ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಭಾರತೀಯರ ಇತಿಹಾಸವು.

ದ್ದರಿಂದ, ಅವರಿಗೆ ಪದೇಪದೇಶೂದ್ರರೊಡನೆ ಬಳಿಕೆ ಹೆಚ್ಚಾಗಲು ಕಾರಣವಾಯಿತು; ಆದುದರಿಂದ, ಸ್ತ್ರೀಯು ಯಾವ ಜಾತಿಯವಳೇ ಇರಲಿ, ಪುರುಷನು ಯಾವ ವರ್ಣದವನೋ , ಅವನಿ೦ದಾದ ಸ೦ತತಿಯಾದರೂ ಅವನ ವರ್ಣಕ್ಕೇ ಹೊಂದಲಿಕ್ಕೆಬೇಕೆಂದು ಮೊದಲಿನ ಕಾಲಕ್ಕೆ ನಿಯಮವಿತ್ತು; ಬ್ರಾಹ್ಮಣನು ಮೂರೂ ವರ್ಣದ ಹೆಂಗಸರನ್ನು ಮದುವೆಯಾಗಬಹುದು; ಮತ್ತು ಅವನಿಂದ ಹುಟ್ಟಿದ ಪೀಳಿಗೆಯನ್ನು ಬ್ರಾಹ್ಮಣ ಪೀಳಿಗೆಯೆಂದೇ ಎಣಿಸಲಿಕ್ಕೆಬೇಕೆಂದು ಮಹಾಭಾರತದೊಳಗೆ ಎಷ್ಟೋ ಕಡೆಯಲ್ಲಿ ಉಕ್ತವಾಗಿದೆ, ಆದರೆ ಈ ನಿಯಮವು ಮುಂದೆ ಮಾರ್ಪಟ್ಟು ಬ್ರಾಹ್ಮಣನಿಗೆ ಬ್ರಾಹ್ಮಣ ಸ್ತ್ರೀಯಳಿoದಾದ ಸಂತತಿಯು ಬ್ರಾಹ್ಮಣ, ಕ್ಷತ್ರಿಯನಿಗೆ ಕ್ಷತ್ರಿಯಳಿ೦ದಾದ ಸ೦ತಾನವು ಕ್ಷತ್ರಿಯವೆಂಬ ಕಲ್ಪನೆಯು ರೂಢವಾಯಿತು. ಪರಾಶರಮುನಿಗಳ೦ಥ ಮಹಾತಪಸ್ವಿಗಳು ಮತ್ಸ್ಯೆಗಂಧೆ ಯ೦ಧ ಕೀಳಜಾತಿಯ ಕನ್ಯೆಯೊಡನೆ ವಿವಾಹ ಬೆಳೆಸಿದರು; ಮತ್ತು ಅವಳ ಹೊಟ್ಟೆಯಲ್ಲಿ ಶ್ರೀವ್ಯಾಸಮಹರ್ಷಿಗಳ೦ಥ ಅತ್ಯಂತ ಶ್ರೇಷ್ಠ ಜ್ಞಾನಿಗಳು ಹುಟ್ಟಿದ್ದರು; ಪರಾಶರಮುನಿಗಳ ಈ ವರ್ಣಸಂಕರ ಮಾಡು ವಂಥ ಕೃತಿಯಿಂದ ತತ್ಕಾಲೀನ ಸಮಾಜದೊಳಗೆ ದೊಡ್ಡ ಗಲಭೆಯೆದ್ದಿರಲಿಕ್ಕೆ ಸಾಕು; ಮತ್ತು ಕಟ್ಟಕಡೆಗೆ, ಬ್ರಾಹ್ಮಣ ಶೂದ್ರರ೦ಥ ತೀರ ಭಿನ್ನವರ್ಣದವರಿಂದಾದ ಸಂತತಿಯು ತೇಜಸ್ವಿಯಾಗದೆಂದು ಬಗೆದು ಬ್ರಾಹ್ಮಣರು ಶೂದ್ರಸ್ತ್ರೀಯರೊಡನೆ ಲಗ್ನ ಬೆಳಿಸಕೂಡದೆಂದೇ ಕೊನೆಯ ನಿರ್ಣಯವಾಯಿತು. ಅರ್ಯರು ಪುರುಷರಿಗಿಂತ ಸ್ತ್ರೀಯರ ಕ್ಷೇತ್ರಕ್ಕೆ ಹೆಚ್ಚು ಗಮನ ಕೊಟ್ಟರು; ಉಚ್ಚವರ್ಣದ ಹೆಂಗಸರು ನೀಚವರ್ಣದ ಪುರುಷನನ್ನು ವರಿಸಿದರೆ, ಅದರಿಂದ ಸಮಾಜಕ್ಕೆ ಭಯಂಕರವಾದ ಹಾನಿ ತಟ್ಟುವದೆಂದರಿತುಕೊಂಡು, ಇ೦ಥವರಿಂದಾದ ಸ೦ತತಿಯು ತೀರ ನಿ೦ದ್ಯವಾದುದೆಂದು ನಿರ್ಧರಿಸಿದರು.

ವರ್ಣಸಂಕರದ ಗಂಡಾಂತರ:- ಆರ್ಯರಿಗೆ ವರ್ಣಸಂಕರ ದಷ್ಟು ಭೀತಿಪ್ರದವಾದ ಬೇರೊಂದು ಹೆದರಿಕೆ ಇರಲಿಲ್ಲ. ಪ್ರತಿಯೊಬ್ಬ ರಾಜನು ವರ್ಣಸಂಕರವಾಗಗೊಡದಂತೆ, ಎಚ್ಚರವಾಗಿರಬೇಕೆಂದು ಅಲ್ಲಲ್ಲಿ ಬಹುಪರಿಯಾಗಿ ಸೂಚಿಸಿದ್ದಾರೆ; ವರ್ಣ ಅಥವಾ ವಂಶವು