ಪುಟ:ಭಾರತ ದರ್ಶನ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ಭಾರತ ದರ್ಶನ

ಮರಲ್ಲಿ ಕೆಲವರು ಸಂಗೀತ ಕಲೆಯಲ್ಲಿ ಅಸಾಧಾರಣ ಪಾಂಡಿತ್ಯ ಪ್ರೌಢಿಮೆಯನ್ನು ಪಡೆದವರೂ ಇದಾರೆ. ಸಾಹಿತ್ಯ ಮತ್ತು ಕಾವ್ಯ ರಚನೆಗೂ ಮುಸ್ಲಿಮರಿಂದ ಪ್ರೋತ್ಸಾಹ ದೊರೆಯಿತು. ಹಿಂದಿ ಯಲ್ಲಿ ಅನೇಕ ಮುಸ್ಲಿಂ ಕವಿಗಳಿದ್ದಾರೆ. ಬಿಜಾಪುರದ ದೊರೆಯಾದ ಆದಿಲ್ ಷಾ ಭಾರತೀಯ ಸಂಗೀತ ಶಾಸ್ತ್ರದ ಮೇಲೆ ಹಿಂದಿಯಲ್ಲಿ ಒಂದು ಗ್ರಂಥ ಬರೆದಿದ್ದಾನೆ. ಭಾರತೀಯ ಕಾವ್ಯ ಮತ್ತು ಸಂಗೀತ ಎರಡರಲ್ಲೂ ಹಿಂದೂ ದೇವರುಗಳು ಮತ್ತು ದೇವತೆಗಳ ಸ್ತುತಿ ಇದೆ. ಆದರೂ ಮುಸ್ಲಿಂ ಮರು ಆಕ್ಷೇಪಿಸಲಿಲ್ಲ. ಹಳೆಯ ರೂಪಕಗಳು ಮತ್ತು ಉಪಮೆಗಳನ್ನ ಉಪಯೋಗಿಸಿದರು. ಎಲ್ಲೋ ಕೆಲವು ಸಂದರ್ಭಗಳನ್ನು ಬಿಟ್ಟರೆ ವಿಗ್ರಹಗಳ ತಯಾರಿಕೆ ಒಂದರ ವಿನಾ ಬೇರೆ ಯಾವ ಕಲಾ ಸೃಷ್ಟಿ ಯನ್ನೂ ಮುಸ್ಲಿಂ ರಾಜರು ನಿಷೇಧಮಾಡಲಿಲ್ಲ.
ಆ ಕಾಲದಲ್ಲಿ ಇನ್ನೂ ಎಷ್ಟೋ ವಿಷಯಗಳು ಅವನತಿ ಹೊಂದಿದಂತೆ ಸಂಸ್ಕೃತ ನಾಟಕವೂ ಅವನತಿಗಿಳಿಯಿತು ; ಮತ್ತು ಸೃಷ್ಟಿ ಶಕ್ತಿಯು ಕಡಮೆಯಾಗುತ್ತ ಬಂದಿತು. ಆಫ್ಘನರು, ತುರ್ಕಿ ಜನರು ದೆಹಲಿ ಸಿಂಹಾಸನವನ್ನು ಆಕ್ರಮಿಸುವ ಮೊದಲೆ ಈ ಕ್ಷೀಣದೆಶೆ ಆರಂಭವಾಗಿತ್ತು. ಅನಂತರ ರಾಜಮನೆತನಗಳ ಪ್ರೌಢಭಾಷೆಯಾದ ಪಾರಸಿ ಭಾಷೆಯೊಂದಿಗೆ ಸಂಸ್ಕೃತ ಭಾಷೆಯೂ ಪೈಪೋಟಿ ನಡೆಸಬೇಕಾಯಿತು. ಆದರೂ ದೈನಂದಿನ ಜೀವನದ ಭಾಷೆಗಳಿಗೂ ಸಂಸ್ಕೃತ ನಾಟಕಗಳ ಭಾಷೆಗೂ ಇರುವ ಅಪಾರ ಅಂತರ ಒಂದು ಕಾರಣ, ನಿಜವಾದ ಕಾರಣವೆಂದು ತೋರುತ್ತದೆ. ಕ್ರಿಸ್ತಶಕ ೧೦೦೦ ದ ಸುಮಾರಿನಲ್ಲಿ ಜನರು ಮಾತನಾಡುತ್ತಿದ್ದ ಭಾಷೆಗಳಲ್ಲಿ ಸಾಹಿತ್ಯ ಬೆಳೆಯಲು ಆರಂಭ ವಾಯಿತು.
ಇಷ್ಟೆಲ್ಲ ಆದರೂ ಮಧ್ಯಕಾಲದಲ್ಲಿ ಮತ್ತು ಇತ್ತೀಚೆಗೆ ಸಹ ಸಂಸ್ಕೃತ ನಾಟಕಗಳು ಹುಟ್ಟುತ್ತಲೇ ಇರುವುದು ಒಂದು ಆಶ್ಚರ್ಯ. ೧೮೯೨ ರಲ್ಲಿ ಷೇಕ್ಸ್ ಪಿಯರ್ ಮಹಾ ಕವಿಯ “ ಮಿಡ್ ಸಮ್ಮರ್ ನೈಟ್ಸ್ ಡೀಮ್ ” ಎಂಬ ನಾಟಕದ ಸಂಸ್ಕೃತ ಅನುವಾದ ಬಂದಿತು. ಹಳೆಯ ನಾಟಕಗಳ ಹಸ್ತ ಪ್ರತಿಗಳು ಇನ್ನೂ ಬೆಳಕಿಗೆ ಬರುತ್ತಲೇ ಇವೆ. ೧೮೯೦ ರಲ್ಲಿ ಪ್ರೊಫೆಸರ್ ಸಿಲ್ವೆನ್ ಲೆವಿಯವರು ಮಾಡಿದ ಪಟ್ಟಿ ಯಲ್ಲಿ ೧೮೯ ಜನ ಕವಿಗಳ ೩೭೭ ನಾಟಕಗಳಿವೆ. ಈಚಿನ ಪಟ್ಟಿ ಯೊಂದರಲ್ಲಿ ೬೫೦ ನಾಟಕಗಳಿವೆ.
ಪ್ರಾಚೀನ ನಾಟಕಗಳ ಭಾಷೆಯು (ಕಾಳಿದಾಸ ಮೊದಲಾದವರದು) ಮಿಶ್ರಭಾಷೆ, ಸಂಸ್ಕೃತ ಮತ್ತು ಒಂದೋ ಎರಡೋ ಬಗೆಯ, ಸಾಮಾನ್ಯ ಜನರು ಬಳಸುತ್ತಲಿದ್ದ ಪ್ರಾಕೃತ, ಒ೦ದೇ ನಾಟಕದಲ್ಲಿ ಸುಸಂಸ್ಕೃತರು ಸಂಸ್ಕೃತದಲ್ಲಿ ಮಾತನಾಡುತ್ತಾರೆ. ವಿದ್ಯಾವಿಹೀನರಾದ ಸಾಮಾನ್ಯ ಜನರು ಮತ್ತು ಕೆಲವು ಅಪವಾದಗಳಿದ್ದರೂ ಸಾಮಾನ್ಯವಾಗಿ ಸ್ತ್ರೀಯರು ಪ್ರಾಕೃತದಲ್ಲಿ ಮಾತನಾಡುತ್ತಾರೆ, ಕ್ಯಾವ ಭಾಗ ಮತ್ತು ಭಾವಗೀತೆಗಳೆಲ್ಲ ಸಂಸ್ಕೃತದಲ್ಲಿವೆ. ಈ ಭಾಷಾ ಸಮ್ಮಿಶ್ರಣದಿಂದ ಪ್ರಾಯಶಃ ಸಾಮಾನ್ಯ ಜನರಿಗೆ ನಾಟಕವು ಅರ್ಥವಾಗುತ್ತಿತ್ತು. ಸಾಹಿತ್ಯದ ಭಾಷೆಗೂ ಸಾಮಾನ್ಯ ಜನರ ಕಲಾಭಿರುಚಿಯ ಅವಶ್ಯಕತೆಗೂ ಇದು ಒಂದು ಸಮಾಧಾನದಂತೆ ಇತ್ತು. ಸಮಾಜದ ಒಂದು ವಿಶಿಷ್ಟ ಪಂಗಡದಿಂದ ಹುಟ್ಟಿ, ಸಾಮಾನ್ಯ ಜೀವನದಿಂದ ದೂರವಿದ್ದ ಮತ್ತು ನಾಟಕವಿಷಯದ ಆಯ್ಕೆಯಲ್ಲೂ ಜನಸಾಮಾ ವ್ಯಕ್ಕೆ ಅಪರಿಚಿತವಿದ್ದ ಫ್ರೆಂಚ್ ದುರಂತ ನಾಟಕಗಳಿಗೆ ಸಿಲೈನ್ ಲೆವಿ ಇವುಗಳನ್ನು ಹೋಲಿಸಿದ್ದಾನೆ. ಈ ಶ್ರೇಷ್ಠ ತರಗತಿಯ ಸಾಹಿತ್ಯ ನಾಟಕಗಳಲ್ಲದೆ ಪ್ರೇಕ್ಷಕರಿಗೆ ಚಿರ ಪರಿಚಿತವಾದ ಭಾರತೀಯ ಪುರಾಣ ಕಥೆಗಳ ಮಹಾಕಾವ್ಯಗಳ ಕಥೆಗಳ ಆಧಾರದ ಮೇಲೆ ರಚಿತವಾದ ಜನಪದ ನಾಟಕಗಳು ಇದೇ ಇವೆ, ಅವುಗಳಲ್ಲಿ ನಾಟಕೀಯ ವಸ್ತುಗಳಿಗಿಂತ ಪಾತ್ರಗಳ ವೇಷಭೂಷಣಗಳೇ ಹೆಚ್ಚಾಗಿರುತ್ತಿತ್ತು. ಇವು ಆಯಾ ಭಾಗದ ಜನರ ಭಾಷೆಯಲ್ಲಿರುತ್ತಿದ್ದವು. ಆದ್ದರಿಂದ ಸ್ಥಳೀಯ ಮನ್ನಣೆ ಪಡೆದಿದ್ದವು. ಸಂಸ್ಕೃತ ನಾಟಕಗಳು ಸಮಗ್ರ ಭಾರತದ ವಿದ್ವಾಂಸರ ಭಾಷೆಯಾದ ಸಂಸ್ಕೃತದಲ್ಲಿರುತ್ತಿದ್ದುದರಿಂದ ಭಾರತಾದ್ಯಂತ ಪ್ರಸಿದ್ದವಾಗಿದ್ದವು.
ಈ ಸಂಸ್ಕೃತ ನಾಟಕಗಳು ಅಭಿನಯಿಸಬೇಕೆಂದೇ ಬರೆದವು. ರಂಗಸ್ಥಳದ ಸೂಚನೆಗಳ ಮತ್ತು ಪ್ರೇಕ್ಷಕರು ಕುಳಿತುಕೊಳ್ಳಲು ನಿಯಮಗಳ ವಿವರಗಳನ್ನು ತಿಳಿಸಿರುತ್ತವೆ. ಸ್ತ್ರೀಯರೂ