ಪುಟ:ಭವತೀ ಕಾತ್ಯಾಯನೀ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



26

ಗಿರುವಾಗ ಅವರಾದರೂ ಏನುಮಾಡಬೇಕು ? ಸಾಂಸಾರಿಕ ವಿಷಯಗಳಲ್ಲಿಯೇ ಸದಾ ಮಗ್ನಳಾಗಿರುವ ನನ್ನೊಡನೆ, ಆ ವಿಷಯಗಳನ್ನು ಕುರಿತೇ ಅವರು ಪ್ರಸ್ತಾಪಿಸುತ್ತಿರು ವರು. ಸಖಿ, ಯಾಜ್ಞವಲ್ಯ ಪತಿಯೆನಿಸುವ ನನಗೆ ಈ ಮಾತು ಅತ್ಯಂತ ಲಾಂಛನವೇ ಸರಿ! ನಮ್ಮಂಥ ಸ್ತ್ರೀಯರಿಗೆ ಸಿಂಹದ ಮರಿಯಂತೆ ಆತ್ಮವಿಸ್ಮತಿಯಾಗಿರುತ್ತದೆಂದು ನಿರ್ಬಾಧವಾಗಿ ಹೇಳಬಹುದು.

ಮೈತ್ರೇಯಿ – ಅಕ್ಕಾ, ನಿನಗೆ ನಾನು ಹೆಚ್ಚಿಗೆ ಹೇಳುವದೇನು? ದ್ರವ್ಯವನ್ನು

ಸಂಪಾದಿಸುವದು, ಸಂಸಾರದ ಬೇರೆ ಕೃತ್ಯಗಳನ್ನು ಮಾಡುವದು ಪುರುಷರ ಕರ್ತವ್ಯ ವಾಗಿರುವಂತೆ, ಮನೆಗೆಲಸಗಳನ್ನು ದಕ್ಷತೆಯಿಂದ ಮಾಡುವದು ಸ್ತ್ರೀಯರ ಕರ್ತವ್ಯ ವಾಗಿರುತ್ತದೆ. ಸ್ತ್ರೀ-ಪುರುಷರು ತಮ್ಮ ತಮ್ಮ ಈ ಕರ್ತವ್ಯಗಳನ್ನು ಯಥಾಸ್ಥಿತವಾಗಿ ಮಾಡಿಕೊಂಡು, ಇಬ್ಬರೂ ಮೋಕವಿಷಯಕ ವಿಚಾರವನ್ನು ಮಾಡತಕ್ಕದ್ದು; ಆದರೆ ಪುರುಷರಂತೆ ಸ್ತ್ರೀಯರು ಈ ಮಾತನ್ನು ಅವಶ್ಯವೆಂದು ಭಾವಿಸುವದಿಲ್ಲ. ಮನೆಗೆಲಸ ಮಾಡಿದರೆ ತಾವು ಕೃತಕೃತ್ಯರಾದೆವೆಂದು ಅವರು ತಿಳಿದುಬಿಡುತ್ತಾರೆ . ಇದಕ್ಕೂ ಹೆಚ್ಚಿನದೇನು ಮಾಡುವದಿರುವದಿಲ್ಲೆಂದು ಅವರು ಭಾವಿಸಿರುವರು.

ಕಾತ್ಯಾಯನೀ-ನೀನನ್ನುವದು ನಿಜವು. ನಮ್ಮ ಸಮಾಜದ ತಿಳುವಳಿಕೆಯೇ

ಹೀಗಿರುತ್ತದೆ; ಅದರಲ್ಲಿ ನಾನಂತು ಬಹಳ ನಾಚಬೇಕಾಗಿದೆ; ಯಾಕಂದರೆ ನನಗೆ ಎಲ್ಲ ಬಗೆಯ ಉತ್ತಮಸಾಧನಗಳು ಉಪಲಬ್ಬವಾಗಿದ್ದು, ಅವುಗಳ ಉಪಯೋಗವನ್ನು ನಾನು ಮಾಡಿಕೊಂಡಿರುವದಿಲ್ಲ.

ಮೈತ್ರೇಯಿ--ಸಖೀ, ಕಾತ್ಯಾಯನೀ, ನೀನು ಬಹುಭಾಗ್ಯವತಿಯು ಕಂಡೆಯಾ?

ವಿದ್ವಾಂಸನೂ, ಸದ್ಗುಣಸಂಪನ್ನನೂ ಆದಪತಿಯು ದೊರೆಯಲು ಪೂರ್ವಾರ್ಜಿತ ಪುಣ್ಯ ವು ಬೇಕು. ನೀನು ಬಹು ಪುಣಶಾಲಿಯು! ಅಂತೇ ಯಾಜ್ಞವಲ್ಕರಂಥ ಮಹಾತ್ಮರ ಪಾಣಿಗ್ರಹಣಮಾಡಿರುವೆ. ತಮ್ಮ ಪತಿಯನ್ನು ಆರಿಸಿಕೊಳ್ಳಲು ಸ್ವಾತಂತ್ರವಿರುವ ಸ್ತ್ರೀಯರಿಗೆ, ವಿಶೇಷವಾಗಿ, ಉಚ್ಚವರ್ಗದೊಳಗಿನ ಸ್ತ್ರೀಯರಿಗೆ ಕೇವಲ ಧನಿಕನೂ, ಸ್ವಸುಖಾಭಿಲಾಷಿಯೂ ಆದ ಪುರುಷನನ್ನೇ ಪತಿಯಾಗಿ ಆರಿಸಿಕೊಳ್ಳುವ ಮನಸ್ಸು ಯಾಕಾಗುತ್ತದೋ ನಾನರಿಯೆನು! ಗುಣಗಳಗಿಂತಲೂ ಐಶ್ವರ್ಯವೂ , ತೇಜಸ್ವಿತೆ ಗಿಂತಲೂ ಸುಖಲೋಲುಪತೆಯೂ, ಕರ್ತೃತ್ವಕ್ಕಿಂತಲೂ ವಿಷಯಾಸಕ್ತಿಯೂ ಹೆಚ್ಚಿ ನವೆಂದು ತಿಳಿಯುವ ಸ್ತ್ರೀಯರೇ ವಿಶೇಷವಾಗಿರುವರು. ನಿನ್ನಂಥ ವಿವೇಕಿಗಳು ತೀರ ಕಡಿಮೆ. ವಿದ್ಯಾಂಸನೂ, ವಿವೇಕಿಯೂ, ಸತ್ಪುರುಷನೂ, ಮೋಕ್ಷಪ್ರಾರ್ಥವಾಗಿ ಸಹಾಯಮಾಡುವವನೂ ಆದ ಭಗವಾನ್ ಯಾಜ್ಞವಲ್ಕರಂಥ ಪತಿಯನ್ನು ಆರಿಸಿ ನೀನು ಕೃತಕೃತ್ಯಳಾಗಿರುವೆ ! ಸಖೀ, ಕಾತ್ಯಾಯನೀ, ನಿನ್ನ ಮಹತ್ವವನ್ನು ನಾನೇನು ವರ್ಣಿ ಸಲಿ! ವಿದೇಹಜನಕನೆಂದು ಪ್ರಸಿದ್ಧನಾಗಿದ್ದ ರಾಜನುಕೂಡ ನಿನ್ನ ಪತಿಯ ಶಿಷ್ಯಪ್ರಕೆ ಟಿಯಲ್ಲಿ ಸೇರಿರುವನು. ಮೊನ್ನಿನಮಹಾಸಭೆಯಲ್ಲಿ ನಿನ್ನ ಪತಿಯು ಬ್ರಹ್ಮನಿಷ್ಟರಲ್ಲಿ ಪರಮಶ್ರೇಷ್ಟನೆಂದು ಮಹಾಮಹಾಜ್ಞಾನಿಗಳು ಒಪ್ಪಿಕೊಂಡರು! ಅಂಥ ಮಹನೀ