ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೦

ಭಾರತೀಯರ ಇತಿಹಾಸವು.

ಹೊತ್ತು ಬಂದಿದೆ. ತಿಳಿದು ನೋಡಿದರೆ, ಜನಾ೦ಗವೇ ಜನಾ೦ಗದ ಅರಸು; ಆದುದರಿಂದ ಜನಾ೦ಗದ ಅರಸನಿಗೆ ಎಂದಾದರೂ ಜನಾ೦ಗಕ್ಕಿಂತ ಕಡಿಮೆಯೆಂದು ಎಣಿಸತಕ್ಕದ್ದು; ಆದರೆ ಮಧ್ಯಯುಗದೊಳಗೆ ದುಷ್ಟರಾಜರ ದರ್ಪದಿಂದ ಜನರಲ್ಲಿಯ ಜಿಗಟೂ, ಸ್ವಾತಂತ್ರ್ಯದ ಸವಿಯೂ ಅವೇ ಮುಂತಾದ ಜನಾ೦ಗ ಪೋಷಕವಾದ ನಾಗರಿಕರ ಸದ್ಗುಣಗಳೆಲ್ಲ ಹಳ್ಳಕ್ಕೆ ಬಿದ್ದು ಹರಿದು ಹೋದ್ದರಿಂದ ಅವು ಕೊನೆಯವರೆಗೆ ಏಳದೆ, ಜನಾ೦ಗದ ಜೀವನವೇ ಹಾಳಾಯಿತು. ಅಂದಮೇಲೆ ಜನಾ೦ಗ ಜೀವನವನ್ನು ಲೆಕ್ಕಿಸುವರಾರು ? ಅದರೆ ಕನ್ನಡಿಗರ ಸುದೈವದಿಂದ ಕನ್ನಡ ನಾಡಿಗೊ೦ದು ಚೆನ್ನಗಾಲವು ಒದಗಿತು. ಕನ್ನಡ ದೇಶದ ಚರಿತ್ರೆಯನ್ನೇ ಕೆಲಕಾಲ ತಮ್ಮ ಕೈಯೊಳಗೆ ತೆಗೆದುಕೊಂಡು ಅದನ್ನು ಉಜ್ಜೀವಿಸುವ ಭಾರವನ್ನು ಚಾಲುಕ್ಯರು ಹೊತ್ತರು. ನಾಡಿಗತನದ ನಡೆನುಡಿಗಳಿಗೆ ತಕ್ಕಂತೆ ಜನಪದವನ್ನು ಮಾರ್ಪಡಿಸಲು ಪ್ರಯತ್ನ ಪಟ್ಟವರಲ್ಲಿ ಚಾಲುಕ್ಯರೇ ಮೊದಲನೇಯವರು. ಚಾಲುಕ್ಯರು ಉದಯವಾಗುವದಕ್ಕಿಂತ ಮೊದಲು ಕನ್ನಡನಾಡು ಕನ್ನಡನುಡಿ ಇದ್ದೇ ಇದ್ದರೂ ನಾಡನ್ನಾಳುವ ಅರಸರು ನಾಡಿಗೂ ನುಡಿಗೂ ಅಷ್ಟೊಂದು ಮಹತ್ವವನ್ನು ಕೊಟ್ಟಿರಲಿಲ್ಲ. ಕನ್ನಡ ನಾಡಿನಲ್ಲಿ ಇದಕ್ಕೆ ಪೂರ್ವದಲ್ಲಿ ಕದಂಬ ಗಂಗ ಮುಂತಾದ ಅರಸುಗಳು ಅಳಿದರು; ಅವರಿಂದಲೇ ಕನ್ನಡದ ನಾಡಿಗತನದ ಕಲ್ಪನೆಗಳಿಗೆ ಪ್ರಾರ೦ಭ. ಅವರಲ್ಲಿ ಕೆಲವು ಅರಸುಗಳೇ ಸ್ವಂತ ಕವಿಗಳಿದ್ದುದರಿಂದ ಜನಜೀವನದ ನಾಡಿಯನ್ನವರು ಕಂಡು ಹಿಡಿದುದಕ್ಕೊಂದು ಅಧಾರ. ಅನೇಕ ಕವಿಗಳನ್ನು ತಮ್ಮ ಆಶ್ರಯದಲ್ಲಿಟ್ಟುಕೊಂಡು ಪ್ರೋತ್ಸಾಹಿಸಿದ ಸಂಗತಿಯಿ೦ದ ಆಗಿನಿಂದಲೂ ನಾಡಿಗ ತನದ ಅರಿವು ಅವರಲ್ಲಿ ಅಷ್ಟಿಷ್ಟು ಇರುವದರ ಮುಂಬೆಳಕು. ಕದಂಬ ಹಾಗೂ ಗಂಗರ ಕಾಲಕ್ಕೆ ಜೈನಮತವು ಕನ್ನಡನಾಡಿನಲ್ಲಿ ಬೇರು ಬಿಟ್ಟುಕೊ೦ಡು ಕನ್ನಡವನ್ನೇ ತನ್ನ ತಾಯ್ನಾಡಾಗಿ ಮಾಡಿ, ಕನ್ನಡ ನಾಡಿನವರೊಡನೆ ಬೆರೆತು ಹೋಗಿದ್ದಿತು. ಒಂದು ಬಗೆಯಿಂದ ನೋಡಿದರೆ, ಕದಂಬ ಹಾಗೂ ಗಂಗರ ಕಾಲದಲ್ಲಿ ಕರ್ನಾಟಕವಿನ್ನೂ ಎಳಕಾಗಿದ್ದಿತು. ಚಾಲುಕ್ಯರು ಕರ್ನಾಟಕದೊಳಗೆ ಮೂಡಿ ಬೆಳಗುವ ಸಮ