ಪುಟ:ಬೆಳಗಿದ ದೀಪಗಳು.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೪

ಸಂಪೂರ್ಣ-ಕಥೆಗಳು

ದುರ್ಗವಿತ್ತು. ಈ ದುರ್ಗಕ್ಕೆ ಸೇರಿದ ಒಂದು ಕತ್ತಲಕೋಣೆಯಲ್ಲಿ ತನಗಾದ ದೇಹಾಂತ ಶಿಕ್ಷೆಯ ಮರಣದ ದಿವಸವನ್ನು ಪ್ರತೀಕ್ಷಿಸುತ್ತ ಭೋಲಾನಾಥನು ಎಷ್ಟೋ ದಿವಸಗಳ ವರೆಗೆ ಕೊಳೆಯುತ್ತ ಬಿದ್ದಿದ್ದನು. ಕೊನೆಗೆ ಆ ದಿವಸವು ಬಂದೊದಗಿತು. ಕಾವಲುಗಾರರು ಆ ಕತ್ತಲೆ ಕೋಣೆಗೆ ಹಾಕಿದ ಬೀಗವನ್ನು ತೆಗೆದು, ಬಾಗಿಲಗಳನ್ನು ತೆರೆದರು; ಕಾಲುಗಳೊಳಗಿನ ಶೃಂಖಲೆಗಳ ಸಪ್ಪಳವು ಹೃದಯದ್ರಾವಕವಾಗಿ ಕೇಳಬರಹತ್ತಿತ್ತು. ಆ ಹತ ಭಾಗ್ಯನಾದ ಪ್ರಾಣಿಯು ಬೇಡಿಗಳ ಭಾರವನ್ನು ಸಹಿಸಲಾರದೆ, ಮಂದಮಂದವಾಗಿ ಹೆಜ್ಜೆಗಳನ್ನಿಕ್ಕುತ್ತ ತನ್ನ ವಧಸ್ಥಾನವಾಗಿದ್ದ ಪರ್ವತದ ಶಿಖರದ ಕಡೆಗೆ ನಡೆದನು.

ಒಂದು ಎತ್ತರವಾದ ಪರ್ವತದ ತುದಿಯ ಮೇಲಿಂದ ಕೆಳಗೆ ನೂಕಿ ಇವನ ಪ್ರಾಣವನ್ನು ತೆಗೆದುಕೊಳ್ಳಬೇಕೆಂಬ ಶಿಕ್ಷೆಯು ಭೋಲಾನಾಥನಿಗೆವಿಧಿಸಲ್ಪಟ್ಟಿತ್ತು. ಆ ಪ್ರಕಾರ ಭೋಲೆನಾಥನು ಆ ಪರ್ವತದ ಶಿಖರದ ಮೇಲೆ ಬಂದು ನಿಂತನು. ಮೇಲಿಂದ ಕೆಳಗೆ ನೋಡುವವರಿಗೆ ಭೂಮಿಯು ಕಾಣದಷ್ಟು ಆ ಪರ್ವತವು ಎತ್ತರವಾಗಿತ್ತು, ಆಕಾಶದಲ್ಲಿ ಹಾರುವದಕ್ಕೆ ಜಾಣನೆಂದು ಹೆಸರು ಪಡೆದ ಪಕ್ಷಿಗಳು ಕೂಡ ನೆಲದ ಮೇಲಿಂದ ಹಾರಿದವೆಂದರೆ, ಪರ್ವತದ ತುದಿಯನ್ನು ಮುಟ್ಟುವದು ಅವುಗಳಿಗೆ ಅಸಾಧ್ಯವಾಗಿ ಮಧ್ಯದಲ್ಲಿಯೇ ವಿಶ್ರಾಂತಿಗಾಗಿ ಎಲ್ಲಿಯಾದರೂ ಕುಳಿತುಕೊಳ್ಳುತ್ತಿದ್ದವು. ಈ ಪಕ್ಷಿಗಳಲ್ಲಿ ರಣಹದ್ದುಗಳ ಗದ್ದಲವೇ ವಿಶೇಷವಾಗಿತ್ತು. ಈ ಪರ್ವತಕ್ಕೆ ಎದುರಾಗಿ ಸ್ವಲ್ಪ ಅಂತರದ ಮೇಲೆ ಮತ್ತೊಂದು ಪರ್ವತವಿತ್ತು. ಶೃಂಖಲೆಗಳಿಂದ ಬದ್ಧನಾದ ಬಂದಿಯು, ಕಾವಲುಗಾರರೂ ಅಧಿಕಾರಸ್ಥರೂ ತನ್ನನ್ನು ನೂಕುವದಕ್ಕೆ ಸಿದ್ಧರಾಗುವ ವರೆಗೆ, ಈ ಎದುರಿನಲ್ಲಿದ್ದ ಪರ್ವತದ ಕಡೆಗೆ ನೋಡುತ್ತ ತಟಸ್ಥನಾಗಿ ನಿಂತಿದ್ದವು. ಆದರೆ, ಅವನ ಮನಸ್ಸಿನಲ್ಲಿ ವಿಚಾರಗಳ ತುಮುಲ ಯುದ್ಧವು ನಡೆದಿತ್ತು. ಮರಣದ ಸಮಯದಲ್ಲಿ ಮನುಷ್ಯನಿಗೆ ಅವನ ಪೂರ್ವವೃತ್ತಗಳೆಲ್ಲ ಕಾಣುತ್ತವೆಂದೆನ್ನುತ್ತಾರೆ. ಈ ಸಮಯದಲ್ಲಿ ಅವನ ಅವಸ್ಥೆಯಾದರೂ ಹೀಗೇ ಆಗಿತ್ತು. ಅವನ ವಿಚಿತ್ರ ಪೂರ್ಣವಾದ ಚರಿತ್ರವು ಅವನ ಕಣ್ಣುಗಳ ಮುಂದೆ ಬಂದು ನಿಂತಿತು. ಆಗ್ಗೆ ಅವನು ತನ್ನ ಮನಸ್ಸಿನಲ್ಲಿ ಅಂದದ್ದು : "ಸ್ವಲ್ಪಾವಕಾಶದಲ್ಲಿಯೇ ನಾನು