ಪುಟ:ಬೆಳಗಿದ ದೀಪಗಳು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೨೩

ಉದಿಲ್ಲರನ್ನೂ ದೇವಲದೇವಿಯನ್ನೂ ಎದಿರ್ಗೊ೦ಡು ಕರಕೊಂಡು ಹೋಗಲು ಅರ್ಧ ಹಾದಿಗೆ ಬಂದಿದ್ದರು. ಪುರಮಲ್ಲನು ರಾಜನಾಗಿದ್ದರೂ ಅಭಿಮಾನವನ್ನು ಬಿಟ್ಟು ಅಲಾ ಉದಿಲ್ಲರನ್ನು ಆದರದಿಂದ ಅಪ್ಪಿಕೊಂಡು ತಾನು ಮಾಡಿದ ಅಪರಾಧವನ್ನು ಕ್ಷಮಿಸಬೇಕೆಂದು ಆ ಬಂಧುದ್ವಯರಿಗೆ ಬೇಡಿಕೊಂಡನು. ಮಲುಂದದೇವಿಯು, ದೇವಲದೇವಿಯ ಕೈಹಿಡಿದು "ಬನ್ನಿರಿ ವೀರಮಾತೆಯರೆ, ನೀವಿಂಥ ಮಹಾತ್ಮರಾದ ಮಕ್ಕಳನ್ನು ಹಡೆದು ದೇಶ ಸಂರಕ್ಷಣದಂಥ ಪವಿತ್ರವಾದ ಮಹತ್ಕಾರ್ಯವನ್ನು ಮಾಡಿಸಿ ಇಹಪರಗಳಲ್ಲಿಯೂ ಖ್ಯಾತಿವತಿಯರಾಗುವಿರಿ. ರಜಪೂತ ಮಾತೆಯ ಮಾಹಾತ್ಮವು ಯಾರಿಗೂ ಬಾರದು.” ಎಂದು ಸಂಭಾವಿಸಿ ಅವಳನ್ನು ತನ್ನ ಕೋಣೆಯಲ್ಲಿ ಕುಳ್ಳಿರಿಸಿಕೊಂಡು ರಾಜಧಾನಿಯ ಮಾರ್ಗವನ್ನು ಹಿಡಿದಳು. ದೇವಲದೇವಿಯ ಮಕ್ಕಳು ರಾಜನೊಡನೆ ಉತ್ಸಾಹದಿಂದ ಆಲೋಚನೆ ಮಾಡುತ್ತೆ ಮಹೋಬಾ ನಗರಕ್ಕೆ ಹೊರಟರು.

ಅಲಾ ಉದಿಲ್ಲರು ಮಹೋಬಾಕ್ಕೆ ಬಂದರೆಂಬ ವರ್ತಮಾನವನ್ನು ಕೇಳಿ ಪೃಥ್ವೀರಾಜನು ಪುರಮಲ್ಲನನ್ನು ಯುದ್ಧಕ್ಕೆ ಆಹ್ವಾನಮಾಡಿ, ಬೇಕಾದರೆ ಇಂದಿಗೇಳನೆಯ ದಿವಸ ಯುದ್ಧ ಪ್ರಾರಂಭವಾಗಲೆಂದೂ ಇಲ್ಲದಿದ್ದರೆ ಜಯ ಪತ್ರವನ್ನು ಕೊಟ್ಟು ದಿಲ್ಲಿಯ ಮಾಂಡಲಿಕನಾಗಿರಬೇಕೆಂದೂ ತಿಳಿಸಿದನು. ಇಷ್ಟು ಅತಿತರಾತುರತೆಯಿಂದ ಯುದ್ಧಕ್ಕೆ ಸನ್ನದ್ಧನಾಗಲು ಆಸ್ಪದವಿರಲಿಲ್ಲ. ಲೋಚನೆಗಳ ಮೇಲೆ ಆಪ್ತಾಲೋಚನೆಗಳು ನಡೆದವು.

ಆಗ ದೇವಲದೇವಿಯು ತನ್ನ ಜೇಷ್ಠ ಪುತ್ರನನ್ನು ಕರೆದು “ಆಲಾ, ಯುದ್ಧಕ್ಕೆ ಹೊರಡಲು ನಿನಗೆ ಅವಕಾಶ ಬೇಕಾಗಿರುವದೇನು? ತಿಂದುಂಡು ಮೈಯಲ್ಲಿ ಪುಷ್ಟಿಯನ್ನು ತಂದುಕೊಳ್ಳಲು ಸಮಯವನ್ನು ಬೇಡುವಿರಾ?" ಎಂದು ಜರಿದು ಕೇಳಿದಳು.

ಈ ಮಾತು ಕೇಳಿ ಅಲಾನು ಕಿಂಚಿತ್ ಕ್ರುದ್ಧನಾಗಿಯೂ, ಕಿಂಚಿತ್ ಮಂದಸ್ಮಿತನಾಗಿಯೂ ತಾಯಿಯನ್ನು ಕುರಿತು "ಯಾರಿಗೆ ಈ ಮಾತಾಡುವಿ ಮಾತೆ ? ಈ ನಿನ್ನ ಮಗನು ರಣರಂಗದಲ್ಲಿ ಹೊಗಲು ಅವಕಾಶವನ್ನು ಬೇಡುವ ಹುಡುಗನೆ? ನೀರಡಿಸಿರುವ ನನ್ನೀ ಖಡ್ಗವು ಶತ್ರುಗಳ ರಕ್ತಪಾನವನ್ನು ಮಾಡಲು ಹಾತೊರೆಯುತ್ತಿರುವದು. ಆದರೇನು ಮಾಡಲಿ, ಪುರ