ಪುಟ:ಬೆಳಗಿದ ದೀಪಗಳು.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೮

ಸಂಪೂರ್ಣ-ಕಥೆಗಳು

ಮತ್ಸರಾಗ್ನಿಯು ಅಮರ್ಯಾದಿತವಾಗಿ ಪ್ರದೀಪಿಸಿ ಅವಳು ಹೆಚ್ಚಿಗೆ ಸಂಶಯಗ್ರಸ್ತಳಾದಳು. ಇಷ್ಟರಲ್ಲಿ ಭೋಲಾನಾಥನು ಬಾಗಿಲವನ್ನು ತೆರೆದು ಹೊರಗೆ ಬಂದನು. ಬಾಗಿಲದ ಹತ್ತಿರ ನಿಂತುಕೊಂಡಿದ್ದ ತನ್ನ ಹೆಂಡತಿಯನ್ನು ಕಂಡು ಅವನಿಗೆ ಆಶ್ಚರ್ಯವೆನಿಸಿತು. ಆದರೆ, ಅವಳ ಬೆನ್ನು ಹಿಂದೆ ತುಸು ಅ೦ತರದ ಮೇಲೆ ಅವನಿಗೆ ಸ್ವಪ್ನದಲ್ಲಿ ದೃಗ್ಗೋಚರವಾಗಿದ್ದ ಪುರುಷನ ಅಸ್ಪಷ್ಟವಾದ ಆಕೃತಿಯನ್ನು ಆವನು ನೋಡಿದ ಕೂಡಲೆ, ಅವನಿಗಾದ ವಿಸ್ಮಯದ ಕಲ್ಪನೆಯನ್ನು ಮಾಡುವದು ಯಾರಿಗಾದರೂ ಅಶಕ್ಯವಾದದ್ದು. ಈ ಆಕೃತಿಯು ಆ ಕರ್ಮಾಧಿಕಾರಿಯದು. "ಇವನ್ಯಾರು ? ನಾನು ಹೋದಲ್ಲಿ ಬಂದಲ್ಲಿ ಇವನು ನನ್ನ ಬೆನ್ನು ಬಿಡುವಿದಿಲ್ಲ. ಇವನ ಉದ್ದೇಶವಾದರೂ ಏನು ? ಸ್ವಪ್ನದಲ್ಲಿ ತಾನು ಕರ್ಮಾಧಿಕಾರಿಯೆಂದು ನನಗೆ ಹೇಳಿದನು; ಇದರ ಅರ್ಥವಾದರೂ ಏನು? ” ಹೀಗೆ ಅನೇಕ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಉದ್ಭವಿಸಿದವು. ಆದರೆ, ಅವನ ದತ್ತಕ ತಂದೆಯ ಪ್ರಕೃತಿಯು ತೀರ ಅಸ್ವಸ್ಥವಾದ್ದರಿಂದ ಹೆಚ್ಚಿಗೆ ವಿಚಾರಗಳನ್ನು ಮಾಡಲು ಅವನಿಗೆ ಅವಕಾಶವಿದ್ದಿಲ್ಲ.

ಭೋಲಾನಾಥನ ತಂದೆಯು ಮರಣ ಹೊಂದಿದ ಬಳಿಕ ಅವನ ಉತ್ತರಕ್ರಿಯಾದಿ ವಿಧಿಗಳು ಯಥಾಶಾಸ್ತ್ರವಾಗಿ ಮಾಡಲ್ಪಟ್ಟವು. ಅವನ ಅಸ್ಥಿಗಳನ್ನು ಯಾವದಾದರೊಂದು ತೀರ್ಥದಲ್ಲಿ ಒಗೆಯುವ ಕೆಲಸವಷ್ಟೇ ಉಳಿಯಿತು. ಇದರ ಹೊರತಾಗಿ ಉಳಿದ ಎಲ್ಲ ಕೆಲಸಗಳು ತೀರಿಹೋಗಿ ಮನೆಯಲ್ಲಿ ಹೇರಳವಾಗಿದ್ದ ದ್ರವ್ಯಕ್ಕೆ ಇವನೇ ಯಜಮಾನನಾದನು. ಆದರೆ, ಅದರ ಕೂಡ ಇವನಿಗೆ ಸುಖಸಮಾಧಾನಗಳು ಮಾತ್ರ ದೊರೆಯಲಿಲ್ಲ. ಮಧ್ಯಾಹ್ನ ರಾತ್ರಿಯಾಯಿತೆಂದರೆ, ಅವನ ಮೈ ತುಂಬ ಮುಳ್ಳು ಬರುತ್ತಿದ್ದವು. ಗತಿಸಿಹೋದ ಸಂಗತಿಗಳ ಸ್ಮರಣವಾಗಿ ಬೆವರಿನಿಂದ ಮೈಯು ತೊಯ್ಯುತ್ತಿತ್ತು. ತನ್ನ ಸುತ್ತಲಿನ ಜನರೆಲ್ಲ ಗಾಢವಾದ ಸುಖನಿದ್ರೆಯಲ್ಲಿದ್ದದ್ದನ್ನು ನೋಡಿ ಇವನಿಗೆ ಅವರ ವಿಷಯವಾಗಿ ಮತ್ಸರವೆನಿಸುತ್ತಿತ್ತು. 'ಇವರು ಎಂಥ ಭಾಗ್ಯಶಾಲಿಗಳು! ನಾನು ಧನಿಕನಾಗಿದ್ದರೂ ಭಾಗ್ಯಹೀನನೇ.' ಎಂದು ಅವನಿಗೆ ಅನಿಸುತ್ತಿತ್ತು. ಒಂದು ದಿವಸ ಬಿಕ್ಷೆ ಬೇಡುವವನೊಬ್ಬ ಮಾರ್ಗ ಹಿಡಿದು ಹೋಗುತ್ತಿದ್ದನು. ಇವನು ಭೋಲಾನಾಥನನ್ನು ನೋಡಿ, ಅವನ