ಇತರ ದೇಶಗಳ ಮಧ್ಯೆ ವ್ಯಾಪಾರವೂ ಅಭಿವೃದ್ಧಿ ಹೊಂದಿರಬೇಕು. ಮಧ್ಯ ಏಷ್ಯದ ಸಿ೦ಕಿಯಾಂಗ್ ಪ್ರಾಂತ್ಯದ ಖೊಟಾನಿನಲ್ಲಿ ಭಾರತೀಯರ ಒಂದು ವಲಸೆಬೀಡು ಇತ್ತಂತೆ. ಭಾರತದ ವಿಶ್ವವಿದ್ಯಾನಿಲಯಗಳು, ಅದರಲ್ಲೂ ಮುಖ್ಯವಾಗಿ ತಕ್ಷಶಿಲೆಗೆ ಪರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು.
ಅಶೋಕ ಒಬ್ಬ ಮಹಾ ನಿರ್ಮಾಣ ಕರ್ತೃ. ಆತನು ಕೆಲವು ಮಹಾ ಮಂದಿರಗಳನ್ನು ಕಟ್ಟಲು ಸಹಾಯ ಮಾಡಲು ಪರದೇಶದ ಕುಶಲಕರ್ಮಿಗಳನ್ನು ನೇಮಿಸಿದ್ದನಂತೆ. ಸ್ತೂಪಗಳು ಪರ್ಸಿಪೊಲಿಸ್ನು ಹೋಲುವುದರಿಂದ ಈ ರೀತಿ ಹೇಳಬಹುದು. ಆದರೆ ಈ ಪ್ರಾಚೀನ ಶಿಲ್ಪ ಕಲೆಯಲ್ಲಿ ಮತ್ತು ಇತರ ಪಳೆಯುಳಿಕೆಗಳಲ್ಲಿ ಕಾಣುವ ಕಲೆಯಲ್ಲಿ ಭಾರತೀಯ ಕಲೆಯ ಸಂಪ್ರದಾಯ ವೈಶಿಷ್ಟವನ್ನು ಕಾಣಬಹುದು.
ಸುಮಾರು ಮೂವತ್ತು ವರ್ಷಗಳ ಹಿಂದೆ ಪ್ರಾಕ್ತನ ವಿಮರ್ಶನ ವಿಚಕ್ಷಣರು ಪಾಟಲಿಪುತ್ರದಲ್ಲಿ ಅಶೋಕನ ಅರಮನೆಯಲ್ಲಿನ ಅನೇಕ ಕಂಭಗಳ ಸಭಾಂಗಣವನ್ನು ಅಗೆದು ತೆಗೆದರು. ಇ೦ಡಿಯ ಸರ್ಕಾರದ ಪ್ರಾಕ್ತನ ವಿಮರ್ಶನ ಶಾಲೆಯ ಮುಖ್ಯ ಅಧಿಕಾರಿಗಳಾದ ಡಾಕ್ಟರ್ ಸ್ಪೂನರ್ “ಇಲ್ಲಿನ ಕ೦ಬಗಳು ಇಷ್ಟು ಒಳ್ಳೆ ಸ್ಥಿತಿಯಲ್ಲಿವೆ ಎಂದು ನಂಬುವುದು ಸಹ ಕಷ್ಟ, ಕಟ್ಟುವಾಗ ಎರಡು ಸಾವಿರ ವರ್ಷಗಳ ಹಿಂದೆ ಎಷ್ಟುನಯವಾಗಿ ಮೃದುವಾಗಿ ಇದ್ದುವೋ ಈಗಲೂ ಸಹ ಕಂಭಗಳು ಅಷ್ಟೇ ಚೆನ್ನಾಗಿವೆ” ಎಂದಿದ್ದಾರೆ. ಅಷ್ಟು ಪುರಾತನ ಕಾಲದ ಮರವು ನಾಶ ಹೊಂದದೆ ಉಳಿದಿರುವುದೇ ಒಂದು ಅದ್ಭುತ, ಒಂದಕ್ಕೊಂದನ್ನು ಕೂಡಿಸಿರುವದು ಎಲ್ಲಿ ಎಂದು ತಿಳಿಯಲಾಗದಷ್ಟು ನಿರ್ದೋಷವಾಗಿದೆ ಜೋಡಣೆಯ ರೇಖೆ. ಇದನ್ನು ನೋಡಿದವರೆಲ್ಲ ಆಶ್ಚರ್ಯದಿಂದ ಬೆರಗಾದರು. ಪ್ರಾಯಶಃ ಆಕೃತಿನಿ ರ್ಮಾಣದ ಸೂಕ್ಷ್ಮ ಕೌಶಲ್ಯವನ್ನೂ ಯೋಜನಾ ನೈಪುಣ್ಯವನ್ನೂ ಮಾರಿಸಲು ಈಗಲೂ ಯಾರಿಗೂ ಸಾಧ್ಯವಾಗಲಾರದು” ಎಂದಿದ್ದಾರೆ.
ಭಾರತದ ಇತರ ಭಾಗಗಳಲ್ಲಿ ಭೂಶೋಧನೆಯಲ್ಲಿ ದೊರೆತಿರುವ ಕಟ್ಟಡಗಳಲ್ಲಿ ಸಹ ಮರದ ದಿಣ್ಣೆಗಳು, ತೊಲೆಗಳು, ಇನ್ನೂ ಉತ್ತಮ ಸ್ಥಿತಿಯಲ್ಲಿ ಉಳಿದಿವೆ. ಎಲ್ಲಾದರೂ ಇದು ಒಂದು ಆಶ್ಚರ್ಯವೇ ಸರಿ. ಆದರೆ ವಾಯುಗುಣದಿಂದ ಮತ್ತು ಕ್ರಿಮಿಗಳ ಹಾವಳಿಯಿಂದ ಮರಗಳು ನಾಶವಾಗುತ್ತಿರುವ ಭಾರತದಲ್ಲಿ ಇದು ಖಂಡಿತ ಒಂದು ಅದ್ಭುತವೇ ಸರಿ. ಆ ಮರಕ್ಕೆ ಯಾವುದೋ ಬಗೆಯ ಲೇಪನ ಚಿಕಿತ್ಸೆ ಮಾಡಿರಬೇಕು. ಆ ಚಿಕಿತ್ಸೆ ಏನು ಎಂಬುದು ಇನ್ನೂ ಒಂದು ರಹಸ್ಯ.
ಪಾಟಲಿಪುತ್ರ ಮತ್ತು ಗಯಾ ನಗರಗಳ ಮಧ್ಯೆ ಈಚೆಗೆ ಬಹಳ ಪ್ರಖ್ಯಾತಿಗೆ ಬಂದಿರುವ ಅವಶೇಷಗಳು ಇವೆ. ಇದರ ಆರಂಭ ಯಾವುದೆಂಬುದು ತಿಳಿಯುವುದಿಲ್ಲ. ಅದರ ವಿಷಯದಲ್ಲಿ ಅಶೋಕನ ಕಾಲದ ಸಾಕ್ಷ್ಯಗಳಿಲ್ಲ.
ನಲವತ್ತೊಂದು ವರ್ಷಕಾಲ ವಿಶೇಷ ಪರಿಶ್ರಮದಿಂದ ರಾಜ್ಯವನ್ನಾಳಿ ಕ್ರಿಸ್ತಪೂರ್ವ ೨೩೨ರಲ್ಲಿ ಅಶೋಕನು ಮರಣ ಹೊಂದಿದ. ಹೆಚ್. ಜಿ. ವೆಲ್ಸ್ ತನ್ನ ಇತಿಹಾಸರೂಪರೇಖೆ (Outline of History) ಯಲ್ಲಿ ಇತಿಹಾಸದ ಸಾಲುಗಳಲ್ಲಿ ಸಂದಣಿಸಿಬರುವ ಚಕ್ರವರ್ತಿಗಳು, ರಾಜಾಧಿ ರಾಜರುಗಳು, ರಾಜ ಮಾರ್ತಾಂಡರುಗಳ ದಶ ಸಹಸ್ರಗಟ್ಟಲೆ ಹೆಸರುಗಳಲ್ಲಿ ಅಶೋಕನ ಹೆಸರು ಮಾತ್ರ ಧ್ರುವ ನಕ್ಷತ್ರದಂತೆ ಪ್ರಾಯಶಃ ಏಕಾಂಗಿಯಾಗಿ-ಜಾಜ್ವಲ್ಯಮಾನವಾಗಿದೆ. ವೋಲ್ಗಾದಿಂದ ಜರ್ಪಾವರೆಗೆ ಈಗಲೂ ಅವನ ಹೆಸರಿಗೆ ಗೌರವ ಸಲ್ಲುತ್ತಿದೆ. ಚೀನ, ತಿಬೆಟ್ ಮತ್ತು ಈಗ ಅವನ ಧರ್ಮವನ್ನವಲಂಬಿಸದಿದ್ದರೂ ಭಾರತವೂ ಸಹ ಅವನ ಮಹಾತ್ಮಯ ಪರಂಪರೆಯನ್ನು ಕಾದುಕೊಂಡಿವೆ. ಕಾನ್‌ಸ್ಟೆಂಟೈನ್ ಅಥವ ಚಾರ್ಲೆಮೇನ್‌ರ ಹೆಸರುಗಳನ್ನು ಕೇಳಿರುವವರಿಗಿಂತ ಹೆಚ್ಚು ಜನ ಇಂದಿಗೂ ಅವನ ಹೆಸರನ್ನು ಸ್ಮರಿಸುತ್ತಾರೆ.”