ಪುಟ:ಭವತೀ ಕಾತ್ಯಾಯನೀ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

15

ಭೋಗದ ದೃಷ್ಟಿಯಿಂದ ಲಗ್ನ ಮಾಡಿಕೊಳ್ಳಬೇಕೆಂದು ಇಚ್ಛಿಸುವದಿಲ್ಲ. ಕೇವಲ ಶ್ರೀಮಂತನಾದ ವರನು ಆಕೆಗೆ ಸೇರನು. ಆಕೆಯ ವಿದ್ಯೆಯೇ ಆಕೆಯ ಲಗ್ನಕ್ಕೆ ವಿಘ್ನವಾದ ತಾಗಿದೆ. ಮೊನ್ನೆ ಮಹಾಸಭೆಯಲ್ಲಿ ಯಾಜ್ಞವಲ್ಕರ ವಿದ್ಯಾಪ್ರಭಾವವನ್ನು ನೋಡಿ ಮೈತ್ರೇಯಿಯು--" ( ಆದರೆ ಯಾಜ್ಞವಲ್ಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ತನ, ಅಬಚಿಯಾದ ಗಾರ್ಗಿಯಂತೆ ಆಜನ್ಮ ಬ್ರಮ್ಮಚರ್ಯದಿಂದ ಇರಬೇಕು, ” ಎಂದು ನಿಶ್ಚಯಸಿರುವಂತೆ ಕೇಳುತ್ತೇನೆ; ಆದ್ದರಿಂದ ನನಗೆ ನೀಗಲಾರದ ಚಿಂತೆಯು ಪ್ರಾಪ್ತ ವಾದಂತಾಗಿರುತ್ತದೆ .

ಮಿತ್ರನ ಈ ಮಾತುಗಳನ್ನು ಕೇಳಿ ಯಜ್ಞದತ್ತನು- ಭಗವನ್ , ಹದಿನೆಂಟ

ನೆಯ ವರ್ಷದ ವಯಸ್ಸಿನಲ್ಲಿಯೇ ಆಧ್ಯಾತ್ಮವಿಷಯದ ಕಡೆಗೆ ಮನಸ್ಸು ತಿರುಗಿ , ಯಾಜ್ಞವಲ್ಕರಂಥ ಬ್ರಹ್ಮನಿಷ್ಟರನ್ನು ಲಗ್ನವಾಗಲು ಬಯಸುವದು ನಿಮ್ಮ ಮಗ ಳಿಗೆ ಭೂಷಣವೇ ಸರಿ ನಿಮ್ಮ ಮಗಳಲ್ಲಿಯಲ್ಲದೆ ಇಂಥ ಘನತರವಾದ ಯೋಗ್ಯ, ತೆಯು ಅನರಲ್ಲಿ ಹಾಗೆ ಬರಬೇಕು ? ಕೇವಲ ದ್ರವಕ್ಕೆ, ರೂಪಕೆ, ವಿದ್ಯೆಗೆ, ಆಡಂಬರಕ್ಕೆ ಮರುಳಾಗಿ ಲಗ್ನವಾಗುವದು ಸಾಮಾನ್ಯವಧುಗಳ ಮಾತಾಯಿತು; ಆದರೆ ತಮ್ಮಂಥವರ ಮಗಳು ಯಾಜ್ಞವಲ್ಕರಂಥ ಬ್ರಹ್ಮನಿಷ್ಠರನ್ನು ವರಿಸಲಿಚ್ಛಿಸುವದು ಸಂತೋಷದ ಸಂಗತಿಯೇ ಸರಿ! ಯಾಜ್ಞವಲ್ಯರಿಗಾದರೂ ನಿಮ್ಮ ಮಗಳನ್ನು ಲಗ, ವಾಗುವದು ಬಹುಮಾನದ ಲಕ್ಷಣವೇ ಆಗಿರುವದು! ಮೈತ್ರೇಯಿಯಂಥ ತಮಗೆ ಅನು ರೂಪವಾದ ವಧುವು , ಹುಡುಕುತ್ತ ಹೋದರೂ ಯಾಜ್ಞವಲ್ಯರಿಗೆ ದೊರಕಲಿಕ್ಕಿಲ್ಲ. ಆದ್ದರಿಂದ ಯಾಜ್ಞವಲರೂ ಸಂತೋಷದಿಂದ ಮೈಯಿಯ ಪಾಣಿಗ್ರಹಣ ಮಾಡ ಬಹುದು ; ಅಂದಬಳಿಕ ತಾವು ಚಿಂತಿಸುವದೇಕೆ?' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಮಿತ್ರನು--LC ವತ್ಸಾ , ಯಾಜ್ಞವಲ್ಯರ ಸಂಸಾರಸುಖದ ಕಲ್ಪನೆಯು ನಿನಗೆ ಇರುವ ದಿಲ್ಲಾದ್ದರಿಂದ, ಅವರು ಸಹಜವಾಗಿ ನನ್ನ ಮಗಳನ್ನು ಲಗ್ನವಾಗಬಹುದೆಂದು ನೀನು ತಿಳಿಯು; ಆದರೆ ಹಾಗೆ ತಿಳಿಯುವದು ಸರ್ವಥಾ ಯೋಗ್ಯವಲ್ಲ, ಯಾಜ್ಞವ ಲ್ಯರ ಲಗ್ನವಾಗಿರುವದೆಂಬದಿ ನಿನಗೆ ಗೊತ್ತಿರಬಹುದು , ನನ್ನ ಪ್ರಿಯಮಿತ ನಾದ ಕಾತ್ಯನೆಂಬವನ ಮಗಳಾದ ಕಾತ್ಯಾಯನಿಯೊಡನೆ ಅವರ ಲಗ್ನವಾಗಿರುವದು. ಆ ತರುಣಿಯು ಬಹುತರ ಎಲ್ಲಬಗೆಯಿಂದಲೂ ಯಾಜ್ಞವಲ್ಕರಿಗೆ ಒಪ್ಪುವಂಥ ಹೆಂಡತಿ ಯಾಗಿರುತ್ತಾಳೆ. ಆಕೆಯು ಅತ್ಯಂತ ಸುಂದರಿಯು, ಗೃಹಕೃತ್ಯದಲ್ಲಿ ದಕಳು , ಸೌಮ್ಯ ಸ್ವಭಾವದವಳು , ಮಧುರಭಾಷಣವು ಆಕೆಯ ಹುಟ್ಟುಗುಣವಾಗಿರುವದು. ಒಮ್ಮೆ ಕಾತ್ಯಾಯನಿಯನ್ನು ನೋಡಿದವರ ಮನಸ್ಸಿನಲ್ಲಿ ಆ ಸದ್ದುಣಮಂಡಿತವಾದ ಪ್ರೇಮಲಮೂರ್ತಿಯು ಸ್ಥಿರಗೊಳ್ಳುವದು, ನಾನು ಯಾಜ್ಞವಲ್ಯರ ಮನೆಗೆ ಹೋದಾ ಗೆಲ್ಲ ಆ ಪತಿಭಕ್ತಿಪರಾಯಣಳು, ಪ್ರಮಪುರಸ್ಕೃರವಾದ ಮೃದುಹಾಸದಿಂದ ನನ್ನ, ಸಾ'ಗತಮಾಡುವಳು. ನನ್ನ ವಿಷಯವಾಗಿ ಆಕೆಯ ಅಂತಃಕರಣದಲ್ಲಿ ಅತ್ಯಂತ ಆದರ ಭಾವವು ವಾಸಿಸುತ್ತಿರುವದರಿಂದ ನನ್ನನ್ನು ನೋಡಿದಕೂಡಲೆ ಆಕೆಯ ನಗೆಮೊಗದಲ್ಲಿ