ಪುಟ:ಬೆಳಗಿದ ದೀಪಗಳು.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವನ್ಮದ ವಿಧಿಯು ತಾ ಬೆನ್ನು ಬಿಡದು

೧೨೯

ವೈಭವದ ವಿಷಯವಾಗಿ ಅವನನ್ನು ಸ್ತುತಿಸಹತ್ತಿದನು. ಅದನ್ನು ಕೇಳಿ ಭೋಲಾನಾಥನ ಕಣ್ಣುಗಳೊಳಗಿಂದ ಅಶ್ರುಧಾರೆಗಳು ನಡೆದವು. ಅವನು ತನ್ನ ಮನಸಿನಲ್ಲಿ ಅಂದದ್ದು: ಈ ಬಿಕ್ಕ ಬೇಡುವವನ ಭಾಗ್ಯವನ್ನು ಎಷ್ಟೆ೦ಕು ಬಣ್ಣಿಸಲಿ? ಪಾಪ, ಈ ಬಡವನ ಹತ್ತಿರ ಬಂಗಾರದ ಒಂದಾದರೂ ಮೋಹರವಿರಲಿಕ್ಕಿಲ್ಲೆಂಬ ಮಾತು ನಿಜವಾಗಿದ್ದರೂ ಇವನಿಗೆ ಪಿಶಾಚಿಗಳ ಕೂಡ ಕದನವನ್ನು ಮಾಡುವ ಪ್ರಸಂಗವು ಎಂದೂ ಒದಗುತ್ತಿರಲಿಕ್ಕಿಲ್ಲ. ಇವನ ಭಿಕ್ಷಾಪಾತ್ರೆಯಲ್ಲಿ ತುಂಬಿದ ಸುಖವು ನನ್ನ ಬೆಳ್ಳಿ ಬಂಗಾರಗಳ ಪಾತ್ರೆಯಲ್ಲಿಲ್ಲ. ಇವನ ಮೈಮೇಲಿರುವ ಹರಕ ಬಟ್ಟೆಗಳಲ್ಲಿ ಸಂಚಿತವಾಗಿದ್ದ ಸಮಾಧಾನವು, ಬೆಲೆಬಾಳುವ ನನ್ನ ವಸ್ತ್ರಗಳಲ್ಲಿಲ್ಲ. ಶ್ರೀಮಂತಿಕೆಯ ಕಿ೦ತ ಬಡತನವು ಬಹು "ಲೇಸು. ಆದರೆ, ಹತಭಾಗ್ಯನಾದ ನನಗೆ ಅದು ದೊರೆಯುವದಾದರೂ ಹೇಗೆ? ಈ ಸಂಪತ್ತಿನ ಸಂಕಟಗಳಿಂದ ನನ್ನನ್ನು ಯಾರು ಮುಕ್ತ ಮಾಡುವರು ? ಪ್ರಕಾರದ ವಿಚಾರ ತರಂಗಗಳು ಅನೇಕ ಸಾರೆ ಅವನ ಮನಸ್ಸಿನಲ್ಲಿ ಬರುತ್ತಿದ್ದವು.

****

ಗಿರಿಜಾಬಾಯಿಯ ಸಂಶಯವು ದಿನದಿನಕ್ಕೆ ಹೆಚ್ಚಾಗಹತ್ತಿತು. ಭೋಲಾನಾಥನ ತಾಯಿಯು ಗರ್ಭಿಣಿಯಾಗಿರುವದನ್ನು ಅವಳು ತರ್ಕಿಸಿಸಿದಳು. ತನ್ನ ಮಗನಿಗೆ ಕೌಟುಂಬಿಕ ಕೇಶಗಳಾಗಬಾರದೆಂದು ಭೋಲಾನಾಥನ ತಾಯಿಯ ಗರ್ಭದ ಚಿನ್ನಗಳನ್ನು ತೋರಗೊಡುತ್ತಿದ್ದಿಲ್ಲ. ಮುಚ್ಚು ಮರೆಯನ್ನು ಕಂಡು, ತನ್ನ ಮನೋಗತವಾದ ಸಂಶಯಕ್ಕೆ ಹೆಚ್ಚಿನ ಪ್ರತ್ಯಂತರದ ಅವಶ್ಯಕತೆಯಿಲ್ಲೊಂದು ಗಿರಿಜಾಬಾಯಿಯು ಭಾವಿಸಿದಳು. ಆವಳು ತಾಯಿಮಕ್ಕಳ ಆಚರಣೆಗಳನ್ನು ವಿಶೇಷವಾಗಿ ಲಕ್ಷಗೊಟ್ಟು ನಿರೀಕ್ಷಿಸ ಹತ್ತಿದಳು. ಕೆಲವು ತಿಂಗಳಾದ ಬಳಿಕ ಪತಿ ನಿಧನದಿಂದ ವ್ಯಾಕುಳಾದ ಗಿರಿಜಾಬಾಯಿಯ ಅತ್ತೆಯು ತನ್ನ ತವರಮನೆಗೆ ಹೋದಳು. ಬೋಲಾನಾಥನಾದರೂ ಚಿಂತಾಗ ಸ್ವನಾದ್ದರಿಂದ ತಾರುಣ್ಯದಲ್ಲಿ ಕೂಡ ಅವನಿಗೆ ಸ್ತ್ರೀಸೌಖ್ಯವು ಸುಖಕರವಾಗಿ ಪರಿಣಮಿಸಲಿಲ್ಲ. ಭೋಲಾನಾಥನ ಪರಿಸ್ಥಿತಿಯ ಕಲ್ಪನೆಯು ಗಿರಿಜೆ ಬಾಯಿಗೆ ಇಲ್ಲದ್ದರಿಂದ ಅನ್ಯ ಪ್ರೇಮವೇ ತನ್ನ ವಿಷಯವಾಗಿ ತನ್ನ ಗಂಡನ ಉದಾಸೀನತೆಗೆ ಕಾರಣವೆಂದು ಅವಳು