ಪುಟ:ಬೆಳಗಿದ ದೀಪಗಳು.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

ತನ್ನ ಅನುಪಮೇಯವಾದ ಸೌಂದರ್ಯ ಮತ್ತು ಆಶ್ಚರ್ಯಪೂರ್ಣವಾದ ಚರಿತ್ರ ಇವುಗಳ ಯೋಗದಿಂದ ಇಡೀ ಜಗತ್ತಿನ ಇತಿಹಾಸದಲ್ಲಿ ಚಿರಸ್ಮರಣೀಯವಾಗಿದ್ದ ನೂರಜಹಾನಳಿಗೆ ಸರಿಯಾದ ಸುಪ್ರಸಿದ್ಧ ಸ್ತ್ರೀಯರು ವಿರಳವಾಗಿ ದೊರೆಯುವರು. ಆಸೀರಿಯಾ ಪ್ರಾಂತದಲ್ಲಿ ಸೇಮಿರಾಮಿಸ ರಾಣಿಯು ಅಥವಾ ಇಜಿಪ್ತ ದೇಶದಲ್ಲಿ ಕ್ಲಿವೋಪಾದ್ರಾ ರಾಣಿಯು ತಮ್ಮ ಅನಿ ಯಂತ್ರಿತವಾದ ಅಧಿಕಾರವನ್ನು ನಡೆಸಿದಂತೆ ಸಾರ್ವಭೌಮ ಬಾದಶಹಾ ಜಹಾಂಗೀರನ ಮೇಲೂ ಅವನ ಪ್ರಚಂಡವಾದ ರಾಜ್ಯದ ಮೇಲೂ ನೂರಜಹಾನ ಇವಳು ಇಪ್ಪತ್ತು ವರ್ಷಗಳ ವರೆಗೆ ತನ್ನ ಅಖಂಡವಾದ ಸತ್ತೆಯನ್ನು ನಡೆಸಿದಳು.

ಈ ಸೌಂದರ್ಯಶಾಲಿನಿಯಾದ ಸ್ತ್ರೀಯ ಬಾಲಕತನದ ಮತ್ತು ಪ್ರೌಢತ್ವದ ಇತಿಹಾಸವು ಸರ್ವತ್ರ ಆಶ್ಚರ್ಯಮಯವಾಗಿ ಕಂಡುಬರುತ್ತದೆ. ನೂರಜಹಾನಳ ತಂದೆಯಾದ ಖ್ವಾಜಾಆಯಾಸ ಇವನು ಪಶ್ಚಿಮಾರ್ತರಿಯ ಮೂಲನಿವಾಸಿಯಾಗಿದ್ದು, ತನ್ನ ದೈವಪರೀಕ್ಷೆಯನ್ನು ಮಾಡುವದರ ಸಲುವಾಗಿ ಜನ್ಮಭೂಮಿಯನ್ನು ಬಿಟ್ಟು ಹಿಂದುಸ್ಥಾನಕ್ಕೆ ಬಂದಿದ್ದನು. ಸುಪ್ರಸಿದ್ಧವಾದ ಒಂದು ದೊಡ್ಡ ಕುಲದಲ್ಲಿ ಇವನು ಜನ್ಮವನ್ನು ತಾಳಿದ್ದರೂ ದುರ್ದೈವದ ಚಕ್ರದಲ್ಲಿ ಸಿಲುಕಿ ಇವನ ಮನೆತನವು ತೀರ ಹೀನಸ್ಥಿತಿಗೆ ಬಂದು ಮುಟ್ಟಿತ್ತು. ಇವನಿಗೆ ಕೊಡುವದಕ್ಕೆ ಇವನ ತಂದೆಯ ಹತ್ತರ ದ್ರವ್ಯವಿರದಿದ್ದರೂ ಅವನಿಂದ ಇವನಿಗೆ ದೊರೆದ ವಸ್ತುಏನ ಯೋಗ್ಯತೆಯು ದ್ರವ್ಯದಕಿಂತ ಎಷ್ಟೋ ಮಡಿಯಿಂದ ದೊಡ್ಡದಾಗಿತ್ತು. ಆ ದೊರೆದ ವಸ್ತುವೆಂದರೆ, ಉದಾರಿ ಶಿಕ್ಷಣವು ಈ ಶಿಕ್ಷಣದ ಸಂಸ್ಕಾರವು ಖ್ಯಾ ಜಾಆಯಾಸ ಇವನ ಬುದ್ಧಿಯ ಮೇಲೆ ಹಾಗು ಅ೦ತಃಕರಣದ ಮೇಲೆ ಒಳಿತಾಗಿ ಆಗಿತ್ತು. ಇವನ ಮನೆತನದಂತೆ ಹೀನಸ್ಥಿತಿಯನ್ನು ಹೊಂದಿದ ಒಂದು ಮನೆ ತನದೊಳಗಿನ ಸುಸ್ವರೂಪಿಯಾದ ತರುಣಿಯ ಮೇಲೆ ಇವನು ತನ್ನ ತಾರುಣ್ಯದ ಪ್ರಾರಂಭದಿಂದಲೇ ಪ್ರೇಮ ಮಾಡಹತ್ತಿದ್ದನು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಅವರ