ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುದ್ಧಸಿದ್ಧತೆ. ೨೧೬ ಒಂದು ಬಗೆಯ ನವಜೀವನದ ಗಾಳಿಯು ಸುಳಿಯ ತೊಡಗಿತು. ನಿರಾಶೆ ಯಿ೦ದ ಕಮರಿ ಒಣಗಿ, ಕುದುರಿ ಹೂರ ಅತನ ಮುಂದಣ ಆಶೆಯ ಸಸಿಯು ಚಿಗು ಹತ್ತಿತು. ತಾನು ಮಾಡಿದ ಪಣದ ಎಚ್ಚರಿಕೆಯು ಯಾವಾಗಲೂ ಮನಸಿನಲ್ಲಿ ಉರಿಯುತ್ತಿದ್ದುದರಿಂದ ಆತನು ಕೆಚ್ಚೆದೆಯಿಂದ ತನ್ನ ಕಾರ್ಯಗಳನ್ನು ನಡೆಸಲುದ್ಯುಕ್ತನಾಗಿ, ಚಂದ್ರಗುಪ್ತನಿಗೆ ಅನು ಕೂಲ ರಾಗಿರುವವರನ್ನು ಕಂಡು, ಅವರೊಡನೆ ಮಾತನಾಡಿಕೊಂಡು, ಶತ್ರುಗಳಾದ ನಂದರನ್ನು ಮಲೋತ್ಪಾಟನೆಯ ಕಾರ್ಯದೊಳಗೆ ತನಗೆ ಯಾರಿಂದ ಸಹಾಯವಾಗಬಹುದೆಂಬುದನ್ನು ಅಳೆದು ಕೊ೦ಡು, ಚಂದ್ರ ಗುಪ್ತನ ದುಃಸ್ಥಿತಿಗಾಗಿಯ, ನಂದರ ದುರ್ನಡತೆಗಾ ಗಿಯ ಮನಸು ಕರಗುವಂತೆ ಮಾತನಾಡಿ ನೆರೆಹೊರೆಯ ರಾಜನಾದ ಪರ್ವತೇಶ್ವರನನ್ನು ತನ್ನ ಕಡೆಗೆ ಒಲಿಸಿಕೊಂಡು, ಮಗಧರಾಜ್ಯದೊಳಗಿನ ಅರ್ಧರಾಜ್ಯ ವನ್ನು ಪರ್ವತೇಶ್ವರನಿಗೆ ಸಲ್ಲಿಸಲಾಗುವದೆಂದು ಹೇಳಿ ಯುದ್ಧದ ರಣೆ ನಡೆಸಿದನು. ಯುದ್ದ ಸಿದ್ದತೆ:- ತಮ್ಮ ತಮ್ಮ ಮಿತ್ರರಾಜರಿಗೆ ಸೈನ್ಯ ಸಿದ್ಧತೆ ನಡೆಸುವ ವಿಷಯವಾಗಿ ಕಾಗದಗಳು ಕಳಿಸಲ್ಪಟ್ಟಿದ್ದವು; ಬೇರೆ ಬೇರೆ ರಾಜರಿಂದ ಸೈನ್ಯಗಳು ನಡೆದು ಬಂದು ಪರ್ವತೇಶ್ವರನ ರಾಜ್ಯದಲ್ಲಿ ಬಿಡಾರಗಳನ್ನು ಬಿಡಹತ್ತಿದವು. ಈ ಗುಟ್ಟನ್ನು ತಿಳಿದು ಕೊ೦ಡ ನ೦ದ ರಾದರೂ ಕೈ ಮುಚ್ಚಿ ಕೊ೦ಡಿರದೆ, ತಮ್ಮ ಸಿದ್ಧತೆಯಲ್ಲಿಯೇ ಇದ್ದರು - ಪರ್ವತೇಶ್ವರನ ದ೦ಡು ಮಗಧರಾ ಜ್ಯದ ವರೆಗೆ ವ್ಯಾಪಿಸಿಕೊಂಡಿತ್ತು. ಇಬ್ಬಣದವರಿಗೂ ಯುದ್ಧವೆಸಗಿತು. ನ೦ದಾದಿಗಳು ತಮ್ಮ ಕೈಯಲ್ಲಿ ದಂಡಿನ ಭಾಗವನ್ನು ತೆಗೆದು ಕೊಂಡು ಬಹು ದಕ್ಷರಾಗಿ ಕಾಡುತ್ತಿದ್ದರು - ನಂದು ಈ ಕಾಳಗದೊಳಗೆ ಶತ್ರುಗಳ ಸೈನ್ಯದ ಒಡಲು ಹೊಕ್ಕು, ಸಿಂಹ, ಹುಲಿ ಮೊದಲಾದ ಮೃಗರಾಜರು ಕುರಿ ಹಿಂಡನ್ನು ಮುರಿದು, ತರಿದು ಸದೆಬಡೆಯುವಂತೆ ದ೦ಡಾಳುಗಳ ತಲೆಗಳನ್ನು ಚಂಡಾಡು ತಲೂ, ರಧಿಕ ರನ್ನು ಒಂದೆ ಪೆಟ್ಟಿಗೆ ದಿಂಡು ಗೆಡಹುತ್ತಲೂ, ಕುದುರೆ ಯಾಳುಗಳನ್ನು ನೆಲಕ್ಕುರಿಳಿಸುತ್ತಲೂ, ಆನೆಗಳ ಬಲವನ್ನು ಕತ್ತರಿಸಿ ತುಂಡರಿಸು ಲೂ, ರಣಾಂಗದ ಮೇಲೆ ಪ್ರತಿಕ್ರ ಎcಬcತೆ