ಪುಟ:ಬೆಳಗಿದ ದೀಪಗಳು.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಸಂಪೂರ್ಣ-ಕಥೆಗಳು

ನಿಗೆ ತಿಳಿದ ಕೂಡಲೆ ಅವನಿಗೆ ಅತ್ಯಾನಂದವಾಯಿತು. ಈ ಗೃಹಸ್ಥನು ದೊಡ್ಡ ಅಧಿಕಾರಿಯಾಗಿದ್ದು, ಬಾದಶಹನ ಹತ್ತರ ಅವನ ವರ್ಚಸ್ವವಾದರೂ ಒಳಿತಾಗಿತ್ತು. ಆಯಾಸನಿಗೆ ಆಪ್ತನಾಗಿದ್ದ ಈ ಗೃಹಸ್ಥನ ಸಹಾಯದಿಂದ ಅವನ ಊರ್ಜಿತ ಕಾಲವು ಪ್ರಾರಂಭವಾಯಿತು. ಉತ್ತರೋತ್ತರ ಆಯಾಸನ ಅಭ್ಯುದಯವಾಗಹತ್ತಿ, ದರಬಾರದಲ್ಲಿ ಮಾನಮರ್ಯಾದೆಯನ್ನು ಹೊಂದಿದನು. ತನ್ನ ಯೋಗ್ಯತೆ ಮತ್ತು ಪರಿಶ್ರಮ ಇವುಗಳಿಂದ ಆವನು ಸಾವಿರ ಸರದಾರರ ಮೇಲೆ ಅಧಿಕಾರಿಯಾದನು. ಅವನು ಭಾಗ್ಯಶಾಲಿಯಾದಂತೆ ಬುದ್ಧಿವಂತನಾದರೂ ಇದ್ದರಿಂದ ಉಚ್ಚುಚ್ಚ ಪದವಿಯನ್ನೇರುತ್ತೇರುತ್ತ ಸ್ವಲ್ಪ ದಿವಸಗಳಲ್ಲಿಯೇ ಬಾದಶಾಹೀ ಖಜೀನದಾರಿಯ ಅತ್ಯುಚ್ಚ ಪದಕ್ಕೇರಿದನು. ಈ ಪ್ರಕಾರ ಕೆಲವು ವರ್ಷಗಳ ಪೂರ್ವದಲ್ಲಿ ತನ್ನ ಹೆಂಡತಿ ಮತ್ತು ಮಗಳ ಸಹಿತವಾಗಿ ಒಂದು ನಿರ್ಜನವಾದ ಅರಣ್ಯದಲ್ಲಿ ಮರಣೋನ್ಮುಖ ಸ್ಥಿತಿಯಲ್ಲಿದ್ದವನು, ತನ್ನ ಭಾಗ್ಯದ ಮತ್ತು ಗುಣಗಳ ಬಲದಿಂದ ಸಂಪೂರ್ಣ ರಾಜ್ಯದಲ್ಲಿ ಮೊದಲನೆಯ ಪ್ರತಿಯ ಸರದಾರ ಮತ್ತು ಮುತ್ಸದ್ದಿಯಾಗಿ ಕುಳಿತನು. ಲಾಹೋರಕ್ಕೆ ಬಂದು ಕೆಲವು ದಿವಸಗಳು ಗತಿಸಿದ ಬಳಿಕ, ಅರಣ್ಯದಲ್ಲಿ ಭಯಂಕರವಾದ ಗಂಡಾಂತರದಲ್ಲಿ ಸಿಕ್ಕಿದ್ದ ಹುಡುಗೆಯ ಸ್ವರೂಪಮಾಧುರ್ಯದ ಖ್ಯಾತಿಯು ಸರ್ವತ್ರ ಹಬ್ಬಿ ಅವಳಿಗೆ "ಮೆಹೆರ ಉನ್ನಿಸಾ” ಅಂದರೆ ಸ್ತ್ರೀ ತಾರಾಂಗಣದೊಳಗಿನ ಚಂದ್ರವೆಂಬ ಹೆಸರು ಪ್ರಾಪ್ತವಾಯಿತು. ಹುಣ್ಣಿವೆಯ ಚಂದ್ರನನ್ನು ನಾಚಿಸುವ "ಮೆಹೆರ ಉನ್ನಿಸಾ" ಇವಳು ಹದಿನೈದು ವರ್ಷದವಳಾದಾಗಂತೂ ನನ್ನ ನಿಷ್ಕಲಂಕವಾದ ತೇಜದಿಂದ ಎಲ್ಲರ ನೇತ್ರಗಳಲ್ಲಿ ತನ್ನ ಸೌಂದರ್ಯದ ಅಮೃತವೃಷ್ಟಿಯನ್ನು ಮಾಡಹತ್ತಿದಳು. ಅವಳಿಗೆ ಸಮಾನಳಾದ ಸುಂದರ ಸ್ತ್ರೀಯು ಇಡೀ ಖಂಡದಲ್ಲಿ ಇದ್ದಿದ್ದಿಲ್ಲ. ತಾಯಿಯ ರೂಪಸಂಪತ್ತು ಮತ್ತು ತಂದೆಯ ಬುದ್ಧಿ ವೈಭವ ಇವುಗಳ ಸಮ್ಮೇಲನದಿಂದ ಅವಳ ಅಂತರ್ಬಾಹ್ಯ ತೇಜದ ಕಿರಣಗಳು ದಿನದಿನಕ್ಕೆ ವಿಕಾಸ ಹೊಂದಹತ್ತಿದವು. ಇದ್ದ ಲಿಯ ರಾಶಿಯಲ್ಲಿ ರತ್ನವು ಮತ್ತು ಶೈವಾಲದಲ್ಲಿ ಕಮಲದ ಶೋಭೆಯು ಲುಪ್ತವಾಗುವದು ಹ್ಯಾಗೆ ಅಸಂಭವವೋ ಹಾಗೆ ಈ ಸ್ತ್ರೀರತ್ನವು ದಾರಿದ್ರ್ಯ ಪಂಕದಲ್ಲಿ ಪರಿವೇಷ್ಟಿತವಾಗಿ ಉಳಿದಿದ್ದರೂ ಅದು ತನ್ನ ಕಡೆಗೆ ಜಗತ್ತಿನ ದೃಷ್ಟಿಯನ್ನು ಆಕರ್ಷಿತ ಮಾಡಿಕೊಳ್ಳದೆ ಇರುತ್ತಿದ್ದಿಲ್ಲ; ಅಂದ