ಪುಟ:ಬೆಳಗಿದ ದೀಪಗಳು.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೩೩

ವಿಚಾರಗಳು ತನಗೆ ತಿಳಿಯಬರಬೇಕೆಂದು ಗಿರಿಜಾಬಾಯಿಯು ಗುಪ್ತರಾದಚಾರರನ್ನು ನಿಯೋಜಿಸಿದಳು. ಹುಟ್ಟಿದ ಕೂಸು ಎಲ್ಲಿಯೋ ಇಲ್ಲದಂತಾಗಿದ್ದು, ಭೋಲಾನಾಥನು ಭಿಕ್ಷುಕರ ವೇಷವನ್ನು ಧಾರಣ ಮಾಡಿಕೊಂಡು ಒಂದು ಕ್ಷೇತ್ರದಲ್ಲಿರುತ್ತಾನೆಂಬ ಸಂಗತಿಯು ಚಾರರ ಮುಖಾಂತರವಾಗಿ ಗಿರಿಜಾಬಾಯಿಗೆ ತಿಳಿಯಿತು. ಈ ಸುದ್ದಿಯು ತಿಳಿದ ಕೂಡಲೆ ಅವಳು ತನ್ನ ಪೂರ್ವದ ಕುಕಲ್ಪನೆಯ ಸಂವಿಧಾನವನ್ನು ಕೊನೆಯವರೆಗೆ ಸರಿಯಾಗಿ ಜೋಡಿಸಿದಳು. ಕೂಸು ಇಲ್ಲದಂತಾಗಿದೆ೦ದ ಮೇಲೆ ಅದನ್ನು ಕೊಂದಿರಲಿಕ್ಕೇ ಬೇಕು; ಭೋಲಾನಾಥನು ಭಿಕ್ಷುಕನ ವೇಷವನ್ನು ಧರಿಸಿ ಮಠದಲ್ಲಿ ಅಡಗಿಕೊಂಡು ಕೂಡುವದಕ್ಕೆ ಗರ್ಭಪಾತದ ಶಾಸನದ ಭೀತಿಯ ಹೊರತು ಅನ್ಯವಾದ ಕಾರಣವಾದರೂ ಯಾವದು ? ಹೀಗೆ ವಿಚಾರಿಸಿ ಮತ್ಸರದ ವರ್ತಿಯಾದ ಗಿರಿಜಾಬಾಯಿಯು, ತನ್ನ ಗಂಡನ ಅನೈಗಾಮಿಯಾದ ಪ್ರೇಮವು ರ್ದುಕಿಕದ ಭೀತಿಯಿಂದಲಾದರೂ ಮರಳಿ ತನ್ನ ಮೇಲೆ ಕೂಡಬೇಕೆಂಬ ಉದ್ದೇಶದಿಂದ ಈ ಸಂಗತಿಯನ್ನು ರಾಜದಾಚಾರಕ್ಕೆ ²ರಿಕೆ ಮಾಡಿಕೊಂಡಳು, ಪುರಾತನ ಕಾಲದ ದರಬಾರದು, ಇಷ್ಟು ಸೂಕ್ಷ್ಮವಾದ ನ್ಯಾಯ- ಅನ್ಯಾಯಗಳನ್ನು ಪರೀಕ್ಷಿಸುವವರಾರು ? ಸೂಳಿಯ ಪಾಪ ಸನ್ಯಾಸಿಕೆಂಬ ನಾಣ್ಣುಡಿಯು ಆಗಿನಿಂದಲೇ ಲೋಕದಲ್ಲಿ ರೂಢವಾಗಿದೆ.

****

ಪ್ರಾತಃಕಾಲದ ಸಮಯವು. ಆಕಾಶದಲ್ಲಿ ನಕ್ಷತ್ರಗಳು ವಿರಲವಾಗಿ ತೋರುತ್ತಿದ್ದವು. ಪೂರ್ವದಿಕೆಯು ಕಿಂಚಿತ್ರ ಆರಕ್ತವಾಗಿತ್ತು. ವೃಕ್ಷಗಳ ಸಮುದಾಯದೊಳಗಿಂದ ಪಕ್ಷಿಗಳ ಮಂಜುಲವಾದ ಧ್ವನಿಯು ಕೇಳಬರುತ್ತಿತ್ತು. ಮುಂಜಾವಿನ ತಂಗಾಳಿಯು ಮಂದಮಂದವಾಗಿ ಬೀಸುತ್ತಿತ್ತು. ಅನೇಕ ದಿವಸಗಳವರೆಗೆ ಕತ್ತಲೆಕೋಣೆಯೊಳಗಿನ ನೆಲಮನೆಯಲ್ಲಿದ್ದ ಭೋಲಾನಾಥನಿಗೆ ಅವಚಿತವಾಗಿ ಇಂಥ ವಿಶ್ವಸೌಂದರ್ಯ ದರ್ಶನವಾದ್ದರಿಂದ ಅವನ ಮನಸ್ಸು ಎಷ್ಟು ಉಲ್ಲಾಸಿತವಾಯಿತೆಂಬದರ ಕಲ್ಪನೆಯನ್ನು ಮಾಡುವದು ಕಠಿಣವಾದ ಕೆಲಸವಲ್ಲ. ಅವನು ಇರುತ್ತಿದ್ದ ಕ್ಷೇತ್ರದಲ್ಲಿಯ ನದಿಯು, ಹತ್ತಿರದಲ್ಲಿದ್ದ ಉಚ್ಚವಾದದ್ದೊಂದು ಪರ್ವತದಲ್ಲಿ ಉಗಮವನ್ನು ಹೊಂದಿತ್ತು. ಇದೇ ಪರ್ವತದ ಶಿಖರದ ಮೇಲೊಂದು ವಿಸ್ತಿರ್ಣವಾದ