ಪುಟ:ಭವತೀ ಕಾತ್ಯಾಯನೀ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


11

ಅವರು ಹೆಗಲಿಗೆ ಹಾಕಿದ್ದರು. ಅವರ ಟೊಂಕದಲ್ಲಿ ಖಡ್ಗವು ಅಲೆದಾಡುತ್ತಿತ್ತು. ಇವರಿಬ್ಬರಿಂದ ತೀರ ಭಿನ್ನವಾದ ವೇಷವು ಮೂರನೆಯವನದಿತ್ತು. ಅವನು ಚಿಗರಿಯ ಚರ್ಮವನ್ನು ಹೊದ್ದಿದ್ದನು. ಆತನ ತಲೆಗೂದಲುಗಳ ರಚನೆಯು ಮೇಲಿನ ಇಬ್ಬರು ಗೃಹಸ್ಥರ ತಲೆಗೂದಲುಗಳ ರಚನೆಯಂತೆಯೇ ಇತ್ತು. ಮೈಮೇಲೆ ಭಸ್ಮದ ಪಟ್ಟಿ ಗಳಿದ್ದು, ಕೈಯಲ್ಲಿ ಉದ್ದವಾದದೊಂದು ಕೋಲು ಇತ್ತು. ಆತನ ಉಡಿಗೆ-ತೊಡಿಗೆಗಳು ತೀರ ಸಾದಾತರದವಾಗಿದ್ದರೂ, ಸುವ್ಯವಸ್ಥಿತವಾಗಿದ್ದವು. ಆತನ ಮುಖಮುದ್ರೆಯು ಗಂಭೀರವಾಗಿದ್ದು, ಅದರಲ್ಲಿ ನಿರ್ಧಾರದ ಚಿಹ್ನವು ಒಡೆದು ಕಾಣುತ್ತಿತ್ತು. ಆತನ ಮಾತುಗಳು ಅತ್ಯಂತ ಪವಿತ್ರವಾದವೂ, ಪರಿಶುದ್ಧವಾದವೂಇದ್ದವು. ಈ ಎಲ್ಲ ಚಿಹ್ನ ಗಳಿಂದ ಆತನು ಬ್ರಾಹ್ಮಣನಿದ್ದನೆಂಬದನ್ನೂ, ಉಳಿದವರಿಬ್ಬರು ಕ್ಷತ್ರಿಯರಿದ್ದರೆಂಬದನ್ನೂ ವಾಚಕರಿಗೆ ನಾವು ತಿಳಿಸುವ ಅವಶ್ಯವಿಲ್ಲ. ಆ ತೇಜಃಪುಂಜನಾದ ಬ್ರಾಹ್ಮಣನು ಜನಕ ರಾಜನ ವಿಶ್ವಾಸದ ಶ್ರೇಷ್ಠ ಮಂತ್ರಿಯಾದ ಮಿತ್ರನೆಂಬವನಾಗಿದ್ದನು. ಉಳಿದ ಕ್ಷತ್ರಿಯ ವೀರರಿಬ್ಬರನ್ನು ಬೆಂಗಾವಲಾಗಿ ನಿಯಮಿಸಿ, ಜನಕರಾಜನು ಕಾರ್ಯನಿಮಿತ್ತವಾಗಿ ಆ ತನ್ನ ಮಂತ್ರಿಶ್ರೇಷ್ಠನನ್ನು ನೆರೆಯಗ್ರಾಮಕ್ಕೆ ಕಳಿಸಿದ್ದನು. ಆ ಕಾರ್ಯವನ್ನು ಸಾಧಿಸಿ ಕೊಂಡು ಈ ಮೂವರು ಮೇಲೆ ಹೇಳಿದಂತೆ ತಮ್ಮ ರಾಜಧಾನಿಯಾದ ಜನಕಪುರಿಯ ಕಡೆಗೆ ಸಾಗಿದ್ದರು. ಜನಕರಾಜನು ಅದೇ ನೆರಿಸಿದ್ದಮಹಾಸಭೆಯಸುದ್ಧಿಯನ್ನೂ ,ಯಾಜ್ಞ- ವಲ್ಕ್ಯರ ಪ್ರಭಾವವನ್ನೂ ಕುರಿತು ಅವರು ಮಾತಾಡುತ್ತಲಿದ್ದರು. ಮಿತ್ರನು ಯಾಜ್ಞವ ಲ್ಕ್ಯರ ಸ್ನೇಹಿತನಾಗಿದ್ದು, ಘನಪಂಡಿತನಾಗಿದ್ದನು. ಯಾಜ್ಞವಲ್ಕ್ಯರು ಶ್ರೀ ಸೂರ್ಯ ನಾರಾಯಣನ ಉಪದೇಶರೂಪಪ್ರಸಾದದಿಂದ ಹೊಸದಾಗಿ ರಚಿಸುತ್ತಿದ್ದ ಶುಕ್ಲಯಜು ರ್ವೇದ-ವ್ಯವಹಾರದಲ್ಲಿ ಮಿತ್ರನ ಅಂಗವು ಇತ್ತು. ಈ ಕಾರ್ಯಕ್ಕಾಗಿ ಹಲವು ಋಷಿಗಳು ಯಾಜ ವಲ್ಕ್ಯರ ಗೃಹದಲ್ಲಿಕೂಡುತ್ತಿದ್ದರು. ಈ ಮಿತ್ರನಿಗೆ ಮೈತ್ರೇಯಿಯೆಂಬ ಒಬ್ಬ ಅವಿ ವಾಹಿತಳಾದಮಗಳಿದ್ದಳು. ಆಕೆಗೆ ಈಗ ಹದಿನೆಂಟುವರ್ಷದಪ್ರಾಯವಿತ್ತು. ಮೈತ್ರೇಯಿಯ ಸದುಣಗಳ, ಹಾಗು ಲೋಕೋತ್ತರ ಸೌಂದರ್ಯದ ಕೀರ್ತಿಯು ಎಲ್ಲಕಡೆಯಲ್ಲಿಯೂ ಪಸರಿಸಿತ್ತು. ದೊಡ್ಡ ದೊಡ್ಡ ವಿದ್ವಾಂಸರಾದ ತರುಣಬ್ರಾಹ್ಮಣರು ಮೈತ್ರೇಯಿಯ ಪಾಣಿ ಗ್ರಹಣದ ಸುಯೋಗವು ತಮ್ಮ ಪಾಲಿಗೆ ಇರಬಹುದೇ, ಎಂದು ಎದುರು ನೋಡು ತಿದರು. ಆಗಿನಕಾಲದಲ್ಲಿ ಸ್ತ್ರೀಯರು ಆಜನ್ಮ ಬ್ರಹ್ಮಚರ್ಯದಿಂದ ಕಾಲಹರಣಮಾ ಡುವ ಪ್ರಚಾರವಿತ್ತು. ಗಾರ್ಗಿಯು ಇದಕ್ಕೆ ಪ್ರಸಿದ್ಧವಾದ ಉದಾಹರಣವಾಗಿದ್ದಳು. ಗಾರ್ಗಿಯು ಸಾಮಾನ್ಯಸ್ತ್ರೀಯಲ್ಲ, ಯಾಜ್ಞವಲ್ಕ್ಯರೊಡನೆ ಮಹಾಸಭೆಯಲ್ಲಿ ವಾದ ಮಾಡಿದವರಲ್ಲಿ ಆಕೆಯು ಅಗ್ರಗಣ್ಯಳಾಗಿದ್ದಳು. ಗಾರ್ಗಿಯು ಮೈತ್ರೇಯಿಯ ಅಬ ಚಿಯು, ಅಂದರೆ ಮಿತ್ರನ ಹೆಂಡತಿಯ ತಂಗಿಯು. ಮೈತ್ರೇಯಿಯ ಮೇಲೆ ಗಾರ್ಗಿಯ ಪ್ರೀತಿಯು ಬಹಳ. ಅಬಚಿಯ ಸಹವಾಸದಿಂದ ಮೈತ್ರೇಯಿಯ ವಿಚಾರಗಳು ಪರಿ ಪಕ್ವವಾಗತೊಡಗಿದ್ದವು. ಆಕೆಯ ಒಲವು ಅಧ್ಯಾತ್ಮವಿಷಯದಕಡೆಗೆ ವಿಶೇಷವಾಗಿತ್ತು. ಆದ್ದರಿಂದ ಲಗ್ನ ಮಾಡಿಕೊಳ್ಳುವದರಕಡೆಗೆ ಆಕೆಯಲಕ್ಷವು ವಿಶೇಷವಾಗಿದ್ದಿಲ್ಲ. ತನ್ನ ಅಬಚಿ