ಪುಟ:ಬೆಳಗಿದ ದೀಪಗಳು.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೨

ಸಂಪೂರ್ಣ-ಕಥೆಗಳು

ಪ್ರಸೂತಳಾಗಿ ಅವಳಿಗೆ ಪುತ್ರ ಪ್ರಾಪ್ತಿಯಾಯಿತು. ಮಾತಾಪುತ್ರರಲ್ಲಿ ಮೊದಲು ಗೊತ್ತಾದಂತೆ ಭೋಲಾನಾಥನು ಆ ಅರ್ಭಕನನ್ನು ಒಂದು ಸ್ಥಳದಲ್ಲಿ ಸುವ್ಯವಸ್ಥಿತವಾಗಿಟ್ಟು, ಈ ಸಂಗತಿಯನ್ನು ತನ್ನ ತಾಯಿಗೆ ತಿಳಿಸಿ, ತಾನು ಮತ್ತೆ ಮೊದಲು ಹೇಳಿದ ಕ್ರಮದಂತೆ ಆ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಸುಖದಿಂದ ತನ್ನ ಕಾಲಹರಣ ಮಾಡಹತ್ತಿದನು.

ಕರ್ಮದ ಗತಿಯು ಗಹನವಾದದ್ದು. ಇವನು ಸುಖಸಮಾಧಾನದಿಂದಿರುವುದು ಅವನ ದೈವದಲ್ಲಿಯೇ ಇಲ್ಲದ ಮೇಲೆ ಅದು ಅವನಿಗೆ ಲಭಿಸುವದಾದರೂ ಹೇಗೆ ? ಪುರೋಹಿತನ ಮಾತಿಗೆ ಮರುಳಾಗಿ ಅವನು ಆ ಕ್ಷೇತ್ರವನ್ನು ಬಿಟ್ಟ ದಿವಸವೇ ಅವನ ಸುಖಶಾಂತಿಗಳಾದರೂ ಅವನನ್ನು ಬಿಟ್ಟವು. ದುರ್ದೈವವು ಆವನ ವಿರುದ್ಧ ವಾಗಿ ತನ್ನ ಸನ್ನಾಹವನ್ನು ಮಾಡೇ ಇಟ್ಟಿತ್ತು. ಗಿರಿಜಾಬಾಯಿಯು, ತನ್ನ ಮನಸ್ಸಿನಲ್ಲಿ ಹುಟ್ಟಿದ್ದ ನಿರಾಧಾರವಾದ ಸಂಶಯಗಳನ್ನು ನೆರೆಹೊರೆಯಲ್ಲಿದ್ದ ಹೆಂಗಸರ ಮುಂದೆ ತೋಡಿಕೊಂಡು ತೃಪ್ತಳಾಗಲಿಲ್ಲ; ಮತ್ಸರದಿಂದ ಆಂಧಳಾದ ಗಿಜಾಬಾಯಿಯು ತನ್ನ ಗಂಡನ ಕುಲದ ಮೇಲೂ ಅವನ ಕೀರ್ತಿಯ ಮೇಲೂ ಎಂಥೆಂಥ ಸಂಕಟಗಳನ್ನು ತಾನು ತರುವಳೆಂಬ ವಿಚಾರವು ಅವಳಿಗೆ ಉಳಿಯದೆ, ತನ್ನ ಗಂಡನ ದುರ್ವತ್ರನವನ್ನು ಸುಧಾರಿಸುವ ಉದ್ದೇಶದಿಂದ ತನಗೆ ಗೊತ್ತಿದ್ದ ಸಂಗತಿಗಳನ್ನೆಲ್ಲ ಸಾದ್ಯಂತವಾಗಿ ಆ ನಗರದ ರಾಜನಿಗೆ ವಿದಿಶ ಮಾಡಿದಳು.

ಭೋಲಾನಾಥನ ತಂದೆಯು ಜೀವಂತನಿರುವಾಗಲೇ ಅವನ ಹೆಂಡತಿಯು ಅವನಿಂದ ಗರ್ಭಧಾರಣ ಮಾಡಿದ್ದಳೆಂಬ ಸಂಗತಿಯು ನಿಜವಾದದ್ದು. ಆದರೆ, ಗಿರಿಜಾಬಾಯಿಗೆ ಇದು ಸತ್ಯವಾಗಿ ತೋರಲಿಲ್ಲ. ಪತಿಮರಣದ ನಂತರ ತನ್ನ ಗಂಡನ ಸಂಬಂಧದಿಂದಲೇ ಅವಳು ಗರ್ಭಧಾರಣ ಮಾಡಿದ ಇಂದು ಗಿರಿಜಾಬಾಯಿಯ ಕಲ್ಪನೆಯು, ಒಂಬತ್ತು ತಿಂಗಳಗಳು ತುಂಬಿದ ನಂತರವೇ ಅವಳು ಪ್ರಸೂತಳಾಗಿದ್ದಳು. ಆದರೆ, ಕಲ್ಪನೆಯು ಒಮ್ಮೆ ತಪ್ಪ ಹತ್ತಿತೆಂದರೆ, ಅದು ಎಲ್ಲಿ ನಿಲ್ಲುವದೆಂಬದನ್ನು ಯಾರೂ ಹೇಳಲರಿಯರು. ಈ ನಿಯಮಕ್ಕನುಸಾರವಾಗಿ ಗಿರಿಜಾಬಾಯಿಯು ಕಲ್ಪಿಸಿದ್ದೇನಂದರೆ, ತನ್ನ ಅತ್ತೆಯು ಒಂಬತ್ತು ತಿಂಗಳುಗಳು ತುಂಬುವದರೊಳಗಾಗಿಯೇ ಬಲಾತ್ಕಾರದಿಂದ ಗರ್ಭಪಾತವನ್ನು ಮಾಡಿ ಕೊಂಡಿರುವಳು, ತಾಯಿ ಮಕ್ಕಳ ಆಚಾರ