ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩- ೬

ಭಾರತೀಯರ ಇತಿಹಾಸವು.

ಕೊ೦ಡು ಊರೊಳಗಿನ ಸಂಪತ್ತಿಯನ್ನೆಲ್ಲ ಸುಲಿದು ತಮ್ಮ ಜನರೊಳಗೆ ಹಂಚಿ ಮಿಕ್ಕುದನ್ನು ತನ್ನ ಧರ್ಮಾಜ್ಞೆಯಂತೆ ಖಲೀಫರ ಕಡೆಗೆ ಕಳಿಸಿದನು. ಈ ಮೇರೆಗೆ ಮಹಮ್ಮದೀಯರ ಕ್ರೂರವಾದ ದಾಳಿಗೆ ದೇವಲ ಪಟ್ಟಣವು ಮೊದಲನೇ ತುತ್ತಾಯಿತು. ಈ ದಾಳಿಯಲ್ಲಿ ಅರಬರು ಅನೇಕರನ್ನು ಬಲುಮೆಯಿಂದ ಮುಸಲ್ಮಾನರನ್ನಾಗಿ ಮಾಡಿದರು.

ಮೊದಲನೇ ಜೋಹರವು:- ಅರಬರು ತಮಗೆ ದೊರೆತ ವಿಜಯದಿ೦ದ ಮದೋನ್ಮತ್ತರಾಗಿ ಸಿ೦ಧಪ್ರಾಂತದೊಳಗಿನ ಒಂದರಹಿಂದೊಂದು ಊರುಗಳನ್ನು ಗೆಲ್ಲುತ್ತ ಬಂದರು; ಸಿಂಧುನದಿಯನ್ನು ಇಳಿದ ನ೦ತರ ಬ್ರಾಮ್ಹಣಾಬಾದದ ಹತ್ತರ ದಾಹರನಿಗೂ ಕಾಸಿಮನಿಗೂ ಯುದ್ಧ ಪ್ರಸಂಗ ಒದಗಿತು. ಕ್ಷತ್ರಿಯರ ಬಿರುದಿನ೦ತೆ ವೈರಿಗಳನ್ನು ಗೆಲಿಯುವೆನು ಅಧವಾ ವೀರಸ್ವರ್ಗ ಪಡೆಯುವೆನೆಂಬ ಭೀಷ್ಮಪ್ರತಿಜ್ಞೆಯಿಂದಲೇ ಮನಸು ದೃಢ ಮಾಡಿಕೊ೦ಡು ದಾಹರನು ಯುದ್ಧಕ್ಕೆ ಸಿದ್ದನಾದನು. ಈ ಸ೦ಗ್ರಾಮದೊಳಗೆ ದಾಹರನು ಕಡೆಗೆ ೨೧ ಸಾವಿರ ಕಾಲಾಳು,೧೦೦ ಆನೆಬಲ, ೫ ಸಾವಿರ ಕುದುರೆ ರಾಹುತರಿದ್ದು , ಸ್ವತಃ ದಾಹರನು ಮದವೇರಿದ ಆನೆಯನ್ನೇರಿ, ಕೈಯಲ್ಲಿ ಭಾರವಾದ ಧನುಪ್ಯವನ್ನು ಹಿಡಿದುಕೊ೦ಡು ಸಜ್ಜಾಗಿದ್ದನು. ಈತನು ರಣದೊಳಗೆ ಬಹು ಚಾತುರ್ಯದಿಂದ ಶರಸಂಧಾನ ನಡಿಸುವದಲ್ಲದೆ ನಡುನಡುವೆ ಭಾರತೀಯರ ವಿಶೇಷಾಸ್ತ್ರವಾದ ಚಕ್ರವನ್ನು ಬಿಡುತ್ತಿದ್ದನು. ಈ ಅಸ್ತ್ರವು ಅರಬರಿಗೆ ಅರಿಯದ್ದು. ಇದರಿ೦ದ ಇ೦ಥವನ ಮೇಲೆ ಗುರಿಯಿಟ್ಟರೆ ಸಾಕು. ಅದು ಅವನ ರುಂಡವನ್ನು ಕತ್ತರಿಸದೆ ಬಿಡುತ್ತಿರಲಿಲ್ಲ. ಈ ತೆರನಾಗಿ ಬಹು ಕೈಮೆಯಿಂದ ದಾಹರನು ಮು೦ಜಾವಿನಿಂದ ಸಂಜೆಯ ವರೆಗೆ ಎಡೆಬಿಡದೆ ಯುದ್ಧ ನಡಿಸಿದನು; ಆದರೆ ಇಷ್ಟರಲ್ಲಿ ದಾಹರನ ಕಾಲವು ಒದಗಿ ಬ೦ದಿತು. ಅರಬರ ಬೆ೦ಕಿಯ ಬಾಣವೊಂದು ದಾಹರನು ಹತ್ತಿರುವ ಆನೆಗೆ ಬಂದು ತಾಗಲು, ಆನೆಯು ಗಾಬುಗೊ೦ಡು ಓಡಿ ನೆರೆಯಲ್ಲಿರುವ ದೊಂದು ಕೆರೆಯಲ್ಲಿ ಹೋಗಿ ಬಿದ್ದಿತು; ದಾಹರನ ಮೇಲೆ ಬ೦ದ ಸಂಕಟವನ್ನು ಸಾಧಿಸಿ ಅರಬರು ಅವನ ಮೇಲೆ ನಾಗಿ ಹೋಗಿ ಅಸಹಾಯಕನಾದ ಅವನನ್ನು ಕೊಂದು ಬಿಟ್ಟರು. ಇತ್ತ ದಾಹರನ ಕೊಲೆ