ಪುಟ:ಭವತೀ ಕಾತ್ಯಾಯನೀ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

31

ಪ್ರಭಾವವು ನನ್ನನ್ನು ಪ್ರೇರೇಪಿಸಿದಂತೆ ನಾನು ನಡೆದುಕೊಳ್ಳುತ್ತಿರುವೆನು; ಆದರೆ ದೇ- ಹಾದಿ ಬಾಹ್ಯವಸ್ತುಗಳ ವಿಚಾರದಲ್ಲಿಯೇ ನನ್ನ ಕಾಲಹರಣವಾಗುತ್ತಿರುವದರಿಂದಲೂ, ಅನುಭವದಿಂದ ನಶ್ವರವಾಗಿರುವ ವಸ್ತುಜಾಲಗಳ ಪ್ರಾಪ್ತಿಯಲ್ಲಿಯೇ ನನ್ನ ಮನಸ್ಸು ರಮಿಸುತ್ತಿರುವದರಿಂದಲೂ ಶಾಶ್ವತವಸ್ತುವಿನ ವಿಚಾರದ ಕಡೆಗೆ ನನ್ನ ಮನಸ್ಸು ತಿರು ಗುವದೇ ಇಲ್ಲ. ಈ ಸ್ಥಿತಿಯು ನನಗೆ ಹಿತಕರವಾಗಿ ತೋರದಾಗಿದೆ. ಆತ್ಮರೂಪಸತ್ಯ ವಸ್ತುವಿನ ಚರ್ಚೆಯು ಈ ಪುಣ್ಯಾಶ್ರಮದಲ್ಲಿ ಸದಾ ನನ್ನ ಕಿವಿಗೆ ಬೀಳುತ್ತಿದ್ದರೂ, ಅದರ ಕಡೆಗೆ ನನ್ನ ಮನಸ್ಸು ಹೊರಳದಿರುವದು ಸೋಜಿಗವಲ್ಲವೆ? ಭಗವನ್, ಗುರು ವರ, ಹೀಗೆ ನಾನು ಆತ್ಮವಿಚಾರ ವಿಮುಖಳಾಗಿರುವದು ಹಿತಕರವಾಗಬಹುದೋ?

ಯಾಜ್ಞವಲ್ಕ್ಶ--ದೇವಿ, ಹಿತಕರವಾಗುವದೆಂದು ನಾನು ಹೇಗೆ ಹೇಳಲಿ? ನಿತ್ಯ

ವಸ್ತುವಾದ ಆತ್ಮನ ಜ್ಞಾನವನ್ನು ಪಡೆಯದವರಿಗೆ, ಆ ನಿತ್ಯವಸ್ತುವಿನ ವಿಕಾರಗಳೆನಿ ಸುವ ಬಾಹ್ಯವಸ್ತುಗಳ ನಿಜವಾದ ಜ್ಞಾನವು ಹ್ಯಾಗಾಗಬೇಕು? ತನ್ನ ಜ್ಞಾನವೇ ತನ ಗಿಲ್ಲದವನಿಗೆ ಪರರಜ್ಞಾನವಾಗಬಹುದೆ? ಮೂಲ ವಸ್ತುವಿಗಿಂತಲೂ ಮೂಲ ವಸ್ತುವಿನ ವಿಕಾರದ ಕಡೆಗೆ ಲೋಕದ ಒಲವು ವಿಶೇಷವಾಗಿರುವದು. ಬಂಗಾರಕ್ಕಿಂತ ಬಂಗಾರದ ಒಡವೆಗಳಲ್ಲಿ ಆಸಕ್ತಿಯು ಹೆಚ್ಚು ಇರುವಂತೆ, ಹತ್ತಿಗಿಂತ ಹತ್ತಿಯಿಂದಾದ ಮನೋಹರ ವಸ್ತ್ರಗಳಲ್ಲಿ ಆಸಕ್ತಿಯು ಹೆಚ್ಚು ಇರುವಂತೆ, ಮೂಲವಾದ ಆತ್ಮವಸುವಿ ಗಿಂತ ಆತ್ಮದ ವಿಕಾರಗಳೆನಿಸುವ ಸೃಷ್ಟ ಪದಾರ್ಥಗಳಲ್ಲಿ ಲೋಕದ ಆಸಕ್ತಿಯು ಹೆಚ್ಚು ಇರುವದು. ಈ ಲೌಕಿಕಾಸಕ್ತಿಯಿಂದ ನೀನು ವಿಮುಖಳಾಗಿ ನಿತ್ಯವಸ್ತುವಿನ ಜ್ಞಾನದ ಕಡೆಗೆ ಮನಸ್ಸು ಮಾಡಿದ್ದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ.

ಕಾತ್ಯಾಯನಿ--ಇದಕ್ಕೆಲ್ಲ ತಮ್ಮ ಪುಣ್ಯಪ್ರಭಾವವೇ ಕಾರಣವು; ಆದರೆ

ತಮಂಥವರ ಚಿರಸಹವಾಸದಲ್ಲಿದ್ದು ಈ ಮೊದಲೆ ನನ್ನ ಮನಸ್ಸು ನಿತ್ಯವಸ್ತುವಿನ ಜ್ಞಾನದ ಕಡೆಗೆ ತಿರುಗದೆಯಿದ್ದದ್ದಕ್ಕಾಗಿಯೂ, ನನ್ನನ್ನು ಬುದ್ಧಿಪೂರ್ವಕ ತಾವು ಜಾಗ್ರತಗೊಳಿಸದೆಯಿದ್ದದ್ದಕ್ಕಾಗಿಯೂ ನನಗೆ ಚಡಪಡಿಕೆಯಾಗಿದೆ; ಸಥಿಯ ಮೂಲಕ ನಾನು ಹೀಗೆ ಆಡುವದು ಅಪರಾಧವಾಗಿರುವದು.

ಯಾಜ್ಞವಲ್ಕ್ಶ-- ದೇವಿ, ಅಪರಾಧವೆಂದು ಭಾವಿಸಬೇಡ. ನನ್ನ ಮಾತನ್ನು

ಲಕ್ಷವಿಟ್ಟು ಕೇಳು. "नाप्ट्सष्ट: कसश्य्चिद़बयाद़” ಅಂದರೆ ಕೇಳದೆ ಏನೂ ಹೇಳಬಾರದೆಂಬ ಮನುವಚನದಂತೆ, ಕೇಳದೆ ಹೇಳುವದು ತಪ್ಪಿನಲ್ಲಿ ಬರುವದು. ಕಸಕಾಯನ್ನು ಒತ್ತಿ ಹಣ್ಣು ಮಾಡಿದರೆ ಹಣ್ಣಾಗಬಲ್ಲದೆಯೆ? ಮಾವಿನ ಸಸಿಯು ಬೇಗನೆ ಫಲಕೊಡಬೇ ಕೆಂದು ಚಡಪಡಿಸಿದರೆ ಅದಕ್ಕೆ ಫಲಗಳಾಗಬಹುದೆ? ಯಾವದಕ್ಕಾದರೂ ತಕ್ಕ ಸಮ ಯವು ಒದಗಬೇಕಾಗುತ್ತದೆ. ಈ ಬುದ್ದಿಯು ನನಗೆ ಈಮೊದಲೆ ಹುಟ್ಟಲಿಲ್ಲೆಂದು ನೀನು ಚಡಪಡಿಸುವದು ಹ್ಯಾಗೆ ಯೋಗ್ಯವಾಗುವದು ಹೇಳು! ವಸ್ತಾಲಂಕಾರಗಳಲ್ಲಿ, ಸಂತತಿ-ಸಂಪತ್ತುಗಳಲ್ಲಿ ಅತ್ಯಂತ ಆಸಕ್ತರಾದ ಹೆಣ್ಣುಮಕ್ಕಳ ಸಂಸಾರವಾಸನೆಯು ವೇದಾಂತಶ್ರವಣದಿಂದ ನಷ್ಟವಾಗಬಹುದೆ?