ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೮

ಭಾರತೀಯರ ಇತಿಹಾಸವು.

ತಮ್ಮ ನೋಡಿಕೊಳ್ಳುವುದಾಗಿಮುಯ್ಯ ತೀರಿಸಿಕೊಂಡರು. ಈ ಸ೦ಗತಿಯು ಕ್ರಿ. ಶ. ೬೪೨ ರಲ್ಲಿ ನಡೆಯಿತು. ಈ ಕಾಳಗದೊಳಗೇ ಪುಲಿಕೇಶಿಯು ದೇಹವನ್ನೊಡ್ಡಿ ವೀರಮರಣಕ್ಕೀಡಾದನು. ನರಸಿಂಹವರ್ಮನು ಹಿಂದಿನ ಸೇಡು ತೀರಿಸಿಕೊಳ್ಳುವ ಕಿಚ್ಚಿನಿಂದ ಬದಾಮಿಯನ್ನು ಸುಟ್ಟು ಸೂರೆ ಮಾಡಿದನು. ಈ ರೀತಿಯಾಗಿ, ಸತ್ಯಾಶ್ರಯ ಪುಲಿಕೇಶಿಯ ಕೊನೆಗಾಲವು ಒಂದು ಬಗೆಯಿ೦ದ ದುಃಖಪರ್ಯವಸಾಯಿಯಾತು. ಆತನು ಜೀವಂತವಿದ್ದರೆ ಬಹು ಅಸಹ್ಯವಾಗಬಹುದಾಗಿತ್ತು; ಆದರೆ ಕಾಲಕ್ಕೂ ಕರ್ಮಕ್ಕೂ ಗಂಟು ಬಿದ್ದು ಅವೆರಡೂ ತಮ್ಮ ತಮ್ಮ ಕಾರ್ಯಗಳನ್ನು ಜರಗಿಸುವಾಗಲೂ, ಪುಲಿಕೇಶಿಮಹಾರಾಯನು ಕಾಲಕರ್ಮಗಳಿಗೆ ಭಾರವಾಗದೆ, ಅಥವಾ ಅವುಗಳನ್ನು ಹೊಗಳದೆ ಹಳಿಯದೆ ತನ್ನಷ್ಟಕ್ಕೆ ತಾನು ರಣರಂಗದೊಳಗೆ ಧುಮುಕಿ ತನ್ನ ಕರ್ತವ್ಯವನ್ನು ಮಾಡಿಯೇ ಬಿಟ್ಟನು. ವೀರರಿಗೆ ನಾವೆಂದರೆ ಅದೊಂದು ಸೋಗಿನ ಬದಲಾವಣೆ ! ಸತ್ಯಾಶ್ರಯ ಶ್ರೀಪುಲಿಕೇಶಿವಲ್ಲಭ ಮಹಾರಾಯನ ಆಳ್ವಿಕೆಯಲ್ಲಿ ತಾಯ ತೊಡೆಯ ಮೇಲೆ ಮಕ್ಕಳು ಲೋಲ್ಯಾಡುವಂತೆ ಪ್ರಜೆಗಳು ಯಾವುದೊ೦ದು ಚಿ೦ತೆಯಿಲ್ಲದೆ ಇರುತ್ತಿರಲು ಒಮ್ಮಿಂದೊಮ್ಮೆ ಎಲ್ಲಿಂದಲೋ ಬಂದು ಹದ್ದು ಹೊಡೆದ೦ತೆ, ರಾಜ್ಯದವಸ್ಥೆಯು ಕೆಟ್ಟು ಮಡಿಕೆ ತಪ್ಪಿಸಡಿಲಿ ಹೋದುದು ನಾಜವು, ಮು೦ದೆ ಪುಲಿಕೇಶಿಯ ವೀರಪುತ್ರನಾದ ೧ ನೇ ವಿಕ್ರಮಾದಿತ್ಯನು ತನ್ನ ತಂದೆಗಾದ ಅವಮಾನದ ಪರಿಮಾರ್ಜನ ಗೈಯದೆ ಸುಮ್ಮನಿರುವದು ತನ್ನ ಗಂಡಸುತನಕ್ಕೂ ತಮ್ಮ ವೀರ ಕುಲಕ್ಕೂ ತಕ್ಕುದಲ್ಲವೆಂದು ಭಾವಿಸಿಕೊಂಡು ಸೈನ್ಯವನ್ನಳವಡಿಸಿ ಸ೦ಧಿ ಸಾಧಿಸಿ, ತಾನು ಸ್ವತಃ ಚಿತ್ರಕ೦ರವೆಂಬ ತನ್ನ ಅಕ್ಕರತೆಯ ಕುದುರೆಯನ್ನೇರಿ ತ೦ದೆಯ ಹಗೆಗಳಾದ ಪಲ್ಲವರ ಮೇಲೇರಿ ಹೋದನು. ಈ ವೀರನಿಗೆ ತ೦ದೆಯ ಸಾವಿಗಿ೦ತ ತಮ್ಮ ಸೋಲು ಶೂಲಪ್ರಾಯವಾಗಿ ಎದೆಯಲ್ಲಿ ಚುಚ್ಚಕವಾಗಿತ್ತು. ಅದೇ ಚುಚ್ಚಕವನ್ನೇ ಪಲ್ಲವರಿಗೆ ತಿರಿಗೊಪ್ಪಿಸಿ ತ೦ದೆಯ ಕಾಲಕ್ಕೆ ಕೊ೦ಕಾದ ತಮ್ಮ ಕುಲಾಭಿಮಾನವನ್ನು ತನ್ನ ಶೌರ್ಯದಿಂದ ಬೆಲೆಗೊಂಡನು; ಪಲ್ಲವರ ಬಿಂಕದ ಸೊಲ್ಲಡಗಿತು. ನರಸಿಂಹವರ್ಮನು ಹಿಂದಕ್ಕೆ ಬಾದಾಮಿಯನ್ನು ಸುಲಿ