ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೯೯
ಕನ್ನಡಿಗರ ಚೆನ್ನಗಾಲವು.

ದ೦ತೆ ಅದೇ ಖ೦ಗಿಟ್ಟುಕೊ೦ಡು ವಿಕ್ರಮಾದಿತ್ಯನು ಅದರಂತೆ ನಡೆದುಕೊಳ್ಳದೆ, ಕಾಂಚೀಪಟ್ಟಣವನ್ನು ಸೇರಿ, ಅಲ್ಲಿಯ ಪ್ರಜೆಗಳಿಗೆ ಎಳ್ಳಷ್ಟೂ ನೋಯಿಸದೆ, ಅವರಿಗೆ ಸುಖವಾಗಿ ಬಾಳಿಕೊ೦ಡಿರಲು ಅಭಿವಚನವನ್ನಿತ್ತು, ತಾನು ರಾಜಸಿ೦ಹೇಶ್ವರ ದೇವಾಲಯವನ್ನು ಹೊಕ್ಕು ದೇವದರ್ಶನ ಮಾಡಿಕೊ೦ಡು ದೇವಸ್ಥಾನಕ್ಕೆ ಹಣವನ್ನು ಸಲ್ಲಿಸಿ, ಅಲ್ಲಿನವರಿಂದ ಹೌದೆನಿಸಿಕೊಂಡನು. ಮರಳಿ ಬರುವಾಗ ದಾರಿಯಲ್ಲಿ ಗೆದ್ದವರ ಬಾಲ ಹಿಡಿಯುವ ಚೇರ ಚೋಳ ಪಾ೦ಡ್ಯ ಮೊದಲಾದ ಸಾಮ೦ತ ರಾಜರಿಗೂ ಚನ್ನಾಗಿಯೇ ಬುದ್ಧಿಗಲಿಸಿ, ರಾಜಧಾನಿಗೆ ಮರಳಿ ಬಂದ ಕೆಲದಿನಗಳಲ್ಲಿಯೇ ಮಡಿದನು. ಈತನ ಮಗ ವಿನಯಾದಿತ್ಯನಾದರೂ ಕಡಿಮೆ ಶೂರನಿಲ್ಲದ್ದರಿಂದ ಚಾಲುಕ್ಯರ ಕುಲಕ್ಕೆ ಭಂಗ ತರದಂತೆ ಕಾಯ್ದುಕೊಂಡು ಹೋದನು. ಈತನು ಅಷ್ಟೇ ಅಲ್ಲದೆ, ತ೦ದೆಗಿ೦ತ ಒಂದು ಕೈ ಮೇಲು. ಬಹು ದರ್ಪಿನವನಾದ ಈತನು ಸಿಂಹಲ ದೇಶದ ರಾಜನನ್ನು ಮೆಲ್ಲಗೆ ತನ್ನ ಬಲ್ಲಾಳ್ತನದಿಂದ ಮೆಟ್ಟಿ ಹಾಕಿ ಉತ್ತರಕ್ಕೆ ಸಾಗಿ ಹೋಗಿ ಅಲ್ಲಿಯೂ ಜಯಪತಾಕೆಯನ್ನು ಹಾರಾಡಿಸಿದನು. ಇವನ ತರುವಾಯ ಚಾಲುಕ್ಯರಲ್ಲಾವ ಪವಾಡಪುರುಷರು ತಲೆದೋರದ್ದರಿಂದ ಇವರ ರಾಜ್ಯವು ರಾಷ್ಟ್ರಕೂಟರ ಕೈಸೇರಿತು. ತಾರಕಾಪುಂಜದಂತೆ ಒಬ್ಬರಹಿ೦ದೊಬ್ಬರು ವೀರಮಣಿಗಳು ಚಾಲುಕ್ಯ ವ೦ಶದೊಳಗೆ ಹುಟ್ಟಿ ಎರಡು ಶತಮಾನಗಳ ವರೆಗೆ ಅಖಂಡವಾಗಿ ಚಾಲುಕ್ಯವಂಶ ದೀಪವನ್ನು ಉರಿಯುತ್ತ ಇಟ್ಟಿರುವ೦ಥ ಸ೦ಗತಿಯು ಇತಿಹಾಸದೊಳಗೆ ಬಹುಕಡಿಮೆ. ಚಾಲುಕ್ಯರ ಆಳಿಕೆಯೆ೦ದರೆ ಕನ್ನಡ ನಾಡಿನ ಐಸಿರಿಗಾಲವು. ನಾಡಿಗರ ಬುದ್ಧಿ, ಮನಸ್ಸುಗಳು ವೈದಿಕ ಧರ್ಮಾಭಿಮಾನದ ನವಚೈತನ್ಯದಿಂದ ತೇಜಓಜವೆತ್ತು ಮೈಮೆಯಿ೦ದ ಮೆರೆಯುವ ಮೈಸಿರಿಗಾಲವು.

ಕನ್ನಡಿಗರ ಚೆನ್ನಗಾಲವು:- ಹಿಂದೂದೇಶದ ಚರಿತ್ರೆಯಲ್ಲಿ ಜನಾ೦ಗ ಜೀವನದ ಹೆಗ್ಗುರುತುಗಳು ಬಹು ಅಸ್ಪಷ್ಟವಾಗಿ ಕಾಣಿಸುತ್ತಿದ್ದುದರಿಂದ ನಮಗೀಗ ಆಯಾಕಾಲದ ರಾಜವಂಶದವರ ಕ್ರಿಯಾಕಲಾಪಗಳನ್ನಳೆದು ತಿಳಿದು ನಮ್ಮ ಚರಿತ್ರೆಯನ್ನು ಹೊಂದಿಸಿಕೊಳ್ಳುವ