ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೪ ೨ ಭಾಗ ತೀರ ಇತಿಹಾಸವು. ಕ್ರಮವನ್ನೇ ಇಲ್ಲಿ ಕೊಡುತ್ತೇವೆ; ಬೆಳಗು ಮುಂಜಾವಿನಲ್ಲಿ ಗಾಯಕರಾದ ಮಾಗಧರು ತಾಳವಿಡಿದು ಹಾಡಹತ್ತಿದ್ದರು; ಭಟ್ಟಂಗಿಗಳ, ಸೂತರೂ ರಾಜರನ್ನು ಹೊಗಳಲಾರಂಭಿಸಿದರು; ನರ್ತಕರೂ, ಸುಸ್ವರವುಳ್ಳ ಗಾಯ ಕರೂ ಹಾಡಿ ಕುಣಿಯ ತೊಡಗಿದರು; ಮದ್ದಳೆ, ಕಹಳೆ, ಶಂಖ, ದ ಲಾದ ವಾದ್ಯಗಳು ಮೊಳಗಿದವು. ಹೀಗೆ ರಮ್ಯ ಹಾಗೂ ಗಂಭೀರ ವಾದ್ಯ ಘೋ ಷವು ನಡೆದಿರಲು ಯುಧಿಷ್ಠಿರನು ಎತ್ತು ನಾನಾ ಕ ಮುಂತಾದ ಪ್ರಾತರ್ವಿಧಿಗಳಿಗಾಗಿ ನಾನಗೃಹವನ್ನು ಹೊಕ್ಕನು; ಸ್ನಾನಗೃಹದೊಳಗೆ ಬಿಳೆ ಝಳ ಝಳ ಬಟ್ಟೆಗಳನ್ನು ಟ್ಟು ೧೦೮ ಮಂದಿ ಯುವಕರಾದ ನೀರಿನವರು ಚಿನ್ನದ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರು ತುಂಬಿಕೊಂಡು ಸಜ್ಜಾಗಿ ನಿಂತಿದ್ದರು. ಧರ್ಮರಾಜನು ಚಿಕ್ಕ ದೊ೦ದು ಬಟ್ಟೆಯನ್ನುಟ್ಟು ಕೊಂಡು ಬಣ್ಣದ ಮಣಿಯ ಮೇಲೆ ಕುಳಿತ ನಂತರ, ಅವರು ಧರ್ಮ ರಾಜನ ಮೈಗೆ ಸುವಾಸನೆಯ ತೈಲಾದಿಗಳನ್ನು ಹಚ್ಚಿ ತಿಕ್ಕಿ ತಿಕ್ಕಿ ಸ್ನಾನಕ್ಕೆ ಹಾಕಿದರು; ಯುಧಿಷ್ಠಿರನು ಶುಭ್ರವೂ ಸ್ವಚ್ಚವೂ ಆದ ಬಟ್ಟೆಯಿಂದ ಮೈ ಒರಸಿಕೊಂಡು, ಮೈಗೆ ಚಂದನ ಸವರಿಕೊಂಡು ಬಚ್ಚಿಗಳನ್ನು ಟ್ಟು, ಕೆಲಹೊತ್ತು ಪೂರ್ವಾಭಿಮುಖನಾಗಿ ಜ ವ ವಾಡು ತ್ರ ಕುಳಿತನಂತರ ಪ್ರದೀಪ್ತವಾದ ಅಗ್ನಿಗ್ರಹ ದೊಳಗೆ ಹೋದನು. ಅಗ್ನಿ ಯಲ್ಲಿ ಸಮಿಧಾ ಹಾಗೂ ಅಚ್ಯಾಹುತಿಗಳನ್ನು ಮಂತ್ರಪೂರ್ವಕವಾಗಿ ಮಾಡಿಕೊಂಡು ಹೊರಗೆ ಅ೦ದರೆ, ತನ್ನ ಒಳ ಸಭಾ ಸ್ಥಾನಕ್ಕೆ ಬಂದು, ಅಲ್ಲಿ ಕುಳಿತಿರುವ ವೇದವೇತರಾದ ಬ್ರಾಹ್ಮಣರನ್ನು ಮಧು ಸರ್ಕಾದಿ ಗಳಿಂದ ಪೂಜಿಸಿ, ಅವರಿಗೆಲ್ಲ ಒ೦ದೊ೦ದು ನಿಷ್ಟಗಳನ್ನು ದಕ್ಷಿಣೆ ಕೊಟ್ಟನು; ಇಷ್ಟೆಲ್ಲಾದ ನ೦ತರ ಯುಧಿಷ್ಠಿರನು ಹೊರಗಿನ ಸಭಾ ಾ ನಕ್ಕೆ ಬರಮಾಡಿದನು; ಅಲ್ಲಿ ಬಂದು ' ಸರ್ವತೋ ಭದ್ರ' ವೆಂಬ ಸುವೆ ರ್ಣಾಸನದ ಮೇಲೆ ವಿರಾಜಮಾನನಾಗಿ ತನ್ನ ರಾಜಕಾರ್ಯ ನಡೆಸಿ ದನು. ) ಶಾಸನ, ತೆರಿಗೆ ಮುಂತಾದುವು:- ಮುಂಚಿನಕಾಲದ ರಾಜರ ೮೦ದರೆ ಈಗಣ ಕಾಲದ ಒಂದು ಅಥವಾ ಎರಡು ಜಿಲ್ಲೆಯಷ್ಟು ಇರುತ್ತಿದ್ದವು; ಒ೦ದೊ೦ದು ಗ್ರಾಮಕ್ಕೆ ಒಬ್ಬೊಬ್ಬ ಗ್ರಾಮಾಧಿ ೯ 2•