ಪುಟ:ಬೆಳಗಿದ ದೀಪಗಳು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೪೫

ಹೋಯಿತು. ಬಾದಶಹನು ಮೆಹೆರಉನ್ನಿಸಾ ಇವಳನ್ನು ತನ್ನ ಸಮ್ಮುಖದಿಂದ ಹೊರಗೆ ಹೋಗುವದಕ್ಕಾಗಿ ಅಪ್ಪಣೆಯನ್ನು ಮಾಡಿ, ತನ್ನ ತಾಯಿಯ ಹತ್ತರ ಅವಳು ತೊತ್ತಾಗಿರಬೇಕೆಂದು ಗೊತ್ತು ಪಡಿಸಿ, ಅವಳಿಗೆ ಪ್ರತಿ ತಿಂಗಳಿಗೆ ಅರವತ್ತು ರೂಪಾಯಿಗಳನ್ನು ಮಾತ್ರ ಕೊಡ ಬೇಕೆಂದು ಆಜ್ಞೆ ಮಾಡಿದನು. ಆ ಬಳಿಕ ಆವನು ಅವಳ ಉಸಾಬರಿ ತುನ್ನೇ ಬಿಟ್ಟು ಕೊಟ್ಟನು.

ಈ ರೀತಿಯಾಗಿ ಕೆಲವು ಕಾಲವು ಗತಿಸಲು, ಮೆಹೆರಉನ್ನಿಸಾಳ ಸೌಂದರ್ಯ ಮತ್ತು ಗುಣಗಳ ಕೀರ್ತಿಯ ಪರಿಮಳವು ಜನರಲ್ಲಿ ಹಬ್ಬ ಹತ್ತಿದ್ದರಿಂದ ಜಹಾಂಗೀರ ಬಾದಶಹನಿಗೆ ಅವಳ ದರ್ಶನದ ಲಾಲಸೆಯು ಮತ್ತೆ ಉಂಟಾಯಿತು. ಬಾದಶಹನು ತನ್ನ ಮನೋಗತ ಉದ್ದೇಶದ ಪರಿಸ್ಫೋಟವನ್ನು ಮಾಡದೆ ಆಕಸ್ಮಿಕವಾಗಿ ಅವಳ ಮುಂದೆ ಹೋಗಿ ನಿಲ್ಲುವ ಯೋಚನೆಯನ್ನು ಮಾಡಿದನು. ಬಾದಶಹನು ಅವಳ ಮಹಾಲಿನಲ್ಲಿ ಕಾಲಿಟ್ಟ ಕೂಡಲೆ, ಅಲ್ಲಿಯ ಶೋಭೆ ಹಾಗೂ ಅವರ್ಣನೀಯವಾದ ಸುವ್ಯವಸ್ಥೆಯನ್ನು ನೋಡಿ ಆಶ್ಚರ್ಯಚಕಿತನಾದನು. ಅಲ್ಲಿದ್ದ ಎಲ್ಲ ಪದಾರ್ಥಗಳು ಅತ್ಯಂತ ಮನೋಹರವಾಗಿದ್ದವು. ಅಲ್ಲಿಯ ಒಡೆಯಳಾದ ನೂರಮಹಾಲಳು ಸರ್ವಸಾಧಾರಣವಾದ ಶುಭ, ಉಡಿಗೆಯನ್ನು ಧಾರಣಮಾಡಿ, ಚಿತ್ರ ವಿಚಿತ್ರವಾದ ಮಂಚದ ಮೇಲೆ ಒಂದು ಕೈಯನ್ನು ಊರಿ ನಿಂತುಕೊಂಡಿದ್ದಳು. ಅವಳ ಸುತ್ತಲೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾದ ದಾಸೀ ಜನರ ಪರಿವಾರವಿತ್ತು. ಅವರೆಲ್ಲರ ಮೈ ಮೇಲೆ ಉಚ್ಚ ಉಚ್ಚ ವಸ್ತ್ರಾಭರಣಗಳಿದ್ದವು, ಬಹಳ ವರ್ಷಗಳಿ೦ದ ಬಾದಶಹನ ಮುಖವು ದೃಷ್ಟಿಗೆ ಬೀಳದ್ದರಿಂದ, ಮತ್ತು ಬಾದಶಹನು ಅಲ್ಲಿ ಅವಚಿತವಾಗಿ ಬಂದು ನಿಂತಿದ್ದರಿಂದ ಮೊದಲು ಅವಳು ತುಸು ಗೊಂದಲದಲ್ಲಿ ಬಿದ್ದಳು. ಸ್ವಾಗತ ಸರಶಬ್ದ ಗಳು ಸಹ ಅವಳ ಮುಖದೊಳಗಿಂದ ಹೊರಬೀಳಲಿಲ್ಲ. ಆದರೆ, ತನ್ನ ಕೋಮಲವಾದ ಕರಗಳಿಂದ ತನ್ನ ಮನೋಹರವಾದ ಹಣೆಯನ್ನು ಮುಟ್ಟಿ ನಮ್ರವಾಗಿ ಬಾದಶಹನಿಗೆ ಸಲಾಮು ಮಾಡಿ, ಮಂಚದ ಮೇಲೆ ವಿಶ್ರಮಿಸಿಕೊಳ್ಳುವದಕ್ಕಾಗಿ ಸಂಜ್ಞೆಯನ್ನು ಮಾಡಿದಳು. ಆ ಮಹಾಲಿನಲ್ಲಿ ಅವಳು ಆರು ವರ್ಷಗಳನ್ನು ಕಳೆದಿದ್ದರೂ ಅವಳ ಲಾವಣ್ಯವು ಎಳ್ಳಷ್ಟಾದರೂ ಕುಂದುಪಡದೆ, ಮೊದಲಿನಕಿಂತ ವಿಶೇಷವಾಗಿ ಶೋಭಿಸುತ್ತಿತ್ತು. ಅವಳ ಮುಖಕಮಲವನ್ನು ನೋಡಿ