ಪುಟ:ಭವತೀ ಕಾತ್ಯಾಯನೀ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

15

ವೃಕ್ಷಗಳ ದಟ್ಟಣೆಯಿತ್ತು. ಮಿತ್ರನಿಗೆ ಆ ದಿನ್ನೆಯ ಮೇಲೆ, ಗಿಡಗಳಲ್ಲಿ ಮುಚ್ಚಿದಂತೆ ಆಗಿದ್ದ ಒಂದು ಮನುಷ್ಯಾಕೃತಿಯು ಕಾಣಿಸಿತು. -ಮುಂದಕ್ಕೆ ಸ್ವಲ್ಪ ಸಾಗಿಹೋಗಲು, ಯಾವನೋ ಒಬ್ಬ ತಪೋನಿಷ್ಠ ಮುನಿಯು ಧ್ಯಾನಸ್ಥನಾಗಿ ಕುಳಿತಿದ್ದು, ಒಂದು ಭಯಂಕ ರವಾದ ಹುಲಿಯು ಅವನ ಮೇಲೆ ಬೀಳುವದಕ್ಕೆ ಜಪ್ಪು ಹಾಕಿತ್ತು. ಇದನ್ನು ನೋಡಿ ಮಿತ್ರನು ಮುಂದಕ್ಕೆ ಸಾಗುತ್ತಿರಲು, ಆ ತಪೋನಿಷ್ಠನು ಯಾಜ್ಞವಲ್ಕ್ಯರೇ ಎಂಬದು ಆತನಿಗೆ ಗೊತ್ತಾಯಿತು. ಈಶ್ವರಧ್ಯಾನಾಸಕ್ತರಾದ ಯಾಜ್ಞವಲ್ಕ್ಯರಿಗೆ ಹುಲಿಯ ಸುದ್ದಿ ಯು ಹ್ಯಾಗೆ ಗೊತ್ತಾಗಬೇಕು? ಯಾಜ್ಞವಲ್ಕರಮೇಲೆ ಒದಗಿದ ಸಂಕಟವನ್ನು ಮಿತ್ರನು ತನ್ನ ಕ್ಷತ್ರಿಯ ವೀರರಿಗೆ ತಿಳಿಸಲು, ಕೂಡಲೆ ಅವರು ಬಾಣಗಳನ್ನು ಗುರಿಯಿಟ್ಟು ಹುಲಿಯಮೇಲೆ ಬಿಟ್ಟರು. ಆಗ ಆ ಎರಡು ಬಾಣಗಳು ಹುಲಿಯ ಒಂದೊಂದು ಕಣ್ಣು ಗಳಲ್ಲಿ ಸೇರಿ, ಅದರ ಹೃದಯವನ್ನು ಪ್ರವೇಶಿಸಿದವು. ಅಷ್ಟರಲ್ಲಿ ಮತ್ತೆ ಆ ಕ್ಷತ್ರೀಯ ವೀರರ ಕೆಲವು ಬಾಣಗಳು ಹುಲಿಯ ಹೃದಯವನ್ನು ಭೇದಿಸಲು, ಹುಲಿಯು ನೆಲಕ್ಕುರು ಳಿತು. ಅದು ಪ್ರಾಣಸಂಕಟದಿಂದ ಭಯಂಕರವಾಗಿ ಗರ್ಜಿಸುವಾಗ ಧ್ಯಾನಸ್ಥರಾದ ಯಾ ಜ್ಞವಲ್ಕ್ಯರು ಎಚ್ಚತ್ತರು. ಅಷ್ಟರಲ್ಲಿ ಮಿತ್ರನೂ, ಯಜ್ಞದತ್ತ-ವಿಷ್ಟು ಮಿತ್ರರೂ ಧಾವಿಸಿ ಅಲ್ಲಿಗೆ ಹೋಗಿದ್ದರು. ಯಾಜ್ಞವಲ್ಕ್ಯರು ಕಣ್ಣೆರೆದು ನೋಡಲು, ಒದಗಿದ ಪ್ರಸಂ ಗವು ಅವರ ಕಣ್ಣಿಗೆ ಬಿದ್ದಿತು. ಆಗ ಯಾಜ್ಞವಲ್ಕ್ಯರು ಕೃತಜ್ಞತೆಯಿಂದ ಮಿತ್ರನ ಚರಣಸ್ಪರ್ಶಮಾಡಿ, ಕ್ಷತ್ರಿಯವೀರರನ್ನು ಪ್ರೇಮದಿಂದ ಆಲಿಂಗಿಸಿದರು. ಆಕಸ್ಮಿಕ ಪ್ರಸಂ ಗದಿಂದ ತಮಗೊದಗಿದ ಸಂಕಟದ ನಿವಾರಣವಾಯಿತೆಂದು ಯಾಜ್ಞವಲ್ಕ್ಯರು ಕೃತಜ್ಞ ತೆಯಿಂದ ಶತಶಃ ಆ ಮೂವರ ಅಭಿನಂದನಮಾಡಿದರು.

ಮೇಲೆ ಹೇಳಿದಂತೆ ಮಿತ್ರನು ಯಾಜ್ಞವಲ್ಕ್ಯರ ಪ್ರಾಣರಕ್ಷಣಮಾಡಿದರೂ, ತಾನು

ಮಾಡಿದ ಉಪಕೃತಿಯ ಭಾರವನ್ನು ಆತನು ಯಾಜ್ಞವಲ್ಕ್ಯರಮೇಲೆ ಸರ್ವಥಾ ಹೊರಿಸ ಲಿಲ್ಲ. ನನ್ನಿಂದ ನಿಮ್ಮ ಪ್ರಾಣರಕ್ಷಣವಾಗಿರುವದರಿಂದ ನನ್ನ ಮಗಳ ಪಾಣಿಗ್ರಹಣಮಾ ಡಬೇಕೆಂದು ಹೇಳುವ ವಿಚಾರವು ಸಹ ಆ ಮುನಿಯ ಮನಸ್ಸಿನಲ್ಲಿ ಹೊಳೆಯಲಿಲ್ಲ. ಆ ಕಾಲದ ಆರ್ಯಾವರ್ತದ ಸಾಮಾಜಿಕ ಪದ್ಧತಿಯಂತೆ, ಮಾದಲಲಗ್ನವಾದ ಮನುಷ್ಯನಿ ಗೂ ಸುಸ್ವರೂಪಿಯೂ, ಸದ್ಗುಣಸಂಪನ್ನಳೂ ಆದ ಹುಡುಗೆಯನ್ನು ಕೊಡುವದು ಅಯೋಗ್ಯವೆಂದು ತಿಳಿಯಲ್ಪಡುತ್ತಿದ್ದಿಲ್ಲ. ಇಂಥ ಸದ್ಗುಣ ಸಂಪನ್ನಳಾದ ಸುಂದರಕನ್ಯೆಯ ಪ್ರಾಪ್ತಿಯಾಗುವದು ಬಹುಮಾನದ ಲಕ್ಷಣವೆಂದು ಆಗಿನ ಜನರು ತಿಳಿಯುತ್ತಿದ್ದರು; ಆದರೆ ಇದುಸಮಾಜದೊಳಗಿನ ಸರ್ವಸಾಧಾರಣ ಜನರಮಾತಾಯಿತು; ಆದರೆಯಾಜ್ಞವಲ್ಕ್ಯರೂ, ಮಿತ್ರನೂ ಸಾಮಾನ್ಯಜನರೊಳಗಿನವರಲ್ಲವೆಂಬದನ್ನು ನಾವು ವಾಚಕರಿಗೆ ಬರೆದು ತಿಳಿಸಲ ವಶ್ಯ ವಿಲ್ಲ; ಆ ದ್ದ ರಿ ೦ ದ, ಲೋ ಕ ವ ೦ ದ್ಯ ರಾ ದ ಯಾಜ್ಞವಲ್ಕ್ಯರೊಡನೆ ಮೈತ್ರೇಯಿಯ ದ್ವಿತೀಯ ಸಂಬಂಧವಾಗುವದು ಶಕ್ಯವಾಗಿದ್ದಿಲ್ಲ. ಮೇಲೆ ಹೇಳಿ ದಂತೆ ಯಾಜ್ಞವಲ್ಕ್ಯರ ಪ್ರಾಣರಕ್ಷಣದ ಯೋಗವು ಒದಗಿದ್ದರಿಂದ ಮಿತ್ರನೊಡನೆ