ಪುಟ:ಭಾರತ ದರ್ಶನ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಯುಗಾಂತರಗಳು

೧೧೭

ಕತಗಳಿದ್ದರೂ ಇರಬಹುದು, ಅದು ಸಿಡಿಮದ್ದೇ ಇರಬೇಕೆಂದು ಊಹಿಸಲು ಯಾವ ಆಧಾರವೂ ಇಲ್ಲ.

ಬೆಂಕಿ, ಯುದ್ಧ, ಕಾಮಗಳ ಹಾವಳಿಗೆ ಸಿಕ್ಕಿ ದೇಶದಲ್ಲಿ ಒಳಾಡಳಿತವು ಕುಸಿದು ಬಿದ್ದಾಗ ಭಾರತವು ತನ್ನ ಇತಿಹಾಸ ಪರಂಪರೆಯಲ್ಲಿ ಅನೇಕ ಸಂಕಟಗಳನ್ನು ಅನುಭವಿದೆ. ಆದರೂ ಈ ಇತಿಹಾಸದ ಸ್ಫೂಲ ವೀಕ್ಷಣೆಯಿಂದ ಯೂರೋಪಿಗಿಂತ ಭಾರತದಲ್ಲಿ ಬಹು ದೀರ್ಘಕಾಲದ ಶಾಂತಿಯುತ, ವ್ಯವಸ್ಥಿತ ಜೀವನ ನಡೆದು ಬಂದಿದೆ ಎಂಬುದು ವ್ಯಕ್ತವಾಗುತ್ತದೆ, ತುರ್ಕಿ ಜನರ ಮತ್ತು ಆಫ್ಘನರ ದಂಡಯಾತ್ರೆಯ ನಂತರ ಸಹ, ಮೊಗಲ ಸಾಮ್ರಾಜ್ಯ ಕುಸಿದು ಬೀಳುವವರೆಗೆ ಅದೇ ರೀತಿಯ ವ್ಯವಸ್ಥಿತ ಜೀವನ ಇತ್ತು. ಬ್ರಿಟಿಷರ ಆಳ್ವಿಕೆಯ ನಂತರವೇ ದೇಶದಲ್ಲಿ ಮೊಟ್ಟ ಮೊದಲು ಶಾಂತಿ ಮತ್ತು ವ್ಯವಸ್ಥೆ ಯು ನೆಲಸಿತೆಂದು ಹೇಳುತ್ತಿರುವ ಭ್ರಮೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಬ್ರಿಟಿಷರ ಆಳ್ವಿಕೆಯು ಆರಂಭವಾದಾಗ ದೇಶದ ರಾಜಕೀಯ ಮತ್ತು ಆರ್ಥಿಕ ರಚನೆಯು ಮುರಿದಿತ್ತು, ದೇಶವು ಬಹಳ ಹೀನಸ್ಥಿತಿಯಲ್ಲಿತ್ತು ಎನ್ನು ವುದು ನಿಜ. ಬ್ರಿಟಿಷರು ಇಲ್ಲಿ ಬೇರು ಬಿಡಲು ಅದೇ ಮುಖ್ಯ ಕಾರಣ.

೪. ಭಾರತದ ಸ್ವಾತಂತ್ರಾಭಿಲಾಷೆ

ಸೈನ್ಯ ಸಾಲ್ಯ ಳ ಎದುರು ಬಾಗಿತ್ತು ಮೂಡಣವು
ಕಡೆಗಣಿಸಿ ನೂಕಿದೆಡೆ ತಾಳ್ಮೆಯಲಿ ಬಿದ್ದು;
ಪರದಾಳಿಗಳು ಅಬ್ಬರಿಸಿ ಸಾಗಿರಲು ಮೇಲೆ ಮೇಲೆ
ತಡೆಯದೆಯೆ, ತಿರುತಿರುಗಿ ಮುಳುಗಿತ್ತು ಮೂಡಣವು ಚಿ೦ತೆಯಲಿ,

ಕವಿಯ ಈ ಸಾಲ ಳನ್ನು ಪದೇ ಪದೇ ಉದಹರಿಸುತ್ತಾರೆ. ಪೌರ್ವಾತ್ಯವು ಅದರಲ್ಲಿಯೂ 'ಇಂಡಿಯ ' ಎಂಬ ಹೆಸರಿನ ಪೌರ್ವಾತ್ಯ ಭಾಗವು ಸದಾ ಆಲೋಚನಾಪರ. ಆದರಲ್ಲೂ ವ್ಯವಹಾರ ಕುಶಲರ ದೃಷ್ಟಿಯಲ್ಲಿ ಭಾರತದ ಯೋಚನೆಗಳೆಲ್ಲ ಗುರಿಯಿಲ್ಲದ ಅಸಂಬದ್ಧ ವಿಷಯಗಳ ವಿಚಾರದಲ್ಲಿ. ಭಾರತವು ಜ್ಞಾನಕ್ಕೆ ಮತ್ತು ಮಹಾ ಜ್ಞಾನಿಗಳಾದ ವಿದ್ವಾಂಸರಿಗೆ ಬಹಳ ಗೌರವಕೊಟ್ಟಿದೆ. ಅಲ್ಲದೆ ಖಡ್ಗಧಾರಿಗಳಾದ ಕ್ಷತ್ರಿಯರೂ ಧನಿಕರಾದ ಶ್ರೀಮಂತರೂ ಜ್ಞಾನಿಗಳಿಗಿಂತ ಕೀಳು ಎಂದೇ ಭಾರತದ ಭಾವನೆ. ತನ್ನ ಅವನತಸ್ಥಿತಿಯಲ್ಲಿ ಸಹ ಜ್ಞಾನಕ್ಕೆ ಪ್ರಾಶಸ್ತ್ರ ಕೊಟ್ಟು ಅದರಲ್ಲೇ ಒಂದು ಮನಶ್ಯಾಂತಿ ಯನ್ನು ಪಡೆದಿದೆ.

ಆದರೆ ಇಂಡಿಯ ಎಲ್ಲ ಕಾಲಗಳಲ್ಲಿಯೂ ಪರದಾಳಿಗೆ ಮೌನದಿಂದ ತಲೆಬಾಗಿದೆ ಎಂಬುದಾಗಲಿ, ಶತ್ರು ಸೇನೆಗಳಿಗೆ ಸುಮ್ಮನೆ ಮುನ್ನುಗ್ಗಲು ಅವಕಾಶ ಕೊಟ್ಟಿದೆ ಎಂಬುದಾಗಲಿ ನಿಜವಲ್ಲ. ಸದಾ ಅವುಗ ಳನ್ನು ಎದುರಿಸಿದೆ, ಎಷ್ಟೋ ವೇಳೆ ಜಯಶಾಲಿಯಾಗಿದೆ ; ಕೆಲವು ವೇಳೆ ವಿಫಲವಾದರು ಆ ಸೋಲನ್ನು ಮರೆಯದೆ ಅದನ್ನೇ ಮುಂದಿನ ಪ್ರಯತ್ನಕ್ಕೆ ಸೋಪಾನವಾಗಿ ಉಪಯೋಗಿಸಿಕೊಂಡಿದೆ. ಆ ಪ್ರಯತ್ನ ದಲ್ಲಿ ಎರಡು ಮಾರ್ಗವನ್ನು ಅವಲಂಬಿಸಿದೆ, ಕಾದಾಡಿ ಹೊಡೆದೋಡಿಸುವುದು ಒಂದು ಮಾರ್ಗ ; ಸಾಧ್ಯವಾಗದೆ ಹೋದರೆ ಉಳಿದವರನ್ನು ತಾನೇ ಜೀರ್ಣಿಸಿಕೊಳ್ಳುವದು ಎರಡನೆಯ ಮಾರ್ಗ. ಅಲೆಕ್ಸಾಂಡರ್ ನ ಸೈನ್ಯವನ್ನು ಬಹಳ ಯಶಸ್ವಿಯಾಗಿ ತಡೆಗಟ್ಟಿತು ಮತ್ತು ಆತನು ಮರಣ ಹೊಂದಿದ ಅತ್ಯಲ್ಪ ಕಾಲದಲ್ಲೇ ಉತ್ತರದಲ್ಲಿದ್ದ ಗ್ರೀಕ್ ಸೈನ್ಯವನ್ನೆಲ್ಲ ಸದೆಬಡೆದೋಡಿಸಿತು. ಅನಂತರ ಇಂಡೊ ಗ್ರೀಕರನ್ನೂ ಮತ್ತು ಇಂಡೋ ಸಿಥಿಯನರನ್ನೂ ತನ್ನೊಳಗೇ ಐಕ್ಯ ಮಾಡಿಕೊಂಡು ಕೊನೆಯಲ್ಲಿ ಹಣ ರೊಡನೆ ಅನೇಕ ಕಾಲ ಯುದ್ದ ಮಾಡಿ ಕಟ್ಟ ಕಡೆಗೆ ಅವರನ್ನು ಓಡಿಸಿತು, ಉಳಿದವರನ್ನು ಪುನಃ ತನ್ನೊಳಗೆ ಸೇರಿಸಿಕೊಂಡಿತು. ಅರಬರು ಬಂದವರು ಸಿಂಧು ನದಿಯ ಬಳಿಯೇ ನಿಂತರು. ತುರ್ಕಿ ಜನರು ಮತ್ತು ಆಫ್ಘನರಿಗೆ ಮುಂದುವರಿಯಲು ಬಹುಕಾಲ ಹಿಡಿಯಿತು. ದೆಹಲಿಯ ಸಿಂಹಾಸನದ ಮೇಲೆ ಭದ್ರವಾಗಿ ಕೂಡಲು ಬಹಳ ದಿನಗಳು ಬೇಕಾಯಿತು. ಅದೊಂದು ತಡೆಯಿಲ್ಲದ ಬಹುಕಾಲದ ಹೋರಾಟ. ಈ ಮಧ್ಯೆ ಬಂದವರು ಭಾರತೀಯರಾಗಿ ಬದಲಾವಣೆ ಹೊಂದುತ್ತಿದ್ದರು. ಇತರ ಭಾರತೀ