ಪುಟ:ಬೆಳಗಿದ ದೀಪಗಳು.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ಸಂಪೂರ್ಣ-ಕಥೆಗಳು

ತಿಳಿಯುತ್ತಿದ್ದಳು. ಇಂಥ ಗೃಹಸ್ಥಿತಿಯ ಮೂಲಕವಾಗಿ ಅವನು ಬೇಸತ್ತು ಕೆಲವು ದಿವಸಗಳ ವರೆಗೆ ಏಕಾ೦೭ವಾದ ಸ್ಥಳದಲ್ಲಿ ವಾಸ ಮಾಡಿಕೊಂಡಿರಬೇಕೆಂದು ಯೋಚಿಸಿದನು. ತನ್ನ ತಂದೆಯ ಅಸ್ಥಿಗಳನ್ನು ಯಾವುದಾದರೊಂದು ತೀರ್ಥದಲ್ಲಿ ಚಲ್ಲುವದರ ಸಲುವಾಗಿ ಅವನಿಗೆ ಒಮ್ಮಿಲ್ಲೊಮ್ಮೆ ಹೋಗಲೇಬೇಕಾಗಿತ್ತು. ಆಸ್ಥಿಗಳನ್ನು ತೆಗೆದುಕೊಂಡು ತಾನು ಪೂರ್ವದಲ್ಲಿ ಬ್ರಹ್ಮಚರ್ಯಾವಸ್ಥೆಯಲ್ಲಿರುವಾಗ ವಾಸ ಮಾಡಿಕೊಂಡಿದ್ದ ಕ್ಷೇತ್ರಕ್ಕೆ ಹೊರಟನು. ಆ ಕ್ಷೇತ್ರವು ಬಹಳ ಪವಿತ್ರವಾಗಿಯೂ, ಸಮಾಧಾನಕಾರಕವಾಗಿಯೂ ಇದ್ದದರಿ೦ದ, ಅಸ್ಥಿ ವಿಸರ್ಜನದ ವಿಧಿಯು ಮುಗಿದ ಬಳಿಕ ಮನಸ್ಸಿಗೆ ಸ್ವಲ್ಪ ವಿರಾಮವುಂಟಾಗಬೇಕೆಂದು ಆ ಕ್ಷೇತ್ರದಲ್ಲಿಯೇ ಅವನು ಅನೇಕ ದಿವಸಗಳವರೆಗೆ ಉಳಿದನು. ಬ್ರಹ್ಮಚರ್ಯಾಶ್ರಮದಲ್ಲಿ ವಾಸ ಮಾಡಿಕೊಂಡಿರುತ್ತಿದ್ದ ಮಠದಲ್ಲಿಯೇ ಈಗಲೂ ಅವನು ಇರಹತ್ತಿದನು, ಸ್ಥಲವನ್ನು ನೋಡಿ ಅವನಿಗೆ ಗತಕಾಲೀನ ಸುಖಸಮಾಧಾನಗಳ ಸ್ಮರಣವಾಗಿ ಅವನ ನೇತ್ರಗಳು ನೀರಿನಿಂದ ತುಂಬಿಕೊಂಡವು. ಮಠದಲ್ಲಿಯ ಒಂದು ಬಾಗಿಲವಾಡದಲ್ಲಿ, ಪುರೋಹಿತ ಕೂಡ ಈ ಸ್ಥಳವನ್ನು ಬಿಟ್ಟು ಹೋಗುವಾಗ ಆವನು ಇಟ್ಟಿದ್ದ ಅವನ ಪ್ರಥಮಾಶ್ರಮದ ಮಧುಕರಿಯ ಜೋಳಿಗೆಯ, ಕೌಪೀನವೂ ಅವನಿಗೆ ದೊರೆದವು, ಆವನ ಪೂರ್ವ ವೃತ್ತವು ಅವನ ನೆನಪಿಗೆ ಸ್ಪಷ್ಟವಾಗಿ ಬರುವದಕ್ಕೆ ಇವು ವಿಶೇಷವಾಗಿ ಕಾರಣಗಳಾದವು ನಾನು ಇಲ್ಲಿಯೇ ಇರುತ್ತಿದ್ದೆನು, ಇಲ್ಲಿಯೇ ಕುಳಿತುಕೊಳ್ಳುತ್ತಿದ್ದೆನು, ಎದುರಿನಲ್ಲಿ ಹರಿಯುವ ಇದೇ ಪ್ರವಾಹದಲ್ಲಿಯೇ ನಾನು ನಿತ್ಯದಲ್ಲಿಯೂ ಸ್ನಾನವನ್ನು ಮಾಡುತ್ತಿದ್ದೆನು, ಇದೇ ವೃಕ್ಷದ ಕೆಳಗೆ ಕುಳಿತುಕೊಂಡು ಸಂಧ್ಯಾವಂದನೆಯನ್ನೂ ವೇದಾಧ್ಯಯನವನ್ನೂ ಮಾಡುತ್ತಿದ್ದನು. ಆಗ್ಗೆ ನಾನು ಎಷ್ಟು ಸುಖಿಯಾಗಿದ್ದೆನು ? ಚಿಕ್ಕಂದಿನಲ್ಲಿಯ ನನ್ನ ಸುಖವನ್ನು ನನಗೆ ಯಾರು ತಂದು ಕೊಡುವರು? ಇಲ್ಲಿ ನಾನು ಸುಖಿಯಾಗಿದ್ದನು ; ಆದರೆ ನನ್ನ ದುರ್ದೈವವು ಬಂದೊದಗಿದ್ದರಿಂದ, ಆ ಉಪಾಧ್ಯಾಯನ ಮಾತಿಗೆ ಮರುಳಾಗಿ ಅವನ ಬೆನ್ನು ಹತ್ತಿ ಹೋದನು. ಈ ಶ್ರೀಮಂತಿಕೆಯ ಪ್ರಸಂಗವು ನನ್ನ ಮೇಲೆ ಬಂದೊದಗುವದೆಂದು ನನಗೆ ಮೊದಲೇ ವಿದಿತವಾಗಿತ್ತು. - ಇದೇ ಆ ಸ್ಥಲವು; ಇಲ್ಲಿಯೇ ನಾನು ಮಲಗಿಕೊಂಡಿದ್ದೆನು. ಇಲ್ಲಿಯೇ ಆ ಕರ್ಮಾಧಿ