ಪುಟ:ಬೆಳಗಿದ ದೀಪಗಳು.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೩೧

ಕಾರಿಯ ಆಕೃತಿಯು ನನ್ನ ಸ್ವಪ್ನದಲ್ಲಿ ಬಂದು ಈ ಶ್ರೀಮಂತಿಕೆಯನ್ನು ಒಪ್ಪಿಕೊಳ್ಳೆಂದು ನನಗೆ ಆಗ್ರಹ ಮಾಡುತ್ತಿತ್ತು. ಈ ವಿಚಾರಗಳು ಅವನ ಮನಸಿನಲ್ಲಿ ನಡೆದಿರುವಷ್ಟರಲ್ಲಿಯೇ ಆ ಕರ್ಮಾಧಿಕಾರಿಯ ಆಕೃತಿಯು ಅವನ ಮುಂದೆ ಮೂರ್ತಿಮಂತವಾಗಿ ನಿಂತಿತು. ಇದನ್ನು ನೋಡಿದಕೂಡಲೆ ಅವನು ಮೊಟ್ಟ ಮೊದಲು ಭಯಗ್ರಸ್ತನೇ ಆದನು. ಆದರೆ, ಹಿಂದಿನಿಂದ ಅವನ ಮನಸ್ಸಿನಲ್ಲಿ ಒಂದು ಆಶೆಯು ಹುಟ್ಟಿ ಅವನು ಅವನಿಗೆ ಅಂದದ್ದು:" ಎಲೈ, ಕರ್ಮಚಂಡಾಲನಾದ ಕರ್ಮಾಧಿಕಾರಿಯೇ ! ನೀನು ಈ ಸ್ಥಳದಲ್ಲಿ ನನಗೆ ಮೊಟ್ಟ ಮೊದಲು ಶ್ರೀಮಂತಿಕೆಯ ಸ್ವಪ್ನವನ್ನು ತೋರಿಸಿದಿ; ಆ ಶ್ರೀಮಂತಿಕೆಯು ನನಗೆ ಈಗ ಸಾಕಾಗಿದೆ ಈಗಾದರೂ ನಿನಗೆ ನನ್ನ ವಿಷಯವಾಗಿ ದಯೆ ಹುಟ್ಟಲಿ. ನಾನು ಮೊದಲಿನಂತೆ ಮರಳಿ ಇಲ್ಲೇ ಮಲಗಿಕೊಳ್ಳುವೆನು; ನೀನು ನನ್ನನ್ನು ಮೊದಲಿನಂತೆ ಬಡವನನ್ನಾಗಿಯೂ ಬ್ರಹ್ಮಚಾರಿಯನ್ನಾಗಿ ಮಾಡು. -ಆದರೆ ನಾನು ಇಲ್ಲಿ ಮಲಗಿದರೂ ಸ್ವಪ್ನ ಬೀಳುವಂಥ ನಿದ್ರೆಯು ನನಗೆ ಎಲ್ಲಿಂದ ಬರುವದು? ಯದಾ ಕದಾಚಿತ್ ನನಗೆ ನಿದ್ರೆಯು ಹತ್ತಿದರೆ, ಆ ನಿದ್ರೆಯಲ್ಲಿ ನೀನು ನನ್ನನ್ನು ಬಡವನನ್ನಾಗಿ ಮಾಡುವಿಯಾ ?” ಇದಕ್ಕೆ ಇಲ್ಲ ಇಲ್ಲವೆಂದು ಗೊಣುಹಾಕುತ್ತ ಆ ಪುರುಷಾಕೃತಿಯು ವಾತಾವರಣದಲ್ಲಿ ಅಸ್ಪಷ್ಟವಾಗುತ್ತಾಗುತ್ತಾ ಆಕೃತ್ಯವಾಯಿತು. ಈ ಸಂಕಟಗಳಿಂದ ವಿಮೋಚನವಾಗಲು ಮರಣದ ಹೊರತು ಅನ್ಯ ಉಪಾಯಗಳು ಭೋಲಾನಾಥನಿಗೆ ತೋಚಲಿಲ್ಲ. ಇರಲಿ. ಈ ಸ್ವಗತ ಪುರುಷನು ತನ್ನನ್ನು ಬಡವನನ್ನಾಗಿ ಮಾಡುವದಕ್ಕೆ ಒಪ್ಪದಿದ್ದರೂ ತಾನೇ ತನ್ನನ್ನು ಬಡವನನ್ನಾಗಿ ಮಾಡಿಕೊಳ್ಳುವದಕ್ಕಾಗಿ ಭೋಲಾನಾಥನು ತನ್ನ ಮೈ ಮೇಲಿನ ಬೆಲೆ ಬಾಳುವ ವಸ್ತ್ರಾಭರಣಗಳನ್ನು ಬಾಗಿಲ ಮಾಡದಲ್ಲಿಟ್ಟು, ತನ್ನ ಮೊದಲಿನ ಬಡತನದ ಚಿ೦ದಿಗಳನ್ನು ತನ್ನ ಮೈಮೇಲೆ ಹಾಕಿಕೊಂಡನು, ಪ್ರಾತಃಕಾಲದಲ್ಲಿ ಗಂಗೆಯಲ್ಲಿ ಸ್ನಾನ ಮಾಡಿ, ಸಂಧ್ಯಾವಂದನ ವೇದಾಧ್ಯಯನಗಳನ್ನು ತೀರಿಸಿಕೊಂಡು ಮಧ್ಯಾಸ್ಟ ಕಾಲದಲ್ಲಿ ಜೋಳಿಗೆಯನ್ನು ತೆಗೆದುಕೊಂಡು ಮಧುಕರ ವೃತ್ತಿಯನ್ನಾಚರಿಸಿ ಕಾಲ ಕಳೆಯಹತ್ತಿದನು, ಸ್ಥಿತಿಯಲ್ಲಿ ಅವನ ದಿವಸಗಳು ಸರ್ವಸಾಧಾರಣವಾಗಿ ಸುಖದಲ್ಲಿ ಹೋಗ ಹತ್ತಿದವು. ಇಷ್ಟರಲ್ಲಿ ಅವನ ತಾಯಿಯು ತನ್ನ ತವರಮನೆಯಲ್ಲಿ