ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜೈನಧರ್ಮದಿಂದಾದ ಲಾಭ ಅಥವಾ ಹಾನಿ. ೧೭೯ ರನ್ನು ಸರಿಗಟ್ಟು ವವರು ಭಾರತ ವರ್ಷದಲ್ಲಿಯೇ ಯಾರೂ ಇಲ್ಲವೆಂದರೆ ಅತಿಶಯೋಕ್ತಿಯಾಗದು, ಜೈನರು ಇಷ್ಟು ಕಟ್ಟು ನಿಟ್ಟಾದ ಅಹಿಂ ನಾ ವಾದಿಗಳಿದ್ದರೂ, ಧರ್ಮಯುದ್ದವಾಡು ವದ, ಶಿಕ್ಷೆ ಕೊಡುವದೂ ಪಾ ಪವೆಂದು ತಿಳಿಯುವದಿಲ್ಲ; ಜೈನಮ ತದಂತೆ, ಮುಕ್ತಿಯೆಂದರೆ ಶಾಶ್ವತ ವಾದ ಮನಸ್ಸಿನ ಶಾ೦ತಿ. ಜೈನಧರ್ನುದಿಂದಾದ ಲಾಭ ಅಥವಾ ಹಾನಿ:- ಹಿಂದೂ ದೇಶ ದೊಳಗೆ ಜೈನ ಧರ್ಮವು ಚೆನ್ನಾಗಿಯೇ ಹಬ್ಬಿ ಕೊ೦ಡಿತು; ಎಂದಾದರೂ ಭಾರತೀಯ ರಿಗೆ ಸನ್ಯಾಸ, ಅಹಿ೦ಸೆ ಅವೆಲ್ಲವೂ ಬೇಕಾದ ತತ್ವಗಳು; ಹಚ್ಚಿ ಗೇನು ಈ ಮಾತುಗಳನ್ನಾಡತೊಡಗಿದರೆ, ಭಾರತೀಯರಿಗೆ ಒಂದು ವಿಧದ ಹುಚ್ಚೇ ಹಿಡಿಯುತ್ತದೆ. ಜೈನಮತ ದೊಳಗಿನ ತತ್ವ, ಆಕಾರ ಗಳೆಲ್ಲವೂ ಅರ್ಯ ಧರ್ಮದ ತತ್ವಗಳಂತೆಯೇ ಇದ್ದರೂ, ಜೈನರು ತಮ್ಮ ಮ ತದೊಳಗೆ ಅಹಿಂಸೆಗೆ ವಿಶೇಷ ಪ್ರಾಶಸ್ತ್ರ ಕೊಟ್ಟಿದ್ದೇ ಹೆಚ್ಚಿನ ಸಂಗತಿಯು, ಉಪನಿಷತ್ಕಾಲಕ್ಕೆ ಹೇಗೆ ಅನೇಕ ಸ್ವತಂತ್ರ ವಿಚಾರ ಶೀಲರು ಯಜ್ಞ ಪದ್ಧತಿಗೆ ವಿರೋಧ ಕಟ್ಟಿ, ಅದನ್ನು ಬಗೆಬಗೆಯಿಂದ ಖಂಡಿಸಿ, ತತ್ವಜ್ಞಾನಕ್ಕೆ ಪ್ರಾಧಾನ್ಯವನ್ನು ಕೊಟ್ಟಿರೋ ಹಾಗೆಯೇ ಈ ಕಾಲದಲ್ಲಿ ಆರ್ಯರಾದ ಜೈನರು ಜಾತಿಯ ಕಟ್ಟನ್ನು ಕೆಡಿಸದೆ, ಆರ್ಯ ಧರ್ಮದೊಳಗಿನ ವಿಶಿಷ್ಟವಾದ ಪದ್ಧತಿ ಅಕಾ ರಗಳನ್ನೇ ತಮ್ಮ ಮ ತಕ್ಕೆ ಜೀವಾಳವನ್ನಾಗಿಟ್ಟು ನಡೆದರು. ಜೈನರ ಅಹಿಂನಾ ಪ್ರಧಾನವಾದ ಮತ ದಿ೦ದ ಬ್ರಾಮ್ಮಣರ ಯಜ್ಞ ಸಂಸ್ಥೆಗೆ ಚೆನ್ನಾಗಿ ಧಕ್ಕೆ ತಗಲಿದರೂ, ಅದ ರಿಂದ ಭಾರತೀಯರ ರಾಜ ನೀತಿಗೇನೇ ಕೊಕ್ಕೆ ಬಿತ್ತೆಂದು ಕೆಲವರು ಆಕ್ಷೇಪಿಸುತ್ತಾರೆ; ಏಕೆಂದರೆ ಜೈನಮ ತದೊಳಗೆ ಹೇಳಿರುವಷ್ಟು ಅಹಿಂಸೆಯಾಗಲಿ, ತ್ಯಾಗವಾಗಲಿ ಸಾಮಾನ್ಯ ಜನತೆಗೆ ನಿಲುಕುವಂಥ ವಿಷಯ ವಲ್ಲವಾದ್ದರಿಂದ ಐಹಿಕ ಉನ್ನತಿಗೆ ಇ೦ಧ ತತ್ವಗಳು ಬಾ ಧಕ ವೆಂದು ಅನೇಕರ ಅಭಿಪ್ರಾಯ. ಹಿಂದೂ ದೇಶವು ತ್ಯಾಗ ಭೂ ಮಿಯಾದ ರಿಂದ, ತ್ಯಾಗದ ಕಲ್ಪನೆಯು ಯಾವಾಗ ಕು೦ದುವದೊ, ಅಗ ಅದನ್ನು ಹೆಚ್ಚಿಸಲಿಕ್ಕೆ ಇ೦ಧ ಮತಗಳು ಹುಟ್ಟುತ್ತಿರುತ್ತವೆಂಬುದು ಅನೇಕ ಮತಗಳ ಹುಟ್ಟಿನ ಇತಿಹಾಸವನ್ನು ಸೂಕ್ಷವಾಗಿ ವಿಚಾರಿಸಿದರೆ ತಿಳಿ