ಪುಟ:ಬೆಳಗಿದ ದೀಪಗಳು.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೩೧

ಅಲ್ಲಿಗೆ ಮರಳಿ ಬಂದನು. ಅವನ ಪತ್ನಿಯು ಎಚ್ಚತ್ತು ತನ್ನ ಕೂಸನ್ನು ಹತ್ತರ ತೆಗೆದುಕೊಂಡಳು; ಮತ್ತು ಸಂಭವಿಸಿದ ಸಂಗತಿಯ ವಿಷಯವಾಗಿ ಉಭಯತರು ಮಾತನಾಡಿ, ಇಂಥ ಅರ್ತರ್ಕ್ಯ ಪ್ರಕಾರದಿಂದ ತಮ್ಮ ಮಗಳ ರಕ್ಷಣವಾಯಿತೆಂದ ಮೇಲೆ ಅಪೂರ್ವವಾದ ಭಾಗ್ಯದಯವನ್ನು ಅವಳು ತನ್ನ ಮುಂದಿನ ಆಯುಷ್ಯದಲ್ಲಿ ನಿಶ್ಚಯವಾಗಿ ಕಾಣುವಳೆಂದು ಆ ದಂಪತಿಗಳು ಭಾವಿಸಿದರು.

ಅವಳು ಉಚ್ಚ ಪದವನ್ನೇರಬಾರದೆಂಬ ವಿಧಿಯ ಸಂಕಲ್ಪವಾಗಿದ್ದರೆ, ಇಂಥ ಗಂಡಾಂತರದ ಪ್ರಸಂಗದಿಂದ ಅವಳ ರಕ್ಷಣವೇ ಆಗುತ್ತಿದ್ದಿಲ್ಲ; ಆದರೆ ಮುಂದೆ ಅವಳಿಗೆ ಪ್ರಾಪ್ತವಾದ ಮಹಈ ಪದದ ಕಲ್ಪನೆಯು ಆ ಕಾಲಕ್ಕೆ ಆ ಉಭಯತರಿಗೆ ಆಗಲಿಲ್ಲೆಂಬದರಲ್ಲಿ ಆಶ್ಚರ್ಯವೇನು? ಅದು ಯಾರ ಕಲ್ಪನೆಯನ್ನಾದರೂ ಮೀರಿದ್ದಾಗಿತ್ತು. ತಮ್ಮ ಜನ್ಮಭೂಮಿಯಲ್ಲಿ ಹತಾಶರಾಗಿ, ಕೇವಲ ಉದರಪೋಷಣಕ್ಕಾಗಿ ಆಶ್ರಯಹೊಂದಿದ ಹಿಂದುಸ್ಥಾನದ ಬಾದಶಾಹೀ ಸಿಂಹಾಸನದ ಮೇಲೆ ತನ್ನ ಮಗಳು ಆರೂಢಳಾಗಿ, ತನ್ನ ಸೌಂದರ್ಯದಿಂದಲೂ ಕರ್ತೃತ್ವ ಶಕ್ತಿಯಿಂದಲೂ ಇಡೀ ಜಗತ್ತನ್ನು ಚಕಿತನಾಡುವಳೆ೦ಬ ಸಂಗತಿಯು ಅವರಿಗೆ ಸ್ವಪ್ನ ಸೃಷ್ಟಿಯಲ್ಲಿ ಸಹ ದೃಗ್ಗೋಚರವಾಗಿರಲಿಕ್ಕಿಲ್ಲ.

ಯಾವ ಕಾಲಕ್ಕೆ ಆ ಕೃಷ್ಣ ಸರ್ಪವು ಹುಡಗೆಯನ್ನು ಬಿಟ್ಟು ಬಿಲವನ್ನು ಪ್ರವೇಶಮಾಡಿತೋ ಅದು ಅವರ ಭಾಗ್ಯದಿನದ ಪ್ರಭಾತಕಾಲವೆಂದು ಕಲ್ಪಿಸಿದರೂ ಅಡ್ಡಿಯಿಲ್ಲ. ಸೂರ್ಯಪ್ರಕಾಶವಾಗಲು ಕತ್ತಲೆಯು ಗಿರಿಗನ್ನತಗಳಲ್ಲಿ ಅಡಗಿಕೊಳ್ಳುವಂತೆ, ಅವರ ಕೃಷ್ಣ ಸರ್ಪರೂಪೀ ದುರ್ದೈವವು ಇಲ್ಲದಂತಾಯಿತು. ಕಾಲವು ಅನುಕೂಲವಾಯಿತೆಂದರೆ, ಅನಪೇಕ್ಷಿತವಾದ ಮಾರ್ಗದಿಂದ ದೈವಯೋಗವು ಕೂಡಿಬರುತ್ತದೆ. ಆ ಸ್ಥಳದಲ್ಲಿ ಉಭಯತರು ಹುಡುಗಿಯನ್ನು ಕರೆದುಕೊಂಡು ಕುಳಿತಾಗ ಕೆಲವು ಮುಸಲ್ಮಾನ ಪ್ರವಾಸಿಗಳು ಅವರಿಗೆ ಭೆಟ್ಟಿಯಾದರು. ಅವರ ಹತ್ತರ ಪ್ರವಾಸಕ್ಕೆ ಬೇಕಾಗುವ ಸಾಮಗ್ರಿಯು ವಿಪುಲವಾಗಿತ್ತು. ಅವರು ಈ ಸಂಕಟ ಸಮಯದಲ್ಲಿ ಇವರಿಗೆ ಸಹಾಯ ಮಾಡಿ ಇವರನ್ನು ಲಾಹೋರಕ್ಕೆ ಮುಟ್ಟಿಸಿದರು. ಆ ಕಾಲಕ್ಕೆ ಅಕಬರ ಬಾದಶಹನ ಸ್ವಾರಿಯು ಅಲ್ಲಿಯೇ ಇತ್ತು. ಬಾದಶಹನ ದರಬಾರದೊಳಗಿನ ಒಬ್ಬ ಗೃಹಸ್ಥನು ತನಗೆ ದೂರಿನ ಆಪ್ತನಾಗಬೇಕೆಂದು ಆಯಾಸ