ಪುಟ:ಭಾರತ ದರ್ಶನ.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೯೩
ಭಾರತ ಸಂಶೋಧನೆ

ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಭಾರತದ ಎಲ್ಲ ಕಡೆಗಳಲ್ಲಿ ದೊರೆತಿರುವ ಬ್ರಾಡ್ಮಿ ಲಿಪಿಯೇ ದೇವನಾಗರಿ ಮತ್ತು ಇತರ ಲಿಪಿಗಳಿಗೆ ಮೂಲ. ಅಶೋಕನ ಕೆಲವು ಶಾಸನಗಳು ಬ್ರಾಹ್ಮಲಿಪಿಯಲ್ಲಿವೆ. ವಾಯವ್ಯ ಪ್ರಾಂತ್ಯದ ಕೆಲವು ಶಾಸನಗಳು 'ಖರೋಷ್ಟಿ' ಭಾಷೆಯಲ್ಲಿವೆ.

ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿಯೇ ಪಾಣಿನಿಯು ಸಂಸ್ಕೃತ ಭಾಷೆಯ ವ್ಯಾಕರಣವನ್ನು ಬರೆದನು, ಅದೊಂದು ಮಹಾಗ್ರಂಥ, ಪೂರ್ವದಲ್ಲಿದ್ದ ವ್ಯಾಕರಣಗಳ ವಿಷಯ ಪ್ರಸ್ತಾಪಿಸಿದ್ದಾನೆ. ಅಷ್ಟರಲ್ಲಿ ಸಂಸ್ಕ ತ ನಾನಾ ರೂಪದಲ್ಲಿ ಬೆಳೆದು, ವಿಪುಲ ಸಾಹಿತ್ಯವನ್ನು ಪಡೆದಿತ್ತು. ಪಾಣಿನಿಯ ಗ್ರಂಥ ಕೇವಲ ವ್ಯಾಕರಣ ಮಾತ್ರವಲ್ಲ. ಲೆನಿನ್‌ಗ್ರಾಡ್ನ ಸೋವಿಯಟ್ ಪ್ರೊಫೆಸರ್ ಆದ ಷೆರ್ ಬಾಟ್ ಯು ಅದನ್ನು “ಮಾನವಮನೋಸಾಹಸದ ಒಂದು ಅತ್ಯುತ್ತಮ ಕೃತಿ” ಎಂದಿದ್ದಾನೆ. ಈಚೆಗೆ ಅನೇಕ ವ್ಯಾಕರಣಗಳು ಹುಟ್ಟಿದ್ದರೂ ಸಂಸ್ಕೃತ ವ್ಯಾಕರಣಕ್ಕೆ ಪಾಣಿನಿಯ ಗ್ರಂಥವೇ ಈಗಲೂ ಅಧಿಕೃತ ಗ್ರಂಥ. ಪಾಣಿನಿಯ ವ್ಯಾಕರಣದಲ್ಲಿ ಗ್ರೀಕ್ ಲಿಪಿಯ ಉಲ್ಲೇಖವಿದೆ. ಇದರಿಂದ ಅಲೆಕ್ಸಾಂಡರನು ಪೂರ್ವದೇಶಗಳಿಗೆ ದಂಡಯಾತ್ರೆ ಬರುವ ಮುಂಚೆಯೇ ಭಾರತಕ್ಕೂ ಗ್ರೀಕರಿಗೂ ಏನೋ ಸಂಬಂಧವಿತ್ತೆಂಬುದು ಸ್ಪಷ್ಟವಾಗುತ್ತದೆ.

ಖಗೋಳ ಶಾಸ್ತ್ರದ ಅಧ್ಯಯನ ವಿಶೇಷವಾಗಿ ನಡೆಯುತ್ತಿತ್ತು; ಅನೇಕವೇಳೆ ಅದು ಜ್ಯೋತಿಷ್ಯಕ್ಕೆ ತಿರುಗುತ್ತಿತ್ತು. ವೈದ್ಯಗ್ರಂಥಗಳು ಅನೇಕವಿದ್ದುವು; ಆಸ್ಪತ್ರೆಗಳೂ ಇದ್ದುವು. ಭಾರತೀಯ ವೈದ್ಯ ಶಾಸ್ತ್ರಕ್ಕೆ ಮೂಲ ಪುರುಷನು ಧನ್ವಂತರಿ ಎಂದು ಐತಿಹ್ಯವಿದೆ. ಬಹು ಪ್ರಸಿದ್ದವಿರುವ ವೈದ್ಯ ಗ್ರಂಥಗಳೆಲ್ಲ ಕ್ರಿಸ್ತಾಬ್ದಿಯ ಆರಂಭಕಾಲದವುಗಳು- ಚರಕನ ವೈದ್ಯಗ್ರಂಥ ಸುಶೃತನ ಶಸ್ತ್ರ ಚಿಕಿತ್ಸಾಗ್ರಂಥ. ಚರಕನು ವಾಯವ್ಯದಲ್ಲಿ ರಾಜಧಾನಿಯನ್ನು ಮಾಡಿಕೊಂಡು ಆಳುತ್ತಿದ್ದ ಕಾನಿಷ್ಕನ ಆಸ್ಥಾನದಲ್ಲಿ ರಾಜವೈದ್ಯನಾಗಿ ಇದ್ದನಂತೆ. ಈ ಗ್ರಂಥಗಳಲ್ಲಿ ಅನೇಕ ರೋಗಗಳ ಹೆಸರುಗಳಿವೆ. ಅವುಗಳ ನಿದಾನ ಮತ್ತು ಚಿಕಿತ್ಸಾ ಮಾರ್ಗಗಳನ್ನು ತಿಳಿಸುತ್ತವೆ. ಶಸ್ತ್ರಚಿಕಿತ್ಸೆ, ಪ್ರಸೂತಿಕಾ ಚಿಕಿತ್ಸೆ, ಸ್ನಾನ, ಪಾನೀಯ, ದೇಹನೈರ್ಮಲ್ಯ, ಶಿಶುಪೋಷಣೆ ಮತ್ತು ವೈದ್ಯವಿದ್ಯೆ ಎಲ್ಲವನ್ನೂ ತಿಳಿಸುತ್ತವೆ. ಪ್ರಾಯೋಗಿಕ ಪದ್ಧತಿ ಇದೆ. ಶಸ್ತ್ರಚಿಕಿತ್ಸಾ ಶಿಕ್ಷಣವು ಮೃತ ಶರೀರಗಳ ವಿಶೇಷಣದ ಮೂಲಕ ನಡೆಯುತ್ತಿತ್ತು. ಸುಶೃತ ಅನೇಕ ಶಸ್ತ್ರಾಸ್ತ್ರಗಳನ್ನು ಹೇಳಿದ್ದಾನೆ. ಶಸ್ತ್ರಚಿಕಿತ್ಸೆಯಲ್ಲಿ ಅಂಗಾಂಗಗಳ ವಿಚ್ಛೇದನ, ಕರು ಳಿನ ಶಸ್ತ್ರಚಿಕಿತ್ಸೆ, ಹೊಟ್ಟೆಯನ್ನು ಕೊಯ್ದು ಹೆರಿಗೆಮಾಡಿಸುವುದು, ಕಣ್ಣು ಪರೆತೆಗೆಯುವುದು ಮುಂತಾದ ಶಸ್ತ್ರ ಚಿಕಿತ್ಸೆಗಳನ್ನು ತಿಳಿಸಲಾಗಿದೆ. ಗಾಯಗಳಿಗೆ ಹೊಗೆಹಾಕಿ ಕ್ರಿಮಿದೋಷರಹಿತವಾಗಿ ಇಡುತ್ತಿದ್ದರು. ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಪಶುವೈದ್ಯಶಾಲೆಗಳೂ ಇದ್ದವು. ಇವು ಪ್ರಾಯಶಃ ಜೈನ ಮತ್ತು ಬೌದ್ಧ ಮತಗಳ ಅಹಿಂಸಾ ತತ್ವದ ಪ್ರಭಾವದಿಂದ ಆಗಿದ್ದರೂ ಇರಬಹುದು.

ಗಣಿತ ಶಾಸ್ತ್ರದಲ್ಲಿ ಪ್ರಾಚೀನ ಭಾರತೀಯರು ಚರಿತ್ರಾರ್ಹವಾದ ಸಂಶೋಧನೆಗಳನ್ನು ನಡೆಸಿದರು. ಮುಖ್ಯವಾಗಿ 'ಶೂನ್ಯ' ಸಂಕೇತ, ದಶಮಾಂಶದ ಉಪಯೋಗ, 'ಋಣ' ಸಂಕೇತದ ಉಪಯೋಗ, ತಿಳಿಯದ ಮೊತ್ತವನ್ನು ತಿಳಿಸಲು ವರ್ಣಮಾಲೆಯ ಅಕ್ಷರಗಳನ್ನು ಬೀಜಗಣಿತದಲ್ಲಿ ಉಪಯೋಗಿಸುವುದು-ಅವರಿಗೆ ತಿಳಿದಿತ್ತು. ಈ ಸಂಶೋಧನೆಗಳಿಗೂ ಅವುಗಳ ವಾಸ್ತವಿಕ ಉಪಯೋಗಕ್ಕೂ ಬಹಳ ಅಂತರವಿರುತ್ತಿದ್ದುದರಿಂದ ಈ ಸಂಶೋಧನಗಳ ಕಾಲನಿರ್ಣಯವು ಬಹಳ ಕಷ್ಟ. ಆದರೆ, ಗಣಿತ, ಬೀಜಗಣಿತ, ರೇಖಾಗಣಿತಗಳ ಆರಂಭದಶೆಯು ಅತಿ ಪ್ರಾಚೀನ ಎಂಬುದು ಮಾತ್ರ ಸ್ಪಷ್ಟವಿದೆ. 'ದಶಮ'ವು ಋಗ್ವೇದ ಕಾಲದಲ್ಲಿ ಸಹ ಗಣಿಕೆಯ ಆಧಾರವಾಗಿತ್ತು. ಅತ್ಯುನ್ನತ ಸಂಖ್ಯೆಗಳಿಗೆ ಅನೇಕ ಹೆಸರುಗಳನ್ನು ಕಂಡು ಹಿಡಿದಿದ್ದರು. ಪ್ರಾಚೀನ ಭಾರತೀಯರ ಕಾಲ ಮತ್ತು ಸಂಖ್ಯಾಭಾವನೆ ಅತ್ಯದ್ಭುತವಾದುದು. ಸಾವಿರ ಅಥವ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಗಳಿಗೆ ಗ್ರೀಕರು, ರೋಮನರು, ಪಾರಸಿಕರು, ಅರಬ್ಬರಿಗೆ ಯಾವ ಹೆಸರುಗಳೂ ಗೊತ್ತಿರಲಿಲ್ಲ. ಭಾರತದಲ್ಲಿ ನಿರ್ದಿಷ್ಟವಾದ ೧೮ ಹೆಸರುಗಳಿದ್ದವು-೧೦೧೮ ರ ವರಗೆ ಅಥವ ಇನ್ನೂ ಹೆಚ್ಚಾಗಿ. ಬುದ್ಧನ ವಿದ್ಯಾರ್ಥಿದೆಸೆಯಲ್ಲಿ ಆತನು ೧೦೫೦ ರ ವರಗಿನ ಸಂಖ್ಯೆಗಳ ಹೆಸರುಗಳನ್ನು ಹೇಳುತ್ತಿದ್ದನಂತೆ.