ಪುಟ:ಬೆಳಗಿದ ದೀಪಗಳು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಸಂಪೂರ್ಣ-ಕಥೆಗಳು

ವನ್ನು ಪಾಲಿಸುವದಕ್ಕಾಗಿ, ನಾನೇ ರಣಾಂಗಣದಲ್ಲಿ ಹೊಕ್ಕು ಶತ್ರಾಸಂಹಾರವನ್ನು ಮಾಡುವನು. ಗಂಡಸರೆಂಬವರು ಬಂದು ನನ್ನ ಪರಾಕ್ರಮವನ್ನಾದರೂ ನೋಡಲಿ !” ಎಂದು ಮಂದಿರವೆಲ್ಲ ಗದ್ದರಿಸುವಂತೆ ಉಚ್ಚಧ್ವನಿಯಿಂದ ಮಾತಾಡಿದಳು.

ಹೀಗೆ ಆವೇಶವನ್ನು ತಾಳಿ ಆದಿಶಕ್ತಿಯಂತೆ ಆರ್ಭಟಿಸಿ ಮಾತಾಡುತ್ತಿ ವಶಪಾಣಿಯಾದ ಮಾತೆಯನ್ನು ಕಂಡು, ಆ ಲೋಕೈಕವೀರರ ಮದವೆಲ್ಲ ಇಳಿದುಹೋಯಿತು. ಯಾವ ಮಾತೆಯ ಉತ್ಸಂಗದಲ್ಲಿ ಯಥೇಷ್ಟವಾಗಿ ಕುಣಿ ಕುಣಿದಾಡಿ ಸುಹಾಸಯುತವಾದ ಅವಳ ಪ್ರೇಮಲವಾದ ಮುಖಾಂಭೋಜವನ್ನು ಕಂಡು ಚನ್ನಾಟ ಮಾಡುತ್ತಿದರೋ, ಆ ಮಾತೆಯು ಇವಳೇ ಆಹುದೇನೆಂದು ಆ ತರುಣರು ಅವಳ ಮುಖವನ್ನು ಮಿಕಿಮಿಕಿ ನೋಡಿದರು. ಮಾತೃದೇವತೆಯ ಅನುಲ್ಲಂಘನೀಯವಾದ ಆಜ್ಞೆಯನ್ನು ತತ್ಕಾಲವೇ ಶಿರಸಾವಹಿಸದಿದ್ದ ಔದ್ಧತ್ಯಕ್ಕಾಗಿ ಅವರಿಗೆ ಪಶ್ಚಾತ್ತಾಪವಾಯಿತು. ಕೂಡಲೆ ಅವರು ಆ ಮಹಾಸತಿಯ ಕಾಲುಗಳನ್ನು ಗಟ್ಟಿಯಾಗಿ ಹಿಡುಕೊಂಡು ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಂಡರು

ಮಾತೆಯೇ ಅವಳು, ಕಾಲ್ಗೆರಗಿದ ಮಕ್ಕಳನ್ನು ಎತ್ತಿ ತಬ್ಬಿಕೊಂಡು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಅವಳಂದದ್ದು : "ವೀರ ಮಣಿಗಳೇ, ನಾನು ನಿಮ್ಮನ್ನು ಕ್ಷಮಿಸಿದ್ದೇನೆ. ಏಳಿರಿನ ಮಲುಂದದೇವಿಯರು ಚಂದ್ರಶಾಲೆಯಲ್ಲಿ ನಿಂತು ನಿಮ್ಮ ಮಾರ್ಗಪ್ರತೀಕ್ಷೆ ಮಾಡುತ್ತಿರುವರಂತೆ. ವಿಲಂಬ ಮಾಡದೆ ಅವರನ್ನು ಕಾಣಿಸಿಕೊಂಡು ಸುರರು ಕೊಂಡಾಡುವಂತೆ ಯುದ್ಧ ಮಾಡಿರಿ. "

ಸಂಗಡಲೆ ಹೊರಡುವ ಸಿದ್ಧತೆಯಾಯಿತು. ಅಲಾ ಉದಿಲ್ಲರು ವೀರರಿಗುಚಿತವಾದ ಪೋಷಾಕು ಮಾಡಿಕೊಂಡು ಅಶ್ವಾರೂಢರಾಗಿ ನಿಂತರು, ದೇವಲ ದೇವಿಯು ತಾನೊಂದು ಮಂಗಲೋತ್ಸವಕ್ಕಾಗಿ ಸಂಭ್ರಮದಿಂದ ಹೊರಟಿರುವಳೋ ಎಂಬಂತೆ ನಗೆಮುಖವನ್ನು ತಳೆದು ತನ್ನ ಅಂದಣವನ್ನೇರಿದಳು. ಕನೋಜದ ಕೆಲಜನ ಭಟರೂ ಆಲಾ ಉದಿಲ್ಲರ ಅನುಯಾಯಿಗಳೂ ರಹ ಗರ್ಜನೆಯನ್ನು ಮಾಡುತ್ತೆ ಮಹೋಬಾದ ಮಾರ್ಗವನ್ನು ಹಿಡಿದು ನಡೆದರು

ಪುರಮಲ್ಲರಾಜನೂ ಅವನ ರಾಣಿಯಾದ ಮುಲುಂದದೇವಿಯ ಆಲಾ