ಪುಟ:ಭವತೀ ಕಾತ್ಯಾಯನೀ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

28

೪ ನೆಯಪ್ರಕರಣ.

ವರಪ್ರದಾನ.

ಸಂತಕಾಲನ; ಚೈತ್ರಪೌರ್ಣಿಮೆಯ ರಾತ್ರಿಯ ಮೂರುತಾಸಿನ ಸಮಯ;

ಹಿಟ್ಟು, ಚಲ್ಲಿದಹಾಗೆ ಬೆಳದಿಂಗಳು ಬಿದ್ದಿದೆ. ಭಗವಾನ್ ಯಾಜ್ಞವಲ್ಕ್ಯರ ಪುಣ್ಯಾಶ್ರಮದ ಉಪವನದಲ್ಲಿ ಸುಳಿದಾಡಿ ಪವಿತ್ರವಾಗುವನೆವದಿಂದ ಮಂದಮಾರುತನು ಸುಳ್ಳ ಸುಳ್ಳನೆ ಸುಳಿದಾಡುತ್ತಲಿದ್ದಾನೆ. ಮಲ್ಲಿಗೆ, ಪಾರಿಜಾತ, ಪಾಟಲ ಮೊದಲಾದವುಗಳ ಅರಳ ಮೊಗ್ಗೆಗಳು ಮೆಲ್ಲ ಮೆಲ್ಲನೆ ಅರಳಹತ್ತಿ ಸುತ್ತಲು ಸುಗಂಧವನ್ನು ಬೀರುತ್ತಲಿವೆ. ಆಶ್ರ ಮದ ಮುಂಭಾಗದ ಪ್ರಶಸ್ತವಾದ ಅಂಗಳವನ್ನು ಸಾರಿಸಿ ಹಾಕಿದ ರಂಗವಲ್ಲಿಗಳು, ಅದೇ ಕಸಬೊಳೆದದ್ದರಿಂದ ಮಸಮಸಕಾಗಿ ತೋರುತ್ತಲಿವೆ. ಕೃಷ್ಣಾಜಿನ, ದರ್ಭಾಸನಾದಿಗಳು ಸುವ್ಯವಸ್ಥೆಯಿಂದ ಹಾಕಿವೆ. ಅಲ್ಲಿಯೇ ಸಮೀಪದಲ್ಲಿ ಆಶ್ರಮಸ್ಥ ಗೋಗಳು, ಹರಿಣ ಗಳು ಸ್ವಚ್ಛಂದದಿಂದ ಮೆಲಕಾಡಿಸುತ್ತ ಮಲಗಿಕೊಂಡಿವೆ. ಸತ್ಕರ್ಮ, ಸದ್ವಿಚಾರ, ಸದ್ಬೋಧ, ಸದಾನಂದಗಳಸಮಿಾಚೀನತೆಯಿಂದ ಆ ಆಶ್ರಮಪದವು ಶಾಂತಿರಸದಿಂದ ತುಂಬಿ ತುಳುಕುತ್ತಲಿದೆ. ಶ್ರೀ ಯಾಜ್ಞವಲ್ಕ್ಯರ ಶಿಷ್ಯವೃಂದದ ಸದ್ವಿದ್ಯಾವ್ಯಾಸಂಗವು ಆಸ್ಥೆ ಯಿಂದ ಸಾಗಿದೆ. ಚತುರ್ವೇದಗಳ, ಬ್ರಾಹ್ಮಣಗಳ, ಉಪನಿಷತ್ತುಗಳ ಪವಿತ್ರವಾದ ಮಂಜುಲಧ್ವನಿಯ ಕಿವಿಗೆ ಇಂಪಾಗಿ ದೂರದಿಂದ ಕೇಳುತ್ತಲಿದೆ. ಲೋಕಕಲ್ಯಾಣೇ ಚ್ಛುಗಳಾದ ಭಗವಾನ್ ಯಾಜ ವಲ್ಕ್ಯರು ಅದೇಬಂದು ಸುಖಾಸನದಲ್ಲಿ ವಿಶ್ರಮಿಸಿದ್ದಾರೆ. ಒಂದು ಚಿಗರೆಯಮರಿಯು ಅವರ ಆಸನದ ಬಳಿಯಲ್ಲಿ ಮಲಗಿಕೊಂಡು ಮೆಲಕು ಹಾಕುತ್ತಲಿದೆ. ಅಂಗಳದಲ್ಲಿ ಆಕಳಕರಗಳು, ಸ್ವಚ್ಛಂದದಿಂದ ಹಾರಾಡುತ್ತಿರಲು, ಅವುಗಳ ತಾಯಿಗಳು ಪ್ರೇಮಭರದಿಂದ ಕಿವಿಚಾಚಿ ನೋಡುತ್ತ ಮೆಲಕಾಡಿಸುತ್ತಲಿವೆ. ನಡನಡುವೆ ನವಿಲು, ಗಿಳಿ, ಮೊದಲಾದ ಆಶ್ರಮಸ್ಥ ಪಕ್ಷಿಗಳ ಮಂಜುಲಧ್ವನಿಗಳು ಇಂ ಪಾಗಿ ಕೇಳುತಲಿವೆ. ಅಷ್ಟರಲ್ಲಿ ಭಗವತೀ-ಕಾತ್ಯಾಯನಿಯು ಗೃಹಕೃತ್ಯಗಳನ್ನೆಲ್ಲ ತೀರಿ ಸಿಕೊಂಡು ಮಕ್ಕಳನ್ನು ಮಲಗಿಸಿ, ನಗೆಮೊಗದಿಂದ ಪತಿಯ ಸನ್ನಿಧಿಗೆ ಪ್ರಾಪ್ತವಾದಳು. ಆ ಪ್ರೇಮಲಸ್ವಭಾವದ ಸಾಧ್ವಿಯನ್ನು ನೋಡಿ ಯಾಜ್ಞವಲ್ಕ್ಯರಿಗೆ ಪರಮಾನಂದವಾ ಯಿತು. ಅವರು ಅತ್ಯಂತ ಆದರದಿಂದ ತಮ್ಮ ಪ್ರಿಯ ಅರ್ಧಾಂಗಿಯನ್ನು ಕುರಿತು---- "ದೇವೀ, ಗೃಹಕೃತ್ಯಗಳೆಲ್ಲ ತೀರಿದವಷ್ಟೆ ? ನಿನ್ನಂಥ ಕರ್ತವ್ಯನಿಷ್ಠರಾದ ಪ್ರೇಮಲ ಹೃ ದಯದ ಸಾಧ್ವಿಯರ ಪ್ರಾಪ್ತಿಯಿಂದಲೇ ಸಂಸಾರವು ಸುಖಮಯವಾಗುವದುಕಂಡೆಯಾ! ಅಸಾರವಾದ ಸಂಸಾರವು ನಿಮ್ಮಂಥವರ ಯೋಗದಿಂದಲೇ ಸಾರಮಯವಾಗುವಲ್ಲಿ ಸಂಶಯ ವಿಲ್ಲ. ಭಗವತೀ, ಬಾ, ಕುಳಿತುಕೋ. ಕಾರ್ಯದಕ್ಷಳಾದ ನಿನಗೆ ಕೆಲಸದ ದಣಿವಾಗ ದಿದ್ದರೂ, ನನ್ನ ಹೃದಯವು ಸದಾ ಕೃತಜ್ಞತಾಪೂರ್ಣವಾಗಿರುತ್ತದೆ. ನಿನ್ನ ಯೋಗ ದಿಂದ ನನ್ನ ಗೃಹಸಾ ಶ ಮದ ಮಾರ್ಗವು ಅತ್ಯಂತ ಸುಗಮವಾಗಿ ಹೋಗಿದೆ.” ಎಂದು