ಪುಟ:ಭಾರತ ದರ್ಶನ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೮

ಭಾರತ ದರ್ಶನ

ಯಿಲ್ಲದ ಕುರುಡು ಶಕ್ತಿ ಯಾವುದೂ ಮಾನವಜೀವನದ ಮಧ್ಯೆ ಒದಗುವಂತಿರಲಿಲ್ಲ. ಅದನ್ನು ಎದುರಿಸಬೇಕಾದ್ರೂ ಇರಲಿಲ್ಲ. ಎದುರಿಸಿದರೂ ಉಪಯೋಗವಿರಲಿಲ್ಲ. ಇಷ್ಟು ಸುಲಭ ವಿವರಣಗಳಿಂದ ದಾರ್ಶನಿಕರಿಗೆ, ತತ್ವಜ್ಞಾನಿಗಳಿಗೆ ತೃಪ್ತಿಯಾಗಲಿಲ್ಲ. ಅ೦ತಿಮ ಕಾರಣವನ್ನೂ, ಪೂರ್ಣಜ್ಞಾನ ವನ್ನೂ ಅರಿತುಕೊಳ್ಳಲು ಈ ಸಾಮಾನ್ಯ ತತ್ವವನ್ನು ಮೀರಿ ಹೋಗುತ್ತಲೇ ಇದ್ದರು. ಆದರೆ ಜನ ಸಾಮಾನ್ಯರಲ್ಲಿ ಆ ನಂಬಿಕೆಗಳೇ ರೂಢಮೂಲವಿದ್ದವು. ನಾಟಕಕರ್ತರು ಅವುಗಳನ್ನು ಎದುರಿಸುವ ಧೈರ್ಯಮಾಡಲಿಲ್ಲ. ನಾಟಕಗಳು ಮತ್ತು ಸಂಸ್ಕೃತ ಕಾವ್ಯವು ಈ ಭಾರತೀಯ ರೂಢಮೂಲ ಭಾವನೆಯನ್ನು ಸಂಪೂರ್ಣ ಪ್ರತಿಬಿಂಬಿಸಿದವು. ಎಲ್ಲಿಯೂ ಅದಕ್ಕೆ ವಿರೋಧ ಮನೋಭಾವವು ಕಾಣುವುದಿಲ್ಲ. ನಾಟಕ ರಚನೆಯ ನಿಯಮಗಳು ಕಠಿನವಿದ್ದವು, ಅವುಗಳನ್ನು ಮೀರುವುದು ಸುಲಭವಿರಲಿಲ್ಲ. ಆದರೂ ವಿಧಿಯ ದಾಸರಾಗಿ ಏನೇ ಕಷ್ಟಗಳು ಬರಲಿ ನಾಯಕನು ಅವುಗಳನ್ನು ಎದುರಿಸಬಲ್ಲ ಧೈರ್ಯಶಾಲಿ. ಚಾಣಕ್ಯನು 'ಮುದ್ರಾರಾಕ್ಷಸ'ದಲ್ಲಿ “ ಅದೃಷ್ಟವನ್ನೆ ನಂಬುವವರು ” ಮುಟ್ಟಾಳರು ಎಂದಿದ್ದಾನೆ ; ಆತ್ಮಶಕ್ತಿಯನ್ನವಲಂಬಿಸದೆ ಸಹಾಯಕ್ಕಾಗಿ ಆಕಾಶ ನೋಡುತ್ತಾರೆ. ಸ್ವಲ್ಪ ಕೃತಕತೆ ಕಾಣುತ್ತದೆ : ನಾಯಕ ಯಾವಾಗಲೂ ನಾಯಕ ; ನೀಚ ಯಾವಾಗಲೂ ನೀಚ ನಾಗಿಯೇ ಇರುತ್ತಾನೆ ; ಮಿಶ್ರಗುಣದ ಪಾತ್ರಗಳು ಬಹು ವಿರಳ, ಆದರೂ ಅದ್ಭುತನಾಟಕೀಯ ಸನ್ನಿವೇಶಗಳನ್ನು, ಹೃದಯವಿದ್ರಾವಕ ದೃಶ್ಯಗಳನ್ನು ಕನಸಿನ ಚಿತ್ರದಂತೆ ಕಾಣುವ ಜೀವನದ ಹಿನ್ನೆಲೆ ಯನ್ನು ಸತ್ಯವಾದರೂ ಅದ್ಭುತ ಕಾಲ್ಪನಿಕ ಚಿತ್ರವನ್ನು ಕವಿಯ ಭವ್ಯ ಭಾವನೆಯಲ್ಲಿ ಗಂಭೀರ ಭಾಷೆ ಯಲ್ಲಿ ನೋಡಬಹುದು. ವಾಸ್ತವ ಜೀವನ ಆ ರೀತಿ ಇರದಿದ್ದರೂ ಭಾರತೀಯ ಜೀವನವು ಆಗ ಹೆಚ್ಚು ಶಾಂತಿಯುತವೂ ಭದ್ರವೂ ಆಗಿದ್ದಂತೆಯೂ, ತನ್ನ ನೆಲೆಯನ್ನು ತಾನು ಅರಿತು, ತನ್ನ ಸಮಸ್ಯೆ ಗಳಿಗೆ ಉತ್ತರವನ್ನು ಕಂಡುಕೊಂಡಂತೆಯೂ ಕಾಣುತ್ತದೆ. ಈ ಭಾರತೀಯ ಜೀವನ ವಾಹಿನಿಯು ಗಂಭೀರವಾಗಿ ಪ್ರವಹಿಸುತ್ತದೆ; ಅಲ್ಲಲ್ಲಿ ಬಿರುಗಾಳಿ, ಚಂಡಮಾರುತಗಳೆದ್ದರೂ ಮೇಲ್ಬಾಗ ಮಾತ್ರ ಕದಲುತ್ತದೆ. ಗ್ರೀಕ್ ದುರಂತ ನಾಟಕಗಳಲ್ಲಿ ಕಾಣುವ ಭೀಕರ ಚಂಡಮಾರುತಗಳು ಯಾವುವೂ ಇಲ್ಲ. ಪೂರ್ಣ ಮಾನವೀಯತೆಯು ಇದೆ. ಕಲಾಭಿರುಚಿಯ ಮಾಧುರ್ಯವಿದೆ, ತಾರ್ಕಿಕ ಪೂರ್ಣತೆ ಇದೆ. “ ಭಾರತೀಯ ನಾಟಕವು ಇಂದಿಗೂ ಭಾರತೀಯ ಪ್ರತಿಭೆಯ ಅತ್ಯಂತ ಸುಂದರ ಸೃಷ್ಟಿ ” ಎಂದು ಸಿಲ್ವೆನ್ ಲೆವಿ ಹೇಳುತ್ತಾರೆ.
ಪ್ರೊಫೆಸರ್ ಎ, ಬೆರಿಡೇಲ್ ಕೀತ್ * ಸಂಸ್ಕೃತ ನಾಟಕವು ಭಾರತೀಯ ಕಾವ್ಯ ಸಾಹಿತ್ಯದ ಶ್ರೇಷ್ಠ ಮುಕ್ತಾಫಲ, ಆತ್ಮಜ್ಞಾನಿಗಳಾದ ಭಾರತೀಯ ಸಾಹಿತ್ಯ ಸೃಷ್ಟಿಕರ್ತರು ಸಾಧಿಸಿದ ಸಾಹಿತ್ಯ ಕಲೆಯ ಅತ್ಯುನ್ನತ ಶಿಖರ. ಇತರ ಎಷ್ಟೋ ವಿಷಯಗಳಲ್ಲಿ ಬ್ರಾಹ್ಮಣನು, ದೂಷಣೆಗೆ ಒಳಗಾಗಿದ್ದರೂ ಆತನೇ ಭಾರತದ ಧೀಶಕ್ತಿಯ ಮೂಲ. ಭಾರತೀಯ ದರ್ಶನದಂತೆ, ತನ್ನ ಮಾನಸಿಕ ಸಾಧನೆಯ ಇನ್ನೊಂದು ಪ್ರಯತ್ನದಿಂದ ಅತ್ಯಂತ ಸೂಕ್ಷ್ಮವೂ, ಪ್ರತಿಭಾಯುಕ್ತವೂ ಆದ ನಾಟಕ ರೂಪವನ್ನು ಕಂಡು ಹಿಡಿದ.
೧೯೨೪ರಲ್ಲಿ “ಮೃಚ್ಛ ಕಟಕ" ದ ಇಂಗ್ಲಿಷ್ ಅನುವಾದ ಪ್ರದರ್ಶನವು ನ್ಯೂಯಾರ್ಕ್ ನಗರದಲ್ಲಿ ನಡೆಯಿತು. 'ನೇಷನ್' ಪತ್ರಿಕೆಯ ನಾಟಕ ವಿಮರ್ಶಕ ಜೋಸೆಫ್ ವುಡ್ ಕ್ರಚ್ ಎಂಬಾತನು “ ತಾತ್ವಿಕರು ಹೇಳುವ ರಂಗಮಂಟಪದ ಶುದ್ಧ ಕಲೆಯ ನಿಜವಾದ ನಿದರ್ಶನವು ಇಲ್ಲಿ ಪ್ರೇಕ್ಷಕರಿಗೆ ದೊರೆಯುತ್ತದೆ. ಪ್ರಾಚ್ಯದ ವಿವೇಕವು ಗೂಢ ಅಲೌಕಿಕ ತತ್ವಗಳಲ್ಲಿಲ್ಲ, ಆದರೆ ಹೀಬ್ರಮತದ ಕಠಿಣ ಧರ್ಮಾನುಷ್ಠಾನದಿಂದ ಪೂರ್ಣ ಕುಲಗೆಟ್ಟ ಸಾಂಪ್ರದಾಯಿಕ ಕ್ರೈಸ್ತ ಧರ್ಮಕ್ಕಿಂತ ತುಂಬ ಆಳವೂ ಮತ್ತು ಸತ್ಯವೂ ಆದ ದಯೆಯಲ್ಲವೆ ಎಂಬ ಭಾವನೆ ಇಲ್ಲಿ ಉಂಟಾಗುತ್ತದೆ. ನಾಟಕವು ಪೂರ್ಣ ಕೃತಕ ವಾದರೂ ತುಂಬ ಹೃದಯಭೇದಕವಿದೆ; ಏಕೆಂದರೆ ವಾಸ್ತವಿಕತೆಯ ತೋರುಗಾಣಿಕೆ ಇಲ್ಲದೆ ವಾಸ್ತವವೇ ಆಗಿದೆ. ಕವಿಯು ಯಾರೇ ಇರಲಿ, ನಾಲ್ಕನೆಯ ಶತಮಾನದವನಿರಲಿ ಎಂಟನೆಯ ಶತಮಾನದವನಿರಲಿ ಆತನು ಗುಣಶಾಲಿಯೂ, ವಿವೇಕಿಯೂ ಆಗಿರಬೇಕು. ಆ ಗುಣವೂ ಮತ್ತು ವಿವೇಕವೂ ತುದ