ಪುಟ:ಬೆಳಗಿದ ದೀಪಗಳು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಸಂಪೂರ್ಣ-ಕಥೆಗಳು

ಖೋಮನ್ ಬಹಾದ್ದರನು ಹೇಗೆ ಉಚ್ಚಸ್ವರಿಂದ ಹೇಂಕರಿಸಿ ನನ್ನನ್ನು ಕರೆಯುತ್ತಿರುವನು?”

"ಹೋಗಿ ಬನ್ನಿರಿ ನನ್ನ ಮುದ್ದು ಮಕ್ಕಳೆ! ಕಂಡಿರೋ, ಯುದ್ಧ ಮಾಡುವಾಗ ಬೇರೆ ವಿಚಾರಗಳಿಗೀಡಾಗದೆ ಕೀರ್ತಿಯನ್ನೊಂದನ್ನೇ ಅನುಲಕ್ಷಿಸಿ ಸಾಹಸಮಾಡಿರಿ. ನಿಮ್ಮನ್ನು ಹಡೆದಾಗ ನನಗೆಷ್ಟು ಸಂತೋಷವೊ, ಅದಕ್ಕಿಮ್ಮಡಿಯಾದ ಸಂತೋಷವು ನೀವು ವೀರರಂತೆ ಯುದ್ಧ ಮಾಡಿ ರಣದಲ್ಲಿ ಮಡಿದ ವರ್ತಮಾನವನ್ನು ಕೇಳಿದಾಗ ಆಗುವದು. ಅಮಂಗಲವು ದೂರವಾಗಲಿ! ನೀವು ವಿಜಯಿಗಳೇ ಆಗಿ ಮರಳಿ ಬರುವಿರೆಂದು ನಾನು ಆಶಿಸುತ್ತೇನೆ ” ಎಂದು ದೇವಲದೇವಿಯು ಪೊಂದಟ್ಟೆಯಲ್ಲಿಯ ಅನರ್ಘವಾದ ಮುತ್ತುಗಳನ್ನು ತೆಗೆದುಕೊಂಡು ಮಕ್ಕಳ ಮೇಲೆ ನಿವಾಳಿಸಿ ಚಲ್ಲಿ ಅವರನ್ನು ಆಶೀರ್ವದಿಸಿ ಕಳಿಸಿಕೊಟ್ಟಳು.

ಏನಂದರೇನು? ಇಂಥ ಪ್ರಸಂಗದಲ್ಲಿ ಹಡೆದ ತಾಯಿಯ ಕರುಳು ಕರಗಿ ನೀರಾಗದಿರುವದೆ? ಅಲಾ ಉದಿಲ್ಲರು ಉತ್ಸಾಹದಿಂದ ತಮ್ಮ ಕುದುರೆಗಳನ್ನೋಡಿಸುತ್ತ ಹೋಗಿ, ದೇವಲದೇವಿಯ ಕಣ್ಮರೆಯಾದ ಕೂಡಲೆ ಆ ಅಬಲೆಯ ಕಣ್ಣುಗಳಲ್ಲಿ ಅಶ್ರುಗಳೊತ್ತಿಬಂದವು. ಯಾರಿಗೂ ತೋರಗೊಡದಂತೆ ಅವಳು ಆ ಸವಿಯಾಗದಿರುವ ನೀರಹನಿಗಳನ್ನು ಮೆಲ್ಲನೆ ಒರಸಿಕೊಂಡು ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿಟ್ಟು ಭಗವಂತನ ಮಂಗಲಪ್ರದವಾದ ಸ್ತುತಿಯುಳ್ಳ ಪದಗಳನ್ನು ಹಾಡುತ್ತೆ ಕುಳಿತಳು.

ಕಥೆಯನ್ನು ಕೇಳುವವರಿಗೆ ಬೇಸರಿಕೆಯೇ ಇರುವದಿಲ್ಲ. ಇಷ್ಟಾದ ಬಳಿಕ ಮುಂದೇನಾಯಿತೆಂದು ಅವರು ಕಥೆಗಾರರನ್ನು ಪೀಡಿಸಿ ಕೇಳುವವರೇ. ಆದರೆ ಕಥೆಗಾರನ ಗತಿಯೇನು? ಮುಂದಿನ ಸಂಗತಿಗಳನ್ನು ಅರಿತುಕೊಳ್ಳುವ ಲವಲವಿಕೆ ವಾಚಕರಿಗಿದ್ದರೆ ಇತಿಹಾಸದ ಪುಸ್ತಕಗಳಿವೆ, ಹುಡುಕಾಡಿ ನೋಡಲಿ.