ಪುಟ:ಭಾರತ ದರ್ಶನ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೪

ಭಾರತ ದರ್ಶನ

ಒಪ್ಪಿದ್ದಾರೆ. ಸಿಲ್ವೇನ್‌ಲೆವಿ “ ಹಿಂದೂಸ್ಥಾನದ ಕಾವ್ಯ ಮತ್ತು ಸಾಹಿತ್ಯ ಲೋಕದಲ್ಲಿ ಕಾಳಿದಾಸನ ಸ್ನಾನ ಉಜ್ವಲವಿದೆ. ನಾಟಕ, ಮಹಾಕಾವ್ಯ ಮತ್ತು ವಿರಹ ಗೀತೆಗಳ ರಚನೆಯಲ್ಲಿ ಈತನ ಕಲಾ ಪ್ರತಿಭೆ ಇನ್ನೂ ಮಾಸದ ಪ್ರಜ್ವಲಿಸುತ್ತಿದೆ. ಸರಸ್ವತಿಯ ವರ ಪುತ್ರರಲ್ಲಿ ಕಾಳಿದಾಸನು ಅದ್ವಿತೀಯ ನಿದ್ದಾನೆ ಮತ್ತು ಇಡೀ ಮಾನವ ಪ್ರಪಂಚಕ್ಕೇ ಶ್ರೇಷ್ಠ ನಾಟಕ ಕರ್ತನೆಂದು ಪರಿಚಯನಾಗಿದ್ದಾನೆ. ಅದರಿಂದ ಹಿಂದೂಸ್ಥಾನದ ಗೌರವವೂ ಹೆಚ್ಚಿದೆ. ಶಾಕುಂತಲ ನಾಟಕವನ್ನು ಕಾಳಿದಾಸನು ಉಜ್ಜ ಯಿನಿಯಲ್ಲಿ ಬರೆದು ಅನೇಕ ಶತಮಾನಗಳಾದರೂ ಪಾಶ್ಚಿಮಾತ್ಯ ಪ್ರಪಂಚಕ್ಕೆ ಅದರ ಪರಿಚಯ ವಾದದ್ದು ವಿಲಿಯಂ ಜೋನ್ಸ್ನ ಅನುವಾದದಿಂದ ಮಾತ್ರ. ಶ್ರೇಷ್ಠ ಸಾಹಿತಿಗಳ ಮಧ್ಯೆ ಕಾಳಿದಾಸನ ಸ್ಥಾನ ಧ್ರುವತಾರೆಯಂತೆ ಉನ್ನತವಾಗಿದೆ. ಮಾನವ ಮನೋವಿಕಾಸವನ್ನೆ ಸಗಿ ಪ್ರಗತಿಮಾರ್ಗ ಕೊಯ್ದ ಯುಗ ಪ್ರವರ್ತಕನಂತೆ ನಾಟಕ ಕಲೆಯಲ್ಲಿ ಕಾಳಿದಾಸನೂ ಒಬ್ಬ ಯುಗ ಪುರುಷನಾಗಿದ್ದಾನೆ. ಕಾಳಿದಾಸನ ಹೆಸರೇ ಚರಿತ್ರಾರ್ಹವಾದುದಲ್ಲದೆ ಕಾಳಿದಾಸನೇ ಸ್ವಯಂ ಚರಿತ್ರಕಾರನಾಗಿದ್ದಾನೆ.
ಕಾಳಿದಾಸನು ಇತರ ನಾಟಕಗಳನ್ನೂ ಕೆಲವು ದೊಡ್ಡ ಕವನಗಳನ್ನೂ ಬರೆದವನು. ಅವನ ಕಾಲವು ಇನ್ನೂ ನಿರ್ದೆಶವಾಗಿಲ್ಲ. ಪ್ರಾಯಶಃ ಕ್ರಿಸ್ತಶಕ ನಾಲ್ಕನೆಯ ಶತಮಾನದ ಕೊನೆಯಲ್ಲಿ ಗು = ವಂಶದ ಎರಡನೆ ಚಂದ್ರಗುಪ್ತ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಉಜ್ಜಯಿನಿಯಲ್ಲಿದ್ದಂತೆ ಕಾಣು ತದೆ, ವಿಕ್ರಮಾದಿತ್ಯನ ರಾಜಸಭೆಯ ನವರತ್ನಗಳಲ್ಲಿ ಕಾಳಿದಾಸನು ಒಬ್ಬನಾಗಿದ್ದ ಎಂದು ಪ್ರತೀತಿ ಇದೆ. ಅವನ ವಿದ್ವತ್ತಿಗೆ ಮನ್ನಣೆಯು ದೊರೆಯಿತು ; ಅವನ ಜೀವಮಾನದಲ್ಲಿಯೇ ಪೂರ್ಣ ಯಶಸ್ಕೂ ದೊರೆಯಿತು. ಜೀವನ ಕಾಠಿನ್ಯ, ಒರಟು ಜೀವನ ಇವುಗಳ ಸುಳಿವೂ ಇಲ್ಲದೆ ಸುಂದರ ಮತ್ತು ಕೋಮಲ ಜೀವನ ಸುಖವನ್ನೇ ಅನುಭವಿಸುತ್ತ ಪ್ರೀತಿಯ ಪುತ್ಥಳಿಯಂತೆ ಪ್ರಪಂಚದಲ್ಲಿ ಬಾಳಿದ ಅದೃಷ್ಟ ವಾಸಿಗಳಲ್ಲಿ ಕಾಳಿದಾಸನು ಒಬ್ಬನಾಗಿದ್ದ. ಈ ಜೀವನ ಪ್ರೇಮದ ಮತ್ತು ಪ್ರಕೃತಿ ಸೌಂದದ ಭಾವಾವೇಶವು ಅವನ ಕೃತಿಗಳಲ್ಲಿ ಎದ್ದು ಕಾಣುತ್ತದೆ.
ಕಾಳಿದಾಸನ ದೀರ್ಘ ಕವಿತೆಗಳಲ್ಲಿ ಮೇಘದೂತ ಒ೦ದು ಸೆರೆ ಸಿಕ್ಕು ತನ್ನ ಪ್ರಿಯಳಿಂದ ಅಗಲಿದ ಪ್ರೇಮಿಯೊಬ್ಬನು ಮಳೆಗಾಲದಲ್ಲಿ ಮೇಘ ಒಂದನ್ನು ಕಂಡು “ನಿನ್ನ ವಿರಹದಲ್ಲಿಯೇ ಚಿಂತಾಮಗ್ನ ನಾಗಿದ್ದಾನೆ ” ಎಂದು ಹೋಗಿ ಸಂದೇಶ ಹೇಳು ಎಂದು ಮೇಘವನ್ನು ಕೇಳಿಕೊಳ್ಳುತ್ತಾನೆ. ಅಮೆರಿಕೆಯ ವಿದ್ವಾಂಸನಾದ ರೈಡರ್ ಈ ಕವನಕ್ಕೆ ಮತ್ತು ಕಾಳಿದಾಸನಿಗೆ ಅದ್ಭುತ ಮೆಚ್ಚಿಗೆಯನ್ನು ವ್ಯಕ್ತಗೊಳಿಸಿದ್ದಾನೆ. ಆ ಕಾವ್ಯದ ಎರಡು ಭಾಗಗಳ ವಿಷಯ ಪ್ರಸ್ತಾಪಿಸುತ್ತ ಪೂರ್ವಾರ್ಧವು ಬಾಹ್ಯ ಪ್ರಕೃತಿಯ ವರ್ಣನೆಯಾದರೂ ಮಾನವ ಭಾವನೆಯೊಂದಿಗೆ ಹೆಣೆದುಕೊಂಡಿದೆ ; ಉತ್ತರಾ ರ್ಧವು ಮಾನವನ ಹೃದಯದ ಚಿತ್ರವಾದರೂ ಪ್ರಕೃತಿ ಸೌಂದರ್ಯದ ಚೌಕಟ್ಟಿನಲ್ಲಿದೆ. ಇವುಗಳೆರಡರಲ್ಲಿ ಯಾವುದು ಉತ್ತಮ ಎಂದು ಯಾರಿಂದಲೂ ಹೇಳಲಾಗದಷ್ಟು ಕುಶಲತೆಯಿಂದ ಕವಿಯು ಕಾವ್ಯ ರಚನೆ ಮಾಡಿದ್ದಾನೆ. ಈ ಸುಂದರ ಕಾವ್ಯವನ್ನು ಮೂಲ ಸಂಸ್ಕೃತದಲ್ಲಿ ಓದಿದ ಕೆಲವರಿಗೆ ಪೂರ್ವಾ ರ್ಧವು ಉತ್ತಮವೆನಿಸುತ್ತದೆ. ಇನ್ನು ಕೆಲವರಿಗೆ ಉತ್ತರಾರ್ಧವು ಉತ್ತಮವೆನಿಸುತ್ತದೆ. ಯೂರೋಪ್ ಹತ್ತೊಂಭತ್ತನೆಯ ಶತಮಾನದವರೆಗೆ ಕಲಿಯದ ಸತ್ಯ ಒಂದನ್ನು ಕಾಳಿದಾಸನು ಐದನೆಯ ಶತ ಮಾನದಲ್ಲಿ ಅರ್ಥಮಾಡಿಕೊಂಡ. ಪ್ರಪಂಚ ಸೃಷ್ಟಿ ಯು ಮನುಷ್ಯನಿಗೆ ಮಾತ್ರ ಅಲ್ಲ ; ಮಾನವ ಜೀವನ ವಲ್ಲದೆ ಇತರ ವಸ್ತುಗಳ ಘನತೆ ಮತ್ತು ಬೆಲೆಯನ್ನು ಮನುಷ್ಯನು ತಿಳಿದುಕೊಂಡಾಗ ಮಾತ್ರ ಅವನು ತನ್ನ ಪೂರ್ಣ ಉನ್ನತಿಯನ್ನು ಮುಟ್ಟುತ್ತಾನೆ ಎಂಬುದೇ ಆ ಸತ್ಯ, ಯೂರೋಪ್ ಅದನ್ನು ಇನ್ನೂ ಪೂರ್ಣ ಅರಿತಿಲ್ಲ. ಕಾಳಿದಾಸನಿಗೆ ಈ ಸತ್ಯದ ಅರಿವು ಉಂಟಾದದ್ದು ಅವನ ಬುದ್ದಿ ಶಕ್ತಿಯ ಮೇಲ್ಮೀಯನ್ನು ಸಾರುತ್ತದೆ. ಈ ಗುಣವು ಮಹಾ ಕಾವ್ಯಕ್ಕೂ ಅತ್ಯವಶ್ಯಕ, ಕಾವ್ಯ ಸೌಂದಯ್ಯ ಕ್ಕೂ ಅವಶ್ಯಕ. ಕಾವ್ಯನಿರರ್ಗಳತೆಯೂ ಅನೇಕ ಕವಿಗಳಲ್ಲಿದೆ. ಬುದ್ಧಿಶಕ್ತಿಯೂ ಅನೇಕರಲ್ಲಿದೆ. ಆದರೆ ಪ್ರಪಂಚ ಹುಟ್ಟಿದಂದಿನಿಂದ ಎರಡೂ ಸಮಾನವಾಗಿರುವ ನಿದರ್ಶನಗಳು ಹನ್ನೆರಡಕ್ಕಿಂತ ಹೆಚ್ಚು ಇಲ್ಲ. ಈ ಸಮಾವೇಶದ ಸಾಮರಸ್ಯವಿದ್ದುದರಿಂದಲೇ ಕಾಳಿದಾಸನ ಸ್ಥಾನ ಅನಕ್ರಿಯನ್, ಹಾರೆಸ್, ಷೆಲ್ಲಿ