ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೦೫
ಮೊದಲನೇ ವನವಾಸ

ದಿಂದ ನೆಲಹಿಡಿದ ಹಿಂದು ನಾನು ತಿರುಗಿ ಮುಖವೆತ್ತಲಿಕ್ಕೆ ಅನೇಕ ಶತಮಾನಗಳು ಬೇಕಾದವು; ಈ ಯುದ್ಧದೊಳಗೆ ಪಾಂಡವರಿಗೆ ಗೆಲ ವಾಗಿದ್ದರೂ, ಆ ಪ್ರೇಷ್ಟರ ನಾಶವಾಗಿದ್ದರಿಂದ ಅವರಿಗೆ ಬಲು ವ್ಯಸನ ವಾಗಿತ್ತು; ಲಕ್ಷಾವಧಿ ವಿಧವೆಯರು ತಮ್ಮ ತಮ್ಮ ಪತಿ ರಾಜರನ್ನು ಕಳೆ ದುಕೊಂಡದ್ದಕ್ಕಾಗಿ ಭೋರ್ಗರೆದು ಅಳುತ್ತಿರುವ ಶೋಕ ಧ್ವನಿಯನ್ನು ಕಿವಿಯಾರೆ ಕೇಳು ವದು ಯುಧಿಷ್ಠಿರನಿಗೆ ಮೀರಿದ ಕಾರ್ಯವಾಗಿತ್ತು. ಮಹಾಯುದ್ದ ದೊಳಗೆ ತಮ್ಮಿಂದೊದಗಿದ ಪಾ ಸದ ರಾಶಿಯನ್ನು ಎಬ್ಬಿಟ್ಟು ಪ್ರಾಯಶ್ಚಿತಗೊಳ್ಳಲು ಪಾಂಡವರು ಅಶ್ವಮೇಧಯಾಗ ವನ್ನು ಮಾಡಿದರು; ಮು೦ದೆ ಧರ್ಮರಾಜನಿಗೆ ಪಟ್ಟಾಭಿಷೇಕವಾ ಯಿ ತು. ಕೆಲ ದಿನ ರಾಜ್ಯವಾಳಿದ ಬಳಿಕ, ಸ೦ಜಯ, ವಿದುರ, ಧೃತ ರಾಷ್ಟ್ರ, ಗಾಂಧಾರಿ, ಕು೦ತಿ ಮೊದಲಾದವರು ತಪೋವನಕ್ಕೆ ತೆರಳಿ ದರು. ಈ ಕಾಲಕ್ಕೆ ಪಾಂಡವರು ತಾಯಿಯನ್ನು ಕುರಿತು ( ತಾಯೇ, ನಮ್ಮನ್ನು ಯುದ್ಧಕ್ಕೆ ನೀನೇ ತೊಡಗಿಸಿದಿ; ಮತ್ತು ಈಗ ರಾಜೈ ಶ್ವರ್ಯ ವನ್ನು ಅನುಭವಿಸದೆ ನೀ ನೇ ವನಕ್ಕೆ ಹೋಗುತ್ತಿಯಲ್ಲ!” ಎಂದು ಭೀಮನು ಹೇಳಲು, ಅದಕ್ಕೆ ನೀರಮಾತೆಯಾದ ಕಾ೦ತಿ ದೇವಿಯು ( ನನ್ನ ಪತಿಯ ರುವಾಗ್ಗೆ ರಾಜ್ಯ ಬೆ. ಗವನ್ನು ಬೇಕಾದಷ್ಟು ಅನುಭವಿ ಸಿರುವನು; ನೀವು ಭಿಕ್ಷೆ ಬೇಡಿ ಜೀವಿಸಬಾರದೆಂದೆಣಿಸಿ ನಾನು ನಿಮಗೆ ಯುದ್ಧ ಮಾಡಲು ಹೇಳಿದೆ” ನೆಂದು ತಿಳಿಸಿ ಕೊನೆಯ ಉವದೇ ಶದ ವಾಕ್ಯ ವೆಂದು ( ಧರ್ಮಾಚರಣೆಯಲ್ಲಿ ನಿಮ್ಮ ಬುದ್ಧಿಯ ನೆಲಿಸಲಿ, ನಿಮ್ಮ ಮನಸು ದೊಡ್ಡದಾಗಿರಲಿ” ಎಂದು ಹರಸಿ ಹೋದಳು. ವೀರಮಾತೆ ಯಾದ ಕುಂತಿ ದೇವಿಯ ಈ ವಾಕ್ಯವೆಂದರೆ ಇಡೀ ಮಹಾಭಾರತದ ಸಾರವೇ ಆಗಿದೆಯಲ್ಲವೇ ?