನ ಮೇಲೆ ಯಾಕೆ ಒದಗಬೇಕು ? ಯಾವ ಅಪರಾಧಗಳನ್ನು ಮಾಡಿರುವೆನೆಂದು ಈ ಯಾತನೆಗಳಿಗೆ ನಾನು ಪಾತ್ರನಾಗಿರುವೆನು ? ಆಜನ್ಮ ಧರ್ಮಾಚರಣೆಯನ್ನು ಮಾಡಿದೆನು. ಲೋಕೋಪಕಾರಕ್ಕಾಗಿ ಸ್ವಂತ ಸುಖಕ್ಕೆ ತಿಲಾಂಜಲಿಯನ್ನು ಕೊಟ್ಟೆನು. ಹೀಗಿರಲು ನನ್ನ ಮೇಲೆ ನಿಷ್ಕಾರಣವಾಗಿ ಈ ಸಂಕಟಗಳು ಯಾಕೆ ? ನನ್ನ ವಾಣಿಯು ಉಚ್ಚರಿಸುವದಕ್ಕೆ ಕೂಡ ಹೇಸುವ ಅಘೋರಿವಾದ ಪಾತಕಗಳನ್ನು ನಾನು ಮಾಡಿದೆನೆಂಬ ದೋಷಾರೋಪವು ನನ್ನ ಮೇಲೆ ಯಾಕೆ ? ಹಾಗೂ ನನಗೆ ದೇಹಾಂತ ಶಾಸನವಾದರೂ ಯಾಕೆ ನಿಧಿ ಸಲ್ಪಡಬೇಕು ? ಇದು ಹೀಗೆ ಯಾಕಾಗುತ್ತಿರುವದು ? ಹಾಗೂ ಇದನ್ನು ಮಾಡುವವನಾದರೂ ಯಾರಿರಬಹುದು ?

ಈ ವಿಚಾರಗಳು ಇವನ ಮನಸ್ಸಿನಲ್ಲಿ ನಡೆದಿರಲು, ಎದುರಿನಲ್ಲಿದ್ದ ಪರ್ವತದ ತುದಿಯ ಮೇಲೆ, ಇವನು ಪೂರ್ವದಲ್ಲಿ ಎಷ್ಟೋ ಸಾರೆ ನೋಡಿದ್ದ ಕರ್ಮಾಧಿಕಾರಿಯ ಮೂರ್ತಿಯು ಇವನಿಗೆ ಕಾಣಹತ್ತಿತು. ಪರ್ವತದ ಶಿಖರದಿಂದ ಆಕಾಶದ ವರೆಗಿನ ವಿಸ್ತೀರ್ಣವಾದ ಅವಕಾಶಭಾಗವನ್ನೆಲ್ಲ ಆ ಆಕೃತಿಯು ವ್ಯಾಪಿಸಿಕೊಂಡಿತು. ಇಂಥ ಭವ್ಯವಾದ ಹಾಗೂ ವಿರಾಟ ಸ್ವರೂಪಿಯಾದ ಕರ್ಮಾಧಿಕಾರಿಯ ಆಕೃತಿಯನ್ನು ಕಂಡು, ಭೋಲಾನಾಥನು ತೀರ ವಿಸ್ಮಿತನೂ, ಕುದ್ಧನೂ ಆಗಿ ಅವನನ್ನು ನೋಡಿ ಅಂದದ್ದು : "ಎಲೈ ಕರ್ಮಾಧಿಕಾರಿಯೇ, ಈ ಕಾಲಕ್ಕಾದರೂ ನೀನು ಇಲ್ಲಿ ಇದ್ದೇ ಇರುವಿಯಾ ? ನನ್ನ ಬೆನ್ನು ಬಿಡದೆ ನನ್ನನ್ನು ಯಾಕೆ ಹಿಂಬಾಲಿಸುವಿ ? ನೀನು ಯಾರು ? ನಿನ್ನ ಅಧಿಕಾರವೇನು? ನನ್ನ ಮೇಲೆ ಸಂಕಟಗಳು ಬಂದೊದಗಿದಾಗ ನನ್ನನ್ನು ಹೀಯಾಳಿಸಲು ವೈರಿಯಂತೆ ನೀನು ಯಾವಾಗಲೂ ಸಿದ್ಧನೇ."

"ನಾನು ಕರ್ಮಾಧಿಕಾರಿಯೆಂದು ನಿನಗೆ ಈ ಮೊದಲೇ ಹೇಳಿಲ್ಲವೆ ? ಪ್ರತಿಯೊಬ್ಬನ ಕರ್ಮಗಳಿಗನುಸಾರವಾಗಿ ಅವನಿಗೆ ಫಲಗಳನ್ನು ಕೊಡುವದು ನನ್ನ ಅಧಿಕಾರವಾಗಿದೆ. ನಾನು ನಿನ್ನ ಕರ್ಮಮರ್ತಿಯು, ಹಾಗೆಯೇ ಆ ಪುರೋಹಿತನು, ಆ ನಿನ್ನ ದತ್ತಕ ತಂದೆಯು, ದತ್ತಕ ತಾಯಿಯು, ನಿನ್ನ