ಪುಟ:ಬೆಳಗಿದ ದೀಪಗಳು.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಸಂಪೂರ್ಣ-ಕಥೆಗಳು

ತೋಚಹತ್ತಿ, ಆ ಕೂಸನ್ನು ಮಾರ್ಗದಲ್ಲಿಯೇ ಇಟ್ಟು ಬಿಡಬೇಕೆಂದು ಅವರ ಕೊನೆಯ ನಿಶ್ಚಯವಾಯಿತು. ಸುತ್ತುವದಕ್ಕೆ ಅರಿವೆಯ ಚಿಂದಿಗಳಾದರೂ ಅವರ ಹತ್ತಿರ ಇರದ್ದರಿಂದ, ಲತಾ ಪಲ್ಲವಗಳಿಂದ ಆ ಕೂಸನ್ನು ಮುಚ್ಚಿ, ಅದರ ರಕ್ಷಣ ಮಾಡುವದಕ್ಕಾಗಿ ಶೋಕಾಕುಲ ಅಂತಃಕರಣಗಳಿಂದ ಪರಮೇಶ್ವರನ ಪ್ರಾರ್ಥನೆಯನ್ನು ಮಾಡಿ, ಅತ್ಯಂತ ದುಃಖದಿಂದ ಅಶ್ರುಧಾರೆಗಳನ್ನು ಸುರಿಸುತ್ತ ಆ ಉಭಯತರು ಮುಂದಿನ ಮಾರ್ಗವನ್ನು ಕ್ರಮಿಸಹತ್ತಿದರು. ಅಂಥ ಸ್ಥಿತಿಯಲ್ಲಿ, ತಂದೆ-ತಾಯಿಗಳು ಕೇವಲ ನಿರುಪಾಯವುಳ್ಳವರಾಗಿ ಆ ಕೂಸನ್ನು ಒಂದು ವೃಕ್ಷದ ಬುಡದಲ್ಲಿ ಇಟ್ಟಿದ್ದರೂ ಅದರ ಭಾಗ ದಯವಾಗತಕ್ಕದ್ದಿದ್ದದರಿಂದ ಅದು ರಕ್ಷಿಸಲ್ಪಟ್ಟಿತು, ಯಾವ ವೃಕ್ಷದ ಬುಡದಲ್ಲಿ ಆ ಕೂಸನ್ನು ಇಟ್ಟಿದ್ದರೋ ಆ ವೃಕ್ಷವು ಕಾಣದಂತಾದ ಕೂಡಲೆ ನೂರಜಹಾನಳ ತಾಯಿಯ ಅಂತಃಕರಣವು ನೀರಾಯಿತು, ಅವಳು ಕುದುರೆಯ ಮೇಲಿಂದ ನೆಲಕ್ಕೆ ಬಿದ್ದು ಆಕ್ರೋಶ ಮಾಡಹತ್ತಿದಳು. ತನ್ನ ಸುಕುಮಾರಳಾದ ಮಗಳ ಕಡೆಗೆ ಧಾವಿಸಿ ಹೋಗುವದಕ್ಕಾಗಿ ನೆಲಬಿಟ್ಟು ಏಳುವದಕ್ಕೆ ಪ್ರಯತ್ನ ಮಾಡಹತ್ತಿದಳು; ಆದರೆ ಆ ಪ್ರಯತ್ನದಲ್ಲಿಯೇ ಉಳಿದ ಎಲ್ಲ ಶಕ್ತಿಯು ನಷ್ಟವಾಗಿ ಅವಳು ಭೂಮಿಯ ಮೇಲೆ ನಿಶ್ಚೇಷ್ಟಿತಳಾಗಿ ಬಿದ್ದುಕೊಂಡಳು, ಸ್ವಲ್ಪ ಎಚ್ಚರಪಡೆಯಹತ್ತಿದ ಕೂಡಲೆ ಸ್ವಾಜಾಕ್ಆಯಾಸನು ಅವಳ ಸಮಾಧಾನ ಮಾಡ ತೊಡಗಿದನು.

ಆದರೆ ತನ್ನ ಪ್ರಯತ್ನವು ನಿಷ್ಪಲವಾದದ್ದೆಂದು ಕಂಡುಬಂದದ್ದರಿಂದ, ಹುಡುಗೆಯನ್ನು ತರುವದಕ್ಕಾಗಿ ಮರಳಿ ಹಿಂದಕ್ಕೆ ಹೊರಟನು. ಖ್ವಾಜಾ ಆಯಾಸನು ಆ ವೃಕ್ಷದ ಸವಿಾಪಕ್ಕೆ ಬಂದು, ಅಲ್ಲಿ ಸಂಭವಿಸಿದ ಸಂಗತಿಯನ್ನು ನೋಡಿ ಭೀತಿಯಿಂದ ತೀಠ ಭವಿಷ್ಟನಾದನು. ಒಂದು ದೊಡ್ಡ ಭಯಂಕರವಾದ ಕೃಷ್ಣ ಸರ್ಪವು ಆ ಹುಡುಗೆಯನ್ನು ಸುತ್ತು ಹಾಕಿ ಕೂತುಕೊಂಡದ್ದನ್ನು ನೋಡಿದ ಕೂಡಲೆ, ಆಯಾಸನ್ನು ಚಿಟ್ಟನೆ ಚೀರಿ, ಮಗಳನ್ನು ಉಳಿಸುವದಕ್ಕಾಗಿ ಮುಂದೆ ಧಾವಿಸಿದನು. ಅವನ ಧ್ವನಿಯನ್ನು ಕೇಳಿದ ಕೂಡಲೆ ಆ ಸರ್ಪವು ಭಯಭೀತವಾಗಿ ಹತ್ತಿರದಲ್ಲಿದ್ದ ಬಿಲವನ್ನು ಹೊಕ್ಕಿತು, ಖ್ವಾಜಾ ಆಯಾಸನು ಮುಂದಕ್ಕೆ ಹೋಗಿ ತನ್ನ ಕೂಸನ್ನು ಎತ್ತಿ ಅಮಚಿಕೊಂಡು, ಯಾವ ಸ್ಥಳದಲ್ಲಿ ತನ್ನ ಹೆಂಡತಿಯು ನಿಶ್ಲೇಷ್ಟಿತಳಾಗಿ ಬಿದ್ದಿದ್ದಳೋ