ಪುಟ:ಭಾರತ ದರ್ಶನ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ಭಾರತ ದರ್ಶನ

ದವು, ವ್ಯತ್ಯಾಸವಾಗುವುದಿಲ್ಲ ; ಆದರೆ ಕರ್ತವ್ಯ ಮತ್ತು ಉತ್ತರವಾದಿತ್ವದ ಎರಕವಾದ ಧರ್ಮವು ಮಾತ್ರ ಕಾಲಸ್ಥಿತಿಗನುಗುಣವಾಗಿ ವ್ಯತ್ಯಾಸ ಹೊಂದುತ್ತದೆ. ಇಲ್ಲಿ ಮತ್ತು ಇತರ ಕಡೆಗಳಲ್ಲಿ ಅಹಿಂಸೆಗೆ ಕೊಟ್ಟಿರುವ ಮಹತ್ವವು ಆಶ್ಚರ್ಯವನ್ನುಂಟುಮಾಡುತ್ತದೆ ; ಏಕೆಂದರೆ ಈ ಅಹಿಂಸೆಗೂ ಧರ್ಮ ಸ್ಥಾಪನೆಗಾಗಿ ಮಾಡುವ ಯುದ್ದ ಕ್ಕೂ ವಿರೋಧ ಬಂದಂತೆ ಕಾಣುವುದಿಲ್ಲ. ಈ ಮಹಾಕಾವ್ಯವೆಲ್ಲ ಒಂದು ಮಹಾಯುದ್ಧದ ವರ್ಣನೆ. ಪ್ರಾಯಶಃ ಹಿಂಸಾಕೃತ್ಯದಿಂದ ಪ್ರತ್ಯಕ್ಷ ದೂರನಾಗಿರುವ ಬದಲು ಯುದ್ಧವೇ ಅನಿವಾರವೆಂದಾಗ ಹಿಂಸಾಮನೋವೃತ್ತಿ, ಕ್ರೋಧ ಮತ್ತು ವೈರತ್ವವಿಲ್ಲದೆ ಸದುದ್ದೇಶ ಆತ್ಮನಿಗ್ರಹ ಮತ್ತು ಸಂಯಮಗಳಿಂದ ಮಾಡಿದ ಯುದ್ದವೂ ಅಹಿಂಸಾ ಯುದ್ದವೆಂದು ಭಾವಿಸಿರಬೇಕು.

ಮಹಾಭಾರತವು ಯಾರಿಗೆ ಯಾವ ರತ್ನ ವನ್ನು ಬೇಕಾದರೂ ದೊರಕಿಸುವಂಥ ರತ್ನಾ ಕರ. ಅದರಲ್ಲಿ ಜೀವನ ವೈವಿಧ್ಯ ಸಮೃದ್ಧಿ, ಉತ್ಸುಕತೆ ಸಂಪೂರ್ಣ ಇವೆ, ಸಂನ್ಯಾಸ ಮತ್ತು ಜೀವನ ನಿರಸನ ವನ್ನು ಬೋಧಿಸಿದ ಇನ್ನೊಂದು ಭಾರತೀಯ ಭಾವನೆಗೂ ಇದಕ್ಕೂ ಅಜಗಜಾಂತರ. ಇದರಲ್ಲಿ ನೀತಿ ಮತ್ತು ಧರ್ಮ ಬೇಕಾದಷ್ಟಿದ್ದರೂ ಇದು ಒಂದು ನೀತಿಧರ್ಮಗ್ರಂಥವಲ್ಲ. ಮಹಾಭಾರತದ ಸಾರ ವನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ “ನಿನಗೆ ಅಹಿತವಾದುದನ್ನು ಇತರರಿಗೆ ಎಂದೂ ಮಾಡ ಬೇಡ” ಎಂದು. ಸಾಮಾಜಿಕ ಸೌಖ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದು ಒಂದು ವೈಶಿಷ್ಟ, ಸಾಮಾನ್ಯ ವಾಗಿ ಭಾರತೀಯರು ಸಾಮಾಜಿಕ ಹಿತಕ್ಕಿಂತ ವೈಯಕ್ತಿಕ ಪರಿಪೂರ್ಣತೆಗೆ ಮಹತ್ವ ಕೊಡುತ್ತಾರೆ ಎಂಬ ಆರೋಪಣೆ ಇದೆ. “ಯಾವುದು ಸಾರ್ವತ್ರಿಕ ಸೌಖ್ಯಕ್ಕೆ ಸಹಕಾರಿಯಲ್ಲಿ, ಯಾವುದನ್ನು ಮಾಡಲು ನೀನು ನಾಚಿಕೆ ಪಡುತ್ತೀಯೋ ಅದನ್ನು ಮಾಡಬೇಡ” ಎಂದು ಮಹಾಭಾರತವು ಸಾರುತ್ತದೆ.

ಮತ್ತು "ಸತ್ಯ, ಆತ್ಮಸಂಯಮ, ಸಂನ್ಯಾಸ, ಔದಾರ್ಯ, ಅಹಿಂಸೆ, ಅಚಲವಾದ ಸದ್ಗುಣ ಇವೇ ಶ್ರೇಯಸ್ಸಿನದಾರಿ. ಜಾತಿ ಅಥವ ವಂಶವಲ್ಲ.” ಅಮೃತತ್ವ ಮತ್ತು ಜೀವನಕ್ಕಿಂತ ಸದ್ಗುಣ ಶ್ರೇಷ್ಠವಾದುದು,” “ತ್ಯಾಗವಿಲ್ಲದೆ ನಿಜವಾದ ಸುಖವು ಸಾಧ್ಯವಿಲ್ಲ.” ಎಂದು ಹೇಳುತ್ತದೆ. ಹಣದಾಸೆಗೆ ಸಿಲುಕಿರುವವನನ್ನು “ ರೇಷ್ಮೆ ಹುಳುವಿನ ಸಾವು ಅದರ ಐಶ್ವರದಿಂದಲೇ ” ಎಂದು ಹಾಸ್ಯ ಮಾಡಿದೆ. ಕೊನೆಯದಾಗಿ “ ಅತೃಪ್ತಿಯೇ ಪ್ರಗತಿಯ ಉತ್ತೇಜಕ ” ಎಂದು ಹೇಳುವುದನ್ನು ನೋಡಿದರೆ ಅದರ ಜೀವನವು ಎಷ್ಟು ಸತ್ವಪೂರಿತವೂ ಮತ್ತು ಪ್ರಗತಿ ಪರವೂ ಇತ್ತೆಂಬುದು ಭಾಸವಾಗುತ್ತದೆ.

ಮಹಾಭಾರತದಲ್ಲಿ ವೇದಕಾಲದ ಅನೇಕ ದೈವತ್ವ ವಾದವಿದೆ, ಉಪನಿಷತ್ಕಾಲದ ಏಕತ್ವವಾದವೂ ಇದೆ, ಅವರ ದೃಷ್ಟಿ ಯು ರಚನಾತ್ಮಕವಿದೆ ; ಸ್ವಲ್ಪ ಹೆಚ್ಚು ಕಡಮೆ ವಿಚಾರಪೂರ್ಣವಿದೆ ; ಮತ್ತು ಪ್ರತ್ಯೇಕ ಭಾವನೆಯು ಬಹುಮಟ್ಟಿಗೆ ಕಡಿಮೆ ಇದೆ. ವರ್ಣಧರ್ಮದ ಕಟ್ಟು ನಿಟ್ಟು ಹೆಚ್ಚಿಲ್ಲ. ಒಂದು ವಿಧವಾದ ಆತ್ಮನಂಬಿಕೆ ಇತ್ತು. ಆದರೆ ಪರದಾಳಿಯಿಂದ ಪುರಾತನ ವ್ಯೂಹದ ಭದ್ರತೆ ಶಿಥಿಲವಾದಾಗ ಆ ಆತ್ಮನಂಬಿಕೆ ಕಡಮೆಯಾಯಿತು. ಆ೦ತರಿಕ ಐಕ್ಯತೆ ಮತ್ತು ಶಕ್ತಿಯನ್ನು ವೃದ್ಧಿಗೊಳಿಸಲು ಹೆಚ್ಚಿನ ಸಮತಾಭಾವದ ಆವಶ್ಯಕತೆ ಉದ್ಭವಿಸಿತು. ಹೊಸ ನಿಷೇಧಗಳು ರಚಿತವಾದವು, ಆಚರಣೆ ಯಲ್ಲಿ ಗೋಮಾಂಸ ಭಕ್ಷಣೆಯು ಮೊದಲು ಸಂಪೂರ್ಣ ನಿಷಿದ್ಧವಾಯಿತು. ಮಹಾಭಾರತದಲ್ಲಿ ಅತಿಥಿಸತ್ಕಾರದಲ್ಲಿ ಅತಿಥಿಗಳಿಗೆ ಗೋಮಾಂಸ ಮತ್ತು ಎತ್ತಿನ ಮಾಂಸವನ್ನು ಉಪಯೋಗಿಸಿದ ವರ್ಣನೆ ಇದೆ..

೧೪. ಭಗವದ್ಗೀತೆ

ಭಗವದ್ಗೀತೆ ಮಹಾಭಾರತದ ಒಂದು ಭಾಗ, ಆ ತುಹಾ ನಾಟಕದಲ್ಲಿ ಒಂದು ದೃಶ್ಯ. ಆದರೆ ತನ್ನದೇ ಒಂದು ವೈಶಿಷ್ಟದಿಂದ ಸ್ವಸಂಪೂರ್ಣವಿದೆ. ಏಳುನೂರು ಶ್ಲೋಕಗಳ ಒಂದು ಸಣ್ಣ ಕಾವ್ಯವಿಲಿಯಮ್ ಫಾನ್ ಹಂಬೋಲ್ಟ್ ಹೇಳಿರುವಂತೆ “ ಈ ಬಗೆಯ ಅತಿಸುಂದರ ದಾರ್ಶನಿಕ ಕಾವ್ಯ ಪ್ರಪಂಚದ ಇನ್ನಾವ ಭಾಷೆಯಲ್ಲೂ ಇಲ್ಲ.” ಬುದ್ಧನಿಗಿಂತ ಮುಂಚೆ ರಚಿಸಿ ಬರೆದು ಇದ್ದರೂ ಅದರ