ಪುಟ:ಬೆಳಗಿದ ದೀಪಗಳು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಸಂಪೂರ್ಣ-ಕಥೆಗಳು

ಮಲ್ಲನು ರಣಕ್ಕೆ ಅಂಜಿ ಜಕಜಕನೆ ಜರಿಯುತ್ತಿರುವನು. ಹೇಡಿಯ ಬೆನ್ನು ಕಟ್ಟಬಾರದೆಂದು ಏಕೆ ಅನ್ನುತ್ತಾರೆ? ಈ ಪುರಮಲ್ಲನ ಬೆನ್ನು ಕಟ್ಟಿ ಬಂದವನಾದ ನಾನು ಈಗಲೆ ನಿಮ್ಮ ನಿಂದೆಗೆ ಗುರಿಯಾದೆನಲ್ಲ !"

"ಚಿಂತೆಯಿಲ್ಲ, ಬಹದ್ದರನಾದ ನನ್ನ ಮಗನೆ! ಆದರೂ ಪುರಮಲ್ಲನು ರಣಭೂಮಿಯನ್ನು ಹೋಗಲು ಮೀನಮೇಷ ಮಾಡುತ್ತಿರುವದನ್ನು ಕಂಡು ನನಗೆ ಅತಿಶಯವಾದ ವಿಷಾದವಾಗುತ್ತದೆ. ನಾನೀಗಲೆ ಮುಲುಂದ ದೇವಿಯನ್ನು ಕಂಡು ಅವಳ ಮುಖಾಂತರವಾಗಿ ಮೂಢನಾದ ಅವಳ ಗಂಡನನ್ನು ಇಂದೆಯೇ ರಣಕ್ಕೆ ಅಟ್ಟುವಂತೆ ಮಾಡುವೆನು."

ಇಂದು ವೀರರೆಲ್ಲರೂ ಯುದ್ಧಕ್ಕೆ ಹೊರಡುವವರು. ಸುಗಂಧ ತೈಲಗಳನ್ನು ಹಚ್ಚಿಕೊಂಡು ಅವರು ಅಭ್ಯಂಗ ಸ್ನಾನ ಮಾಡಿದರು ; ಕನ್ನಡಿಯಂತೆ ಹೊಳಪಾಗಿರುವ ತಮ್ಮ ಶಸ್ತ್ರಗಳ ಧಾರೆಯನ್ನು ಪರೀಕ್ಷಿಸಿ ನೋಡಿದರು ತಮ್ಮ ಪ್ರೀತಿಯ ಕುದುರೆಗಳಿಗೆ ಉತ್ತಮೋತ್ತಮವಾದ ತಿನಿಸು ನೀಡಿದರು; ಭೋಜನೋತ್ತರ ಮಿತ್ರರೆಲ್ಲರೂ ಕೂಡಿ ಅಫೀಮಿನ ಗುಳಿಗೆಗಳನ್ನು ಸೇವಿಸಿ ಕುಸುಂಬೆಯ ಕಾಡೆಯನ್ನು ಕುಡಿದು ಹುರುಪಾದರು. ಬಳಿಕ ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡು ಆ ಪ್ರರಿಷ್ಟರ ಕಡೆಯ ಭೆಟ್ಟಿಯನ್ನು, ಆನಂದ ಭರಿತವಾದ ಮುಖಮುದ್ರೆಯನ್ನು ತಳೆದು, ತೆಗೆದುಕೊಂಡು ರಣರಂಗವನ್ನು ಪ್ರವೇಶ ಮಾಡಿದರು.

ಸುಂದರನೂ, ಪೀನೋನ್ನತವಾದ ದೇಹವುಳ್ಳವನೂ ಆದ ಆಲಾರಾಯನು ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡು ದಟ್ಟಾಗಿರುವ ತನ್ನ ಮೀಸೆಗೆ ಒಳಿತಾಗಿ ಹುರಿಯಿಕ್ಕಿ ಕೈಯಲ್ಲಿ ಬಿಚ್ಚುಗತ್ತಿಯನ್ನು ಹಿಡುಕೊಂಡು ತನ್ನ ಮಾತೆಯ ಪಾದವಂದನಕ್ಕಾಗಿ ಬಂದು ಅವಳ ಎದುರಿನಲ್ಲಿ ಮಂದಸ್ಮಿತನಾಗಿ ನಿಂತುಕೊಂಡನು ಭೀಮಸೇನನಂತೆ ವಿಕ್ರಮಶಾಲಿಯಾದ ಮಗನ ಪ್ರಫುಲ್ಲಿತವಾದ ಮುಖವನ್ನೂ, ಅವನ ವಿಚಿತ್ರವಾದ ವೇಷವನ್ನೂ ಕಂಡು ಆ ಮಾತೆಯು ಕೃತಾರ್ಥಳಾಗಿ ಅವನನ್ನು ಅಪ್ಪಿಕೊಂಡು ಹರಿಸಿ "ಆಲಾರಾಯಾ, ನಿನ್ನ ಭುಜದ ಮೇಲೆ ವಿಜಯಲಕ್ಷ್ಮಿಯು ನಲಿದಾಡಲಿ! ಬಂಟನಾಗಿ ಶತ್ರುಗಳ ಎದೆಯನ್ನೂ, ವೀರ ಸ್ವರ್ಗದ ಸೋಪಾನವನ್ನ ಮೆಟ್ಟುವವನಾಗು. ನೀನೀಗ ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡಿ