ಪುಟ:ಬೆಳಗಿದ ದೀಪಗಳು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಸಂಪೂರ್ಣ-ಕಥೆಗಳು

ಸಹ ಕಠಿಣವಾಗಹತ್ತಿತು.

ಆ ಬಳಿಕ ಶೇರಅಫಗನನು ತನ್ನ ಪತ್ನಿಸಮೇತನಾಗಿ ಬಂಗಲದ ರಾಜಧಾನಿಯನ್ನು ಬಿಟ್ಟು ನಾನು ಮೊದಲು ಇರುತ್ತಿದ್ದ ಬರವ್ವಾನ ಪಂತದಲ್ಲಿ ಇರಹತ್ತಿದನು. ಅಲ್ಲಿಯಾದರೂ ಒಂದು ಕಡೆಗೆ ಇರುವದರಿಂದ ತಾನು ಸುರಕ್ಷಿತವಾಗಿ ಉಳಿಯುವೆನೆಂದು ಅವನು ಯೋಚಿಸಿದ್ದನು. ಆದರೆ, ಈ ಆಶೆಯಾದರೂ ನಿರರ್ಥಕವಾಯಿತು. ಸ್ವಲ್ಪು ದಿವಸಗಳಲ್ಲಿಯೇ ಬಂಗಾಲದ ಸುಭೇದಾರನು ಮಿತ್ರತ್ವದ ಸಂಬಂಧವನ್ನು ಹಚ್ಚಿ ಅವನ ಬೆಟ್ಟಗಾಗಿ ಬಂದನು. ಪ್ರಾಂತದ ಸುಭೇದಾರನು ತನ್ನ ಬೆನ್ನಿಗೆ ಬರುತ್ತಾನೆಂದು ತಿಳಿದ ಕೂಡಲೆ, ಶೇರಅಫಗನನು ಕುದುರೆಯ ಮೇಲೆ ಸವಾರನಾಗಿ, ಸಂಗಡ ಇಬ್ಬರೇ ಸೇವಕರನ್ನು ತೆಗೆದುಕೊಂಡು ಅವನಿಗೆ ಸನ್ಮಾನಪೂರ್ವಕವಾಗಿ ಎದುರಾದನು. ಪರಸ್ಪರರ ದರ್ಶನವಾದ ಕಡಲೆ, ಪರಸ್ಪರರಿಗೆ ಅತ್ಯಂತ ಆನಂದವಾದಂತೆ ಕಂಡುಬಂದಿಕು. ಕೆಲವು ಹೊತ್ತಿನವರಿಗೆ ಪರಸ್ಪರರ ಸಂಭಾಷಣವಾದ ಬಳಿಕ, ಕುತುಬಶಹನು ತನ್ನ ದರಬಾರದ ಆನೆಯನ್ನು ತರುವದಕ್ಕೆ ಅಪ್ಪಣೆ ಯನ್ನು ಮಾಡಿದನು ; ಮತ್ತು ಅದು ಅಲ್ಲಿಗೆ ಬಂದ ಕೂಡಲೆ, ಅದರ ಮೇಲೆ ಹತ್ತು ವದಕ್ಕೆ ಸಿದ್ಧನಾದನು. ಈ ರೀತಿಯಾಗಿ ಕುತುಬಶಹನು ಗಜಾರೂಢನಾಗುತ್ತಿರುವಾಗ ಶೇರಅಫಗನನು ಶಿಷ್ಟಾಚಾರಕ್ಕನುಸರಿಸಿ ವಿನಯಪೂರ್ವಕವಾಗಿ, ತಾನು ಕೂತಿದ್ದ ಕುದುರೆಯನ್ನು ಬಂದು ಬದಿಗೆ ಮಾಡಿದನು. ಇಷ್ಟರಲ್ಲಿ ಒಬ್ಬ ಜವಾನನು ಅವನ ಕುದುರೆಯ ಮೇಲೆ ಕತ್ತಿಯ ಆಘಾತವನ್ನು ಮಾಡಿದನು. ಇದನ್ನು ನೋಡಿದ ಕೂಡಲೆ ಮುಂದೆ ಸಂಭವಿಸುವ ಎಲ್ಲ ಸಂಗತಿಗಳು ಅವನ ಮುಂದೆ ಮೂರ್ತಿ ಮಂತ್ರವಾಗಿ ನಿಂತವು ಕಡಲೆ ಕುತುಬನ ಸಂಗಡದಲ್ಲಿ ಜವಾನರು ತಮ್ಮ ಕತ್ತಿಗೆಳನ್ನು ಹಿರಿದರು. ತ್ವರಿತವಾಗಿ ಯಾವುದಾದರೊಂದು ಯೋಚನೆಯನ್ನು ಯೋಚಿಸಿದ ಹೊರತು ತನ್ನ ಪ್ರಾಣರಕ್ಷಣವಾಗುವದು ದುರ್ಲಭವಾದದ್ದೆಂದು ತಿಳಿದು ಶೇರಆಫರನನು ತನ್ನ ಕುದುರೆಯನ್ನು ಮುಂದಕ್ಕೆ ದಬ್ಬಿದನು; ಮತ್ತು ಕ್ಷಣಾರ್ಧದಲ್ಲಿ ಆನೆಯ ಹತ್ತಿರ ಬಂದು ತನ್ನ ಅಸ್ತ್ರದ ಒಂದೇ ಆಘಾತದಿಂದ ಆನೆಯ ಮೇಲಿನ ಅಂಬಾರಿಯನ್ನು ನೆಲಕ್ಕೆ ಕೆಡವಿ, ಅದರಲ್ಲಿ ಕುಳಿತಿದ್ದ ಕುತುಬನನ್ನು ಎರಡು ತುಂಡು ಮಾಡಿದನು. ಬಾದಶಹನಿಗೆ