ಪುಟ:ಬೆಳಗಿದ ದೀಪಗಳು.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೨೫

ರುವಿ. ನೀನು ದೇವಪುರುಷನಾದಿ. ಈ ವೇಷಕ್ಕೆ ಸದೃಶವಾದ ಪರಾಕ್ರಮವನ್ನು ಮಾಡಿ ತೋರಿಸು, ಮತ್ತೇನು ಹೇಳಲಿ ?"

ಅಷ್ಟರಲ್ಲಿ ಊದಿಲ್ಲನೂ ಕೇಸರೀ ಪೋಷಾಕು ಮಾಡಿಕೊಂಡು ತನ್ನ ಖಡ್ಗವನ್ನು ಒಯ್ಯಾರದಿಂದ ಬೀಸಾಡುತ್ತೆ ಬಂದು ದೇವದೇವಿಯ ಕಾಲ್ಗೆರಗಿ ಉಲ್ಲಾಸದಿಂದ ನಗುತ್ತೆ ನಿಂತನು.

"ಉದಿಲ್ಲ, ನೀನೇತಕಿ೦ಥ ಪೋಷಾಕು ಮಾಡಿಕೊಂಡಿ? ನಿನ್ನನ್ನು ನಗರರಕ್ಷಣಕ್ಕಾಗಿ ನಿಯಮಿಸಿದ್ದಿಲ್ಲವೆ ?" ಎಂದು ತಾಯಿಯು ತುಸು ಚಕಿತಳಾಗಿ ಕೇಳಿದಳು

"ಅಮ್ಮಾ, ನಿನ್ನ ಪ್ರಶ್ನೆಗಳಿ೦ದಿನ್ನೇನು ಪ್ರಯೋಜನ? ತೊಟ್ಟ ಬಳಿಕ ಈ ಪೋಷಾಕವನ್ನು ಕಳೆಯಬಾರದಷ್ಟೆ? ” ಎಂದು ಉದಿಲ್ಲನು ಆಲರಾಯನ ಮಂದೀಲದ ಚುಂಗನ್ನು ಚನ್ನಾಗಿ ಸಿಕ್ಕಿಸುತ್ತೆ ನುಡಿದನು. (ಬಾಹ್ಮಣರಲ್ಲಿ ಇದಕ್ಕೂ ಘೋರತರವಾದ ಪ್ರತಿಜ್ಞೆಯಿರುವದು. ಅವರು ಊಟಕ್ಕೆ ಕುಳಿತಾಗ ಒಂದಾವರ್ತಿ ಕಡೆಯ ಆಪೋಶನವನ್ನು ತೆಗೆದುಕೊಂಡರೆ ಪುನಃ ಒಂದು ತುತ್ತು ಕೂಡಾ ಬಾಯಿಯಲ್ಲಿ ಹಾಕಲಿಕ್ಕಿಲ್ಲ !)

ಉದಿಲ್ಲನ ಸಲೀಲವಾದ ನುಡಿ ಕೇಳಿ "ನಿನಗೀ ಪೋಷಾಕು ಮಾಡಿಕೊಳ್ಳಲು ಯಾರು ಹೇಳಿದರು?” ಎಂದು ದೇವಲದೇವಿಯು ಕೇಳಿದಳು.

"ಯಾರೇಕೆ ಹೇಳಬೇಕು ಅವ್ವಾ? ಈ ನಮ್ಮ ಅಣ್ಣನೂ ನಾನೂ ಭಾಗಾದಿಗಳಷ್ಟೆ? ಸಮಸ್ತವಾದ ವಸ್ತುಗಳಲ್ಲಿ ಇವನೂ ನಾನೂ ಸಮಪಾಲುಗಾರರು. ಹೀಗಿರಲು ಈ ಕೃತ್ರಿಮಭಾವದವನು ನನ್ನ ಪಾಲಿಗೆ ಈ ಮಣ್ಣಿನ ಭೂಮಿಯನ್ನಿಟ್ಟು ತಾನೊಬ್ಬನೇ ವೀರಸ್ವರ್ಗವನ್ನು ಆಕ್ರಮಿಸುವೆನೆಂದರೆ ನಾನು ಕೇಳುವೆನೆ ?"

ಧನ್ಯತೆಯ ಭರದಲ್ಲಿ ದೇವಲದೇವಿಯು ಓಡಿ ಬಂದು ತನ್ನ ಕಡೆಹುಟ್ಟ ಮಗನಾದ ಉದಿಲ್ಲನನ್ನು ಗಟ್ಟಿಯಾಗಿ ಅಪ್ಪಿಕೊಂಡು ಆನಂದಾಶ್ರುಗಳನ್ನು ಸುರಿಸಿದಳು.

"ಅಮ್ಮಾ, ಬೇಗನೆ ನನಗೆ ಅಪ್ಪಣೆಕೊಡು. ನಾವು ಮಾಡುವ ಕಾಲಹಾನಿಯನ್ನು ನಮ್ಮ ರಾಜನು ಕ್ಷಮಿಸಿದರೂ ಕ್ಷಮಿಸುವನು, ಆದರೆ ನನ್ನ ಕುದುರೆಯು ಒಂದು ಕ್ಷಣದ ತಡವನ್ನು ಕ್ಷಮಿಸಲಾರದು. ಕೇಳಿದಿಯಾ