ಪುಟ:ಬೆಳಗಿದ ದೀಪಗಳು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೨೯

ಬೇಕೆಂದರೆ, ಆ ನಿರ್ಜನವಾದ ಪ್ರದೇಶದಲ್ಲಿ ಮರಣದ ಹೊರತು ಎರಡನೆಯ ಗತಿಯೇ ಇದ್ದಿದ್ದಿಲ್ಲ.

ಆದರೂ ಆ ಉಭಯತರು ಎದೆಯನ್ನು ಗಟ್ಟಿ ಮಾಡಿ ಆ ನಿರ್ಜನವಾದ ಅರಣ್ಯವನ್ನು ಹೊಕ್ಕರು. ಅವರು ಅನುಭವಿಸುತ್ತಿದ್ದ ಕಷ್ಟಾಪೇಷ್ಟೆಗಳು ಸಾಕಷ್ಟಾಗಲಿಲ್ಲವೇನೋ ಎಂಬಂತೆ ಅವರ ದುರ್ದೈವಕ್ಕನಿಸಿ ಅವರ ಮೇಲೆ ಪರಾಕಾಷ್ಠೆಯ ಪ್ರಸಂಗವು ಬಂದೊದಗಿತು. ಖಾಜಾಆಯಾಸನ ಹೆಂಡತಿಗೆ ಪ್ರಸವವೇದನೆಗಳು ಆಗಹತ್ತಿದವು. ಪ್ರಾಣವು ನಿಲ್ಲುತ್ತದೋ ಹೋಗುತ್ತದೆ ಎಂಬ ಸ್ಥಿತಿಯಲ್ಲಿರುವಾಗ ಅವಳು ಪ್ರಸೂತಳಾಗಿ, ಮುಂದೆ ಯಾವಾಕೆಯು ನನ್ನ ಆಯುಷ್ಯವನ್ನು ಸ್ವರ್ಗತುಲ್ಯವಾದ ವೈಭವದಲ್ಲಿ ಕಳೆದ ಆ ನೂರಜಹಾನಳ ಜನ್ಮವು ಅಂಥ ವಿಪದಾವಸ್ಥೆಯಲ್ಲಾಯಿತು. ಮಾರ್ಗವನ್ನಾಕ್ರಮಿಸುವ ಯಾವನಾದರೊಬ್ಬ ದಾರಿಕಾರನು ಭೆಟ್ಟಿಯಾದರೆ ಅವನಿಂದ ಸಹಾಯವು ದೊರೆತೀತೆಂಬ ಆಶೆಯಿಂದ, ಆ ಉಭಯತರು ಆ ಚಿಕ್ಕ ಅರ್ಭಕವನ್ನು ಹತ್ತಿರ ಕರೆದುಕೊಂಡು ಕೆಲವು ಕಾಲ ಹರಣ ಮಾಡಿದರು. ಆದರೆ ಅಮವಾಸ್ಯೆಯ ನಿಬಿಡಾಂಧಕಾರದಲ್ಲಿ ಚಂದ್ರ ಪ್ರಕಾಶವನ್ನ ಸೇಕ್ಷಿಸುವವರಂತೆ ಆವರ ಅವಸ್ಥೆಯಾಯಿತು. ಕಟ್ಟ ಕಡೆಗೆ ಸೂರನು ಅಸ್ತನಾಗಿ, ಭಯಾನಕವಾದ ರಾತ್ರೆಯು ಹಬ್ಬ ಹತ್ತಿತು. ಮೊದಲೇ ಅರಣ್ಯವು, ಅದರಲ್ಲಿ ನಿಬಿಡಾಂಧಕಾರನದ ರಾತ್ರೆಯು, ನಾಲ್ಕೂ ದಿಕ್ಕಿನಿಂದ ಹಿಂಸ್ರಶ್ವಾಸದಗಳ ಭಯಾನಕ ಗರ್ಜನೆಗಳು ಅವರ ಕಿವಿಗೆ ಬೀಳಹತ್ತಿ, ಅಂಜಿಕೆಯಿಂದ ಅವರ ಹೌಹಾರಿ ಹೋಯಿತು. ಇಂಥ ಸ್ಥಿತಿಯಲ್ಲಿ ಆ ಸ್ಥಾನದಲ್ಲಿ ರಾತ್ರೆಯನ್ನು ಕಳೆಯುವದು ಬಹಳ ಗಂಡಾಂತರದ್ದೆಂದು ತಿಳಿದು ಶ್ವಾಜಾ ಆಯಾಸನು ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕೂಡಿಸಿದನು. ತಾಯಿಯು ಮಗುವನ್ನು ತನ್ನ ಎದೆಗೆ ಅನುಚಿಕೊಂಡಳು. ಆದರೆ ಆಕೆಯು ತೀರ ಸೋತುಹೋದದ್ದರಿಂದ ಮಗುವನ್ನು ಎತ್ತಿ ಹಿಡಿಯುವದು ಸಹ ಅವಳಿಗೆ ಅಸಾಧ್ಯವಾಯಿತು. ಆಯಾಸನು ತನ್ನ ಶಕ್ತಿಯನ್ನು ಮಾರಿ ದಣಿದುಹೋದದ್ದರಿಂದ ಅವನಿಗೆ ತನ್ನ ಕಾಲುಗಳ ಮೇಲೆ ನಿಲ್ಲುವದು ಸಹ ಅಸಂಭವವುಳ್ಳದ್ದಾಯಿತು. ಮಗುವಿನ ವಿಷಯವಾಗಿ ತಮ್ಮ ಅಂತಃಕರಣಗಳನ್ನು ಕಳವಳಿಸಕೊಟ್ಟರೆ ತಾವು ಪಾರಗಾಣುವದು ದುಃಸಾಧ್ಯವೆಂದು ತುಸುಹೊತ್ತಿನ ವಿಚಾರಾಂತ್ಯದಲ್ಲಿ ಅವರಿಗೆ