ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೮೨
ಭಾರತೀಯರ ಇತಿಹಾಸವು.

ಚಕ್ರವರ್ತಿಯಾಗಿರುವ ಮಹಾರಾಯನ ಉಡಿಗೆಯ ಬಗೆಯೇ ಹೀಗಿದ್ದ ಮೇಲೆ ಸಾಮಾನ್ಯರ ಪಾಡೇನು? ರೇಶ್ಮಿ, ಉಣ್ಣೆ, ಹತ್ತಿಗಳಿ೦ದ ನೂತು ನೇಯ್ದ ಈ ಬಟ್ಟೆದೊಡವುಗಳು ಹಾವಿನ ಪರೆಯ೦ತೆ ಹೊಳಪಾಗಿಯೂ, ಅಂದವಾಗಿಯ, ಗಟ್ಟಿಯಾಗಿಯೂ, ಉಸಿರು ತಗಲಿದರೆ ಹಾರುವಂಥವುಗಳೂ, ಇ೦ದ್ರಧನುಷ್ಯದ ತೆರನಾಗಿ ಚಿತ್ರವಿಚಿತ್ರ ಬಣ್ಣದವುಗಳೂ ಇರುತ್ತಿದ್ದವು. ಅ೦ಚಿಲ್ಲದ ಸಾದಾ ಬಿಳೇ ಬಟ್ಟೆಗಳನ್ನು, ವಿಧವೆಯರು ಮಾತ್ರ ಉಡುತ್ತಿದ್ದರು. ವಿಧವೆಯರು ಕೆಂಪು ಬಟ್ಟೆಗಳನ್ನುಡುವ ಈಗಿನ ಪದ್ಧತಿಯೂ ಬೌದ್ಧ ಭಿಕ್ಷುಣಿಯರ ಅನುಕರಣೆಯೇ ಸರಿ. ಉಡಿಗೆತೊಡಿಗೆಗಳಲ್ಲಿ ಹರ್ಷಕಾಲದವರು ಇಷ್ಟೊಂದು ಸಾದಾ ನಡೆಯವರಿದ್ದರೂ, ಒಡವೆ ತೊಡವೆಗಳೆ೦ದರೆ ಎಂದಾದರೂ ಅವರಿಗೆ ಬಲು ಹಿಗ್ಗು. ಈ ಬಗ್ಗೆ ಈಹೊತ್ತಿಗೂ ನಮ್ಮ ಸಮಾಜದೊಳಗೆ ರೂಢವಾಗಿರುವ ಪದ್ದತಿಗಳೇ ಸಾಕ್ಷಿ. ಹರ್ಷಮಹಾರಾಯನ ಕಾಲದಲ್ಲಿಯೂ, ಹಿಂದೂಗಳು "ತಲೆಯಲ್ಲಿ ವಜ್ರವೈಡೂರ್ಯಾದಿಗಳಿ೦ದ ಕೆತ್ತಿದ ಕಿರೀಟ, ಕೊರಳಲ್ಲಿ ರತ್ನಹಾರ, ಕೈಯಲ್ಲಿ ಕಡಗ, ಬೆರಳಲ್ಲಿ ಉ೦ಗುರ ಮುಂತಾದವುಗಳನ್ನಿಟ್ಟುಕೊಂಡು ಶಿಂಗರಿಸಿಕೊಳ್ಳುವ ವಾಡಿಕೆಯಿತ್ತೆಂದು” ಹ್ಯುಯೆನತ್ಸ೦ಗನು ಬರೆದಿರುವನು. ಹೀಗಿದ್ದರೂ ಹರ್ಷಮಹಾರಾಯನು ಇವೆಲ್ಲವುಗಳ ಜಂಜಡಕ್ಕೆ ಶಿಲುಕದೆ ಕಿವಿಯಲ್ಲಿ ಕುಂಡಲಗಳನ್ನೂ ರಟ್ಟೆಯಲ್ಲಿ ಬರಿಯ ಕಡಗವೊಂದನ್ನೂ ಹಾಕಿಕೊ೦ಡಿದ್ದನೆಂದು ಬಾಣನು ವರ್ಣಿಸಿದ್ದಾನೆ. ಸಾಮಾನ್ಯ ಜನರೆಲ್ಲರೂ ಬರಿಗಾಲಿನಿಂದ ನಡೆಯುತ್ತಿದ್ದರೆಂಬುದನ್ನು ಹ್ಯುಯೆನತ್ಸ೦ಗನು ಬರೆದಿರುವನು. ಶಿಷ್ಟರಾದ ಬ್ರಾಮ್ಹಣರೂ, ಹ೦ಗಸರೂ, ಹಳ್ಳಿಯವರೂ ಈ ಪದ್ಧತಿಗೆ ಇನ್ನೂ ಕುರುಹುಗಳಾಗಿರುವರು. ದಂಡಿನ ಅಧಿಕಾರಿಗಳು ಕೆಲವರು ತಲೆಯ ಮೇಲೆ ನಿಡುಗೂದಲು, ಕಲ್ಲೀಮೀಸೆ, ಹೊಕ್ಕಳ ವರೆಗೆ ಜೋಲುತ್ತಿರುವ ಗಡ್ಡೆಗಳನ್ನಿಡುತ್ತಿದ್ದರೆಂದೂ ಬಾಣನ ವರ್ಣನೆ. ಬಾಣಭಟ್ಟನ ಲಗ್ನದ ಪರಿಯನ್ನೂ, ರಾಜ್ಯಶ್ರೀದೇವಿಯ ಲಗ್ನದ ರೀತಿಯನ್ನೂ ಓದಿದರೆ ಆ ಕಾಲಕ್ಕೆ ಪ್ರೌಢವಿವಾಹವೇ ಬಳಕೆಯಲ್ಲಿತ್ತೆಂದೂ ಊಟಉಪಚಾರದ ಗೊಂದಲವಿರಲಿಲ್ಲೆಂದೂ ಸಿದ್ಧವಾಗುತ್ತದೆ. ನಿಜವಾಗಿ ತಿಳಿದು ಅಳೆದು